

ಮೇಷ: ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಗಾದೆಮಾತಿನ ಪೂರ್ಣ ಅರ್ಥದ ಅನುಭವ ನಿಮಗೆ ಉಂಟಾಗಲಿದೆ. ಅದೃಷ್ಟಸಂಖ್ಯೆ: 3
ವೃಷಭ: ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕು ಎನ್ನುವಂಥ ಪರಿಸ್ಥಿತಿ ಎದುರಾಗಲಿದೆ. ಯಾವುದನ್ನೂ ನಿರಾಕರಿಸದಿರಿ. ಅದೃಷ್ಟಸಂಖ್ಯೆ: 1
ಮಿಥುನ: ಅತ್ತೆಗೊಂದು ಕಾಲ ಸೊಸೆಗೆ ಒಂದು ಕಾಲ ಎನ್ನುತ್ತಾರೆ. ಇದು ನಿಮ್ಮ ಕಾಲವಾದರೂ ಹೆಚ್ಚು ಮೆರೆದಾಡಬೇಡಿ. ಅದೃಷ್ಟಸಂಖ್ಯೆ: 9
ಕಟಕ: ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಏಳೆಯಿತು ಎಂಬಂತೆ ಒಮ್ಮತ ಮೂಡದೆ ಒದ್ದಾಟ ಎದುರಾಗಲಿದೆ. ಅದೃಷ್ಟಸಂಖ್ಯೆ: 4
ಸಿಂಹ: ಊರಿಗೆ ಒಂದು ದಾರಿಯಾದರೆ ಪೋರನಿಗೇ ಒಂದು ದಾರಿ ಎಂಬಂತೆ ನೀವಿಂದು ಪ್ರತ್ಯೇಕ ದಾರಿಯಲ್ಲಿದ್ದೀರಿ. ಅದೃಷ್ಟಸಂಖ್ಯೆ: 6
ಕನ್ಯಾ: ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಎಲ್ಲಕ್ಕೂ ಮೌನವಾಗಿ ಸಮ್ಮತಿಸುತ್ತೀರಿ. ಅದಕ್ಕೂ ಮೊದಲು ಯೋಚಿಸಿ. ಅದೃಷ್ಟಸಂಖ್ಯೆ: 5
ತುಲಾ: ಕೈಲಾಗದವನು ಮೈಯೆಲ್ಲ ಪರಚಿಕೊಂಡ ಎನ್ನುವಂತೆ ನಿಮ್ಮ ಸ್ಥಿತಿಯೂ ಹೆಚ್ಚು ಕಡಿಮೆ ಹಾಗೆಯೇ ಇರುತ್ತದೆ. ಅದೃಷ್ಟಸಂಖ್ಯೆ: 1
ವೃಶ್ಚಿಕ: ಬಡವರ ಮನೆ ಊಟ ಚೆನ್ನ ದೊಡ್ಡವರ ಮನೆ ನೋಟ ಮಾತ್ರ ಚೆನ್ನ ಎನ್ನುವ ಅನುಭವ ನಿಮಗುಂಟಾಗುತ್ತದೆ. ಅದೃಷ್ಟಸಂಖ್ಯೆ: 7
ಧನಸ್ಸು: ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಮಾತ್ರ ನಿಮಗೆ ಇಂದು ಕ್ಷೇಮ. ಇಲ್ಲವಾದರೆ ನಷ್ಟವೇ ಎದುರಾಗಲಿದೆ. ಅದೃಷ್ಟಸಂಖ್ಯೆ: 6
ಮಕರ: ಕೆಲಸ ಮಾಡುವ ಜಾಗದಲ್ಲಿ ನಿಮಗೆ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಗಾದೆಯ ಅರ್ಥ ತಿಳಿಯುತ್ತದೆ. ಅದೃಷ್ಟಸಂಖ್ಯೆ: 9
ಕುಂಭ: ಹೆತ್ತವರಿಗೆ ಹೆಗ್ಗಣ ಸಹ ಮುದ್ದು ಎಂದು ಗೊಣಗುತ್ತ ನೀವು ದಿನ ಕಳೆಯುತ್ತೀರಿ. ಅಸಹನೆ ತೋರಿಸಬೇಡಿ. ಅದೃಷ್ಟಸಂಖ್ಯೆ: 4
ಮೀನ: ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತೆ ಯಾರೋ ತಪ್ಪು ಮಾಡಿ ನಿಮ್ಮ ಮೇಲೆ ಹಾಕಬಹುದು. ಅದೃಷ್ಟಸಂಖ್ಯೆ: 5