

ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಉಂಟಾಗಬಹುದು. ಬಾಳಸಂಗಾತಿಯ ಬೇಜವಾಬ್ದಾರಿಯಿಂದಾಗಿ ಅಧಿಕವಾದ ಚಿಂತೆಯಾಗಲಿದೆ. ಶುಭಸಂಖ್ಯೆ: 4
ವೃಷಭ: ಹೊಸ ಸಂಪರ್ಕಗಳು ನೂತನ ಕಾರ್ಯವನ್ನು ಹಮ್ಮಿಕೊಳ್ಳಲು ಸಹಕಾರಿಯಾಗಲಿವೆ. ಗೆಳೆಯರ ಪ್ರಶಂಸೆಯೂ ಲಭ್ಯ. ಶುಭಸಂಖ್ಯೆ: 7
ಮಿಥುನ: ಕೆಲಸಕಾರ್ಯಗಳೆಲ್ಲವೂ ಸುಗಮವಾಗಿ ನೆರವೇರಲಿವೆ. ಬಂಧುಮಿತ್ರರು ಕೂಡ ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಶುಭಸಂಖ್ಯೆ: 2
ಕಟಕ: ವೃತ್ತಿಯಲ್ಲಿ ಅನುಕೂಲವಾಗಲಿದೆ. ನಿಮ್ಮ ಕನಸಿನ ಯೋಜನೆಗಳಿಗೆ ಹಿರಿಯರ ಹಸಿರು ನಿಶಾನೆ ದೊರೆಯಲಿದೆ. ಶುಭಸಂಖ್ಯೆ: 9
ಸಿಂಹ: ಬಂಧುಗಳಿಂದ ಕಿರಿಕಿರಿಯಾಗಬಹುದು. ಸಾಲ ಬಾಧೆ, ಮಹಿಳೆಯರಿಗೆ ಭವಿಷ್ಯದ ಚಿಂತೆ, ಒತ್ತಡಗಳು ಹೆಚ್ಚು. ಶುಭಸಂಖ್ಯೆ: 5
ಕನ್ಯಾ: ಮಕ್ಕಳೊಂದಿಗೆ ಅನಗತ್ಯ ತಿರುಗಾಟ ನಡೆಸುವಿರಿ. ನಿದ್ರಾಭಂಗ ಆಗಬಹುದು. ಒಂಟಿಯಾಗಿರಲು ಇಚ್ಛಿಸುವಿರಿ. ಶುಭಸಂಖ್ಯೆ: 1
ತುಲಾ: ಆರೋಗ್ಯದಲ್ಲಿ ವ್ಯತ್ಯಯ. ಪಾಲುದಾರಿಕೆ ವ್ಯವಹಾರದಲ್ಲಿ ಕಲಹವಾದೀತು. ಬಣ್ಣದ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ: 3
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಅಲ್ಪಸ್ವಲ್ಪ ತೊಡಕು ಉಂಟಾಗಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಶುಭಸಂಖ್ಯೆ: 8
ಧನಸ್ಸು: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂದು ಗೊತ್ತಿದ್ದರೂ ಎಡವುತ್ತಿದ್ದೀರಿ. ಸ್ನೇಹಿತರಿಗೆ ಕೊಟ್ಟ ಹಣ ಮರಳಿ ಬರುವ ಸಾಧ್ಯತೆಗಳು ಕಡಿಮೆ. ಶುಭಸಂಖ್ಯೆ: 6
ಮಕರ: ನಿಮ್ಮ ನಿರೀಕ್ಷೆ ಮೀರಿ ಕೆಲಸಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಖರ್ಚಿನಲ್ಲಿ ಮಾತ್ರ ಹಿಡಿತ ಇರಬೇಕು. ಶುಭಸಂಖ್ಯೆ: 7
ಕುಂಭ: ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಅನಗತ್ಯ ಚಿಂತೆಗಳನ್ನು ಬಿಡಿ. ನಿಮ್ಮ ಬರಹಗಳಿಗೆ ಬೇಡಿಕೆ ಬರಲಿದೆ. ಶುಭಸಂಖ್ಯೆ: 4
ಮೀನ: ವಿವಿಧ ಮೂಲಗಳಿಂದ ಬರಬೇಕಾದ ಹಣ ಕೈಸೇರಲಿದೆ. ಮೇಲಧಿಕಾರಿಗಳು ನಿಮ್ಮ ಜಾಣ್ಮೆಯನ್ನು ಹೊಗಳುವರು. ಶುಭಸಂಖ್ಯೆ: 2
ಇದನ್ನೂ ಓದಿ 10ನೇ ತರಗತಿ ಮಕ್ಕಳಿಗೆ ‘ದತ್ತ ಮೇಷ್ಟ್ರು’ ಪಾಠ!