ನಿತ್ಯ ಭವಿಷ್ಯ: ಈ ರಾಶಿಯ ಸಂಗೀತ ಸಾಧಕರಿಗೆ ವಿಶೇಷ ಸಂದರ್ಭ ಒದಗಿಬರಲಿದೆ

Nithya Bhavishya vvani
Published on

ಮೇಷ: ಆಧ್ಯಾತ್ಮಿಕ ಸಿದ್ಧಿಯನ್ನು ಪಡೆಯುವಂತಾಗಲು ಅಲೌಕಿಕ ಅನುಭವದಿಂದ ಅವಕಾಶ ಸಿಗಲಿದೆ. ಶ್ರೀ ಸೂರ್ಯ ಸ್ತುತಿ ಉತ್ತಮ. ಶುಭಸಂಖ್ಯೆ: 4

ವೃಷಭ: ನವವಿವಾಹಿತರ ಜೀವನಕ್ಕೆ ಬಂಧುಮಿತ್ರರಿಂದ ಹಾರ್ದಿಕವಾದ ಬೆಂಬಲವಿದೆ. ಮಾನಸಿಕ ನೆಮ್ಮದಿಯೂ ಇದೆ. ಶುಭಸಂಖ್ಯೆ: 8

ಮಿಥುನ: ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುವುದು ಖಂಡಿತ ಬೇಡ. ಕಾಯಿಲೆಯಾದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಶುಭಸಂಖ್ಯೆ: 1

ಕಟಕ: ಹೊಸಬರ ಸೂಚನೆಗಳಿಂದ ನಿಮ್ಮ ದೈನಂದಿನ ವ್ಯಾಪಾರಕಾರ್ಯಗಳಲ್ಲಿ ಅಧಿಕ ಲಾಭಕ್ಕೆ ದಾರಿ ದೊರೆಯಲಿದೆ. ಶುಭಸಂಖ್ಯೆ: 3

ಸಿಂಹ: ಕೆಲಸದ ಒತ್ತಡಗಳಿಂದಾಗಿ ಆಯಾಸವಿದ್ದರೂ ನಿಮ್ಮ ಕಾರ್ಯಕ್ಷಮತೆಯಿಂದ ರಫ್ತಿನ ಕಾರ್ಯದಲ್ಲಿ ಮುನ್ನಡೆಯಿದೆ. ಶುಭಸಂಖ್ಯೆ: 9

ಕನ್ಯಾ: ಕೌಟುಂಬಿಕ ಭಿನ್ನಾಭಿಪ್ರಾಯಗಳಿಗೆ ತಕ್ಕ ಪರಿಹಾರ ಲಭ್ಯ. ಕಿರಿಯರು ನೋಯಿಸಿದರೂ ಏನೇನೂ ಪ್ರತಿಕ್ರಿಯಿಸದಿರಿ. ಶುಭಸಂಖ್ಯೆ: 6

ತುಲಾ: ಸಂಗೀತಸಾಧಕರಿಗೆ ವಿಶೇಷ ಸಂದರ್ಭವಿದು. ಅಭಿಮಾನಿಗಳಿಂದ ವಿಶೇಷ ರೀತಿಯ ಮನ್ನಣೆಗೆ ಪಾತ್ರರಾಗುವಿರಿ. ಶುಭಸಂಖ್ಯೆ: 2

ವೃಶ್ಚಿಕ: ದಿನವಿಡೀ ಅಡಚಣೆಗಳೇ ಎದುರಾದರೂ ಧೃತಿಗೆಡದೆ ಮುನ್ನುಗ್ಗಿದರೆ ಅಂತ್ಯದಲ್ಲಿ ಗೆಲುವಿನ ನಗೆ ಬೀರಲಿದ್ದೀರಿ. ಶುಭಸಂಖ್ಯೆ: 5

ಧನಸ್ಸು: ಕೆಲಸದ ಸ್ಥಳದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಭಕ್ತಿಯಿಂದ ತಾಯಿ ದುರ್ಗೆಯ ಧ್ಯಾನ ಮಾಡಿ. ಶುಭಸಂಖ್ಯೆ: 7

ಮಕರ: ವಿವಿಧ ರಂಗಗಳಲ್ಲಿನ ನಿಮ್ಮ ಅನುಭವಗಳ ಕಾರಣದಿಂದಾಗಿ ಇತರರಿಗೆ ಮಾರ್ಗದರ್ಶನ ನೀಡುವ ಅವಕಾಶ ಬರಲಿದೆ. ಶುಭಸಂಖ್ಯೆ: 6

ಕುಂಭ: ವೃತ್ತಿಯಲ್ಲಿ ಅನಿರೀಕ್ಷಿತ ಮುಂಬಡ್ತಿ ಸಿಗುವುದರಿಂದ ಸಂತಸದಲ್ಲಿ ತೇಲಾಡುವ ಸಂದರ್ಭ ರೂಪುಗೊಳ್ಳಲಿದೆ. ಶುಭಸಂಖ್ಯೆ: 2

ಮೀನ: ಗ್ರಹಪೀಡೆಗಳಿದ್ದರೂ ಕೆಲಸದ ಸ್ಥಳದಲ್ಲಿ ಉದ್ವಿಗ್ನರಾಗದಿರಿ. ನಿಮ್ಮ ಹೊಸ ಚಿಂತನೆಗಳಿಗೆ ಹೆಚ್ಚಿನದಾದ ಮನ್ನಣೆಯಿದೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net