More

    VIDEO| ಮನೆಯಂಗಳದಲ್ಲಿ ಕಾರ್ಕಳ ಯುವತಿಯ ಕವರ್​ಡ್ರೈವ್​ಗೆ ಇಎಸ್​ಪಿಎನ್ ಕ್ರಿಕ್​ಇನ್ಪೋ ಫಿದಾ!

    ಮಂಗಳೂರು: ಮನೆಯಂಗಳದಲ್ಲಿ ಆಡುವ ಕ್ರಿಕೆಟ್​ನಲ್ಲಿ ಯುವತಿ ಹೊಡೆದ ಕವರ್ ಡ್ರೈವ್​ ಅನ್ನು ‘ಇಎಸ್​ಪಿಎನ್ ಕ್ರಿಕ್​ಇನ್ಪೋ’ ತನ್ನ ಫೇಸ್​ಬುಕ್ ಪೇಜ್​ನಲ್ಲಿ ಪ್ರಕಟಿಸಿದ್ದು, ಈ ಶಾಟ್​ಗೆ ಕ್ರಿಕೆಟ್ ಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆಯ ಜ್ಯೋತಿ ಪೂಜಾರಿ ಈ ಯುವತಿ. ಮುಂಬೈನಲ್ಲಿ ವಾಸವಾಗಿರುವ ಅವರು ಕರೊನಾ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಎರಡು ದಿನ ಹಿಂದೆ ಮನೆಯಂಗಳದಲ್ಲಿ ಕ್ರಿಕೆಟ್ ಆಡುವಾಗ ವಿಡಿಯೋ ಮಾಡಿದ್ದ ರಂಜಿತ್ ಪೂಜಾರಿ ತಮ್ಮ ಫೇಸ್​ಬುಕ್ ಖಾತೆಗೆ ಪೋಸ್ಟ್ ಮಾಡಿದ್ದರು. ಅದನ್ನು ಇಎಸ್​ಪಿಎನ್ ಕ್ರಿಕ್​ಇನ್ಪೋ ಗಮನಿಸಿ ತಮ್ಮ ಪೇಜ್​ನಲ್ಲಿ ಪ್ರಕಟಿಸಿದೆ. ಇದನ್ನೂ ಓದಿ: VIDEO| ಮದುವೆ ಬೆನ್ನಲ್ಲೇ ಮಯೂರಿ ಮೊದಲ ಪ್ರತಿಕ್ರಿಯೆ: ಅಭಿಮಾನಿಗಳಿಗೆ ಸಿಹಿ ಸುದ್ದಿ​!

    ‘ಸ್ಟೆಪ್ಪಿಂಗ್ ಔಟ್ ಟು ದ ಲೆಗ್​ಸೈಡ್ ಆಂಡ್ ಸ್ಮ್ಯಾಶಿಂಗ್ ಇಟ್ ಥ್ರೂದ ಕವರ್ಸ್’ ಎನ್ನುವ ಶೀರ್ಷಿಕೆ ಕೊಟ್ಟು ಇಂತಹ ಹೊಡೆತವನ್ನು ಹಿಂದೆ ಎಲ್ಲದರೂ ನೋಡಿದ್ದೀರಾ ಎಂದು ಕೇಳಿದೆ. ವೃತ್ತಿಪರ ಆಟಗಾರರಂತೆ ಯುವತಿ ಬಾಲನ್ನು ಕವರ್​ ಡ್ರೈವ್ ಮೂಲಕ ಬೌಂಡರಿಗೆ ಅಟ್ಟುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕ್ರಿಕೆಟ್ ಪ್ರಿಯರಿಂದ ವಿವಿಧ ಕ್ರಿಕೆಟಿಗರನ್ನು ಹೋಲಿಕೆ ಮಾಡಿ ಪ್ರತಿಕ್ರಿಯೆ ಬಂದಿದೆ. ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಿಸಿದ್ದು, ಹಲವು ಮಂದಿ ಷೇರ್, ಕಮೆಂಟ್, ಲೈಕ್ ಮಾಡಿದ್ದಾರೆ.

    ಮನೆಯಲ್ಲಿ ಟೈಮ್​ಪಾಸ್​ ಮಾಡಲು ಆಡುವಾಗ ರಂಜಿತ್ ವಿಡಿಯೋ ಮಾಡಿ ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿದ್ದರು. ನನ್ನ ಹೊಡೆತ ಇಷ್ಟೆಲ್ಲ ಫೇಮಸ್ ಆಗುತ್ತೆ ಎಂದು ಗೊತ್ತಿರಲಿಲ್ಲ. ಕ್ರಿಕೆಟ್ ಅಂದರೆ ಇಷ್ಟ, ಬಿಡುವಾದಾಗ ಮನೆಯವರೊಟ್ಟಿಗೆ ಆಡುತ್ತೇನೆ. ಧೋನಿ ಫೇವರಿಟ್ ಆಟಗಾರ.
    | ಜ್ಯೋತಿ ಪೂಜಾರಿ, ಯುವತಿ

    ತಂದೆಯಿಲ್ಲದ ಹೆಣ್ಣು ಮಗುವಿನ ಸಂಪೂರ್ಣ ವಿದ್ಯಾಭ್ಯಾಸಕ್ಕೆ ನೆರವಾದ ಕಿಚ್ಚ ಸುದೀಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts