ಹನಿಮೂನ್​ ಅವಕಾಶ ಈ ರಾಶಿಯವರಿಗಿದೆ, ಆದರೆ...

Nithya Bhavishya vvani
Published on

ಮೇಷ: ಆಕಸ್ಮಿಕ ಧರ್ಮಸಂಕಟದಲ್ಲಿ ಸಿಲುಕಬಹುದು. ಇದರಿಂದ ಹೊರಬರಲು ಬೇಗ ಪ್ರಮುಖ ನಿರ್ಧಾರವನ್ನು ತಳೆಯಿರಿ. ಶುಭಸಂಖ್ಯೆ: 5

ವೃಷಭ: ನವವಿವಾಹಿತರಿಗೆ ಮಧುಚಂದ್ರದ ಅವಕಾಶ ಕೂಡಿಬರಲಿದೆ. ವೃತ್ತಿಯ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಮರೆತುಬಿಡಿ. ಶುಭಸಂಖ್ಯೆ: 8

ಮಿಥುನ: ಅನಗತ್ಯ ಮಾತುಗಳನ್ನು ಆಡುವುದರಿಂದ ನೆಮ್ಮದಿಗೆ ಭಂಗ ಬರಲಿದೆ. ಸಾಲ ಮಾಡುವ ಪರಿಸ್ಥಿತಿಯೂ ಬರಬಹುದು. ಶುಭಸಂಖ್ಯೆ: 2

ಕಟಕ: ವಿವಿಧ ಮೂಲಗಳಿಂದ ಹಣಕಾಸು ಸಿಗಲಿದೆ. ಕೈಗೊಂಡ ಕಾರ್ಯಯೋಜನೆ ಪೂರ್ಣಗೊಳ್ಳಲು ಅವಕಾಶವೂ ಒದಗಿಬರಲಿದೆ. ಶುಭಸಂಖ್ಯೆ: 6

ಸಿಂಹ: ಮಾಟ-ಮಂತ್ರದ ಭೀತಿಯಿಂದ ನೀವು ಮಾಡುವ ಕಾರ್ಯಗಳಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ ಇರುತ್ತದೆ. ಶುಭಸಂಖ್ಯೆ: 7

ಕನ್ಯಾ: ನಾನಾ ಬಗೆಯ ಚಿಂತನೆಗಳು ನಿಮ್ಮನ್ನು ಹುರಿದುಂಬಿಸುವವು ಮತ್ತು ಮನದಲ್ಲಿ ಉತ್ಸಾಹವನ್ನು ಮೂಡಿಸಲಿವೆ. ಶುಭಸಂಖ್ಯೆ: 3

ತುಲಾ: ಸಹಪಾಲುದಾರರಾದ ನೀವು ವ್ಯವಹಾರದಲ್ಲಿ ನಷ್ಟವಾದರೆ ಅದನ್ನು ಭರಿಸಬೇಕಾದ ಸಂದರ್ಭ ಎದುರಾದೀತು. ಶುಭಸಂಖ್ಯೆ: 9

ವೃಶ್ಚಿಕ: ಕಚೇರಿಯಲ್ಲಿ ಕೆಲವು ಆಪಾದನೆಗಳು ಬಂದರೂ ಅವುಗಳಲ್ಲಿ ಹುರುಳಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗಲಿದೆ. ಶುಭಸಂಖ್ಯೆ: 4

ಧನಸ್ಸು: ಈಗ ನಡೆಸುತ್ತಿರುವ ವ್ಯವಹಾರ ಮತ್ತು ಅದರಿಂದ ಆಗಬಹುದಾದ ಲಾಭ-ನಷ್ಟಗಳ ಬಗ್ಗೆ ಚಿಂತಿಸಿದರೆ ಉತ್ತಮ. ಶುಭಸಂಖ್ಯೆ: 1

ಮಕರ: ವಯಸ್ಸಿಗೆ ಬಂದ ಮಕ್ಕಳನ್ನು ಚೆನ್ನಾಗಿ ನಡೆಸಿಕೊಳ್ಳಿ. ಇಲ್ಲವಾದರೆ ಅವರು ನಿಮ್ಮ ವಿರುದ್ಧವೇ ತಿರುಗಿಬಿದ್ದಾರು. ಶುಭಸಂಖ್ಯೆ: 5

ಕುಂಭ: ಯಾವ ಕಾರಣಕ್ಕೂ ಮಕ್ಕಳನ್ನು ದೂರಬೇಡಿ. ಸದ್ಯಕ್ಕೆ ಸ್ವಲ್ಪಮಟ್ಟಿಗೆ ಅವರ ಆದಾಯವೇ ನಿಮಗೆ ಆಧಾರವಾಗಲಿದೆ. ಶುಭಸಂಖ್ಯೆ: 2

ಮೀನ: ಸಹೋದ್ಯೋಗಿಗಳೊಡನೆ ನೀವು ಎಷ್ಟು ಸೌಹಾರ್ದ ಭಾವದಿಂದ ಇದ್ದರೂ ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net