

ಮೇಷ: ಗೊಂದಲಗಳಲ್ಲಿ ಸಿಲುಕುವ ಪರಿಸ್ಥಿತಿ ಎದುರಾಗಲಿದೆ. ಅದರಿಂದಾಗುವ ಮುಜುಗರ ತಪ್ಪಿಸಿಕೊಳ್ಳಲು ಒದ್ದಾಡುವಿರಿ. ಶುಭಸಂಖ್ಯೆ: 7
ವೃಷಭ: ನೆಮ್ಮದಿಯಿಂದ ಇರಲು ವಿವಿಧ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ದುರ್ಗೆಯ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 4
ಮಿಥುನ: ಗುರು ಹಿರಿಯರ ಆಶೀರ್ವಾದ ಬಹಳ ಮುಖ್ಯ. ಇತರರ ಮಾತುಗಳನ್ನೂ ಆಲಿಸುವ ವ್ಯವಧಾನವನ್ನು ಇಟ್ಟುಕೊಳ್ಳಿ. ಶುಭಸಂಖ್ಯೆ: 9
ಕಟಕ: ಹಿತಶತ್ರುಗಳು ಅಲ್ಲಸಲ್ಲದ ಅಪವಾದ ಹೊರಿಸಬಹುದು. ಅದು ಸುಳ್ಳೆಂದು ಗೊತ್ತಾದಾಗ ಕ್ಷಮೆ ಕೇಳುವರು. ಶುಭಸಂಖ್ಯೆ: 5
ಸಿಂಹ: ಮನಸ್ಸಿಗೆ ಬೇಸರವಾಗಿದೆ ಎಂಬ ಕಾರಣಕ್ಕೆ ಇತರರನ್ನು ನೋಯಿಸದಿರಿ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಶುಭಸಂಖ್ಯೆ: 8
ಕನ್ಯಾ: ವಿವಿಧ ಕಾರಣಗಳಿಂದ ಸಂತೋಷವಾಗುತ್ತದೆ. ಉತ್ಸಾಹದ ಭರದಲ್ಲಿ ತಪ್ಪುತಪ್ಪಾದ ಮಾಹಿತಿ ನುಸುಳದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 6
ಇದನ್ನೂ ಓದಿ: ಶಾಂತಿಗೆ ಮತ್ತೊಂದು ಹೆಸರು ಆನೆಗಳ ಈ ಕುಟುಂಬ!
ವೃಶ್ಚಿಕ: ಇತರರು ನಿಮ್ಮ ಹೆಸರನ್ನು ಕೆಡಿಸಲು ಪ್ರಯತ್ನಿಸಬಹುದು. ಎಚ್ಚರಿಕೆಯಿಂದಲೇ ನಿಮ್ಮ ವಿಚಾರಗಳನ್ನು ಮಂಡಿಸಿ. ಶುಭಸಂಖ್ಯೆ: 7
ಧನಸ್ಸು: ಮನಸ್ಸು ಉದ್ವಿಗ್ನವಾಗಿದ್ದರೆ ಕೈಗೊಂಡ ಕಾರ್ಯಗಳಲ್ಲಿ ತಪ್ಪಾಗಬಹುದು. ವಿಷ್ಣು ಸಹಸ್ರನಾಮ ಪಠಿಸಿ. ಶುಭಸಂಖ್ಯೆ: 2
ಮಕರ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಬರಲಿದೆ. ಸಾಂಸಾರಿಕ ಜೀವನವೂ ಉತ್ತಮ ಹಂತಕ್ಕೆ ಏರಲಿದೆ. ಶುಭಸಂಖ್ಯೆ: 4
ಕುಂಭ: ಯಾವು ಮುಖ್ಯ ಕಾರ್ಯವೂ ನೆರವೇರುತ್ತಿಲ್ಲ ಎಂಬ ಚಿಂತೆ ಬೇಡ. ಕುಲದೇವರನ್ನು ಸ್ಮರಿಸಿ ಹಸುವಿಗೆ ಆಹಾರ ನೀಡಿ. ಶುಭಸಂಖ್ಯೆ: 1
ಮೀನ: ಆಂತರಿಕ ಒತ್ತಡದಿಂದ ಪಾರಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಲಿದೆ. ಶಿವಧ್ಯಾನ ಮಾಡಿ. ಶುಭಸಂಖ್ಯೆ: 5