

ನವದೆಹಲಿ: ಆನೆಗಳು ಎಂದರೆ ಎಲ್ಲರಿಗೂ ಅದೇನೋ ಪ್ರೀತಿ, ಸೆಳೆತ. ಆದರೂ ಅವುಗಳ ಬಳಿಗೆ ಹೋಗಲು ಅದೇನೋ ಭಯ. ಕೆಲವೊಮ್ಮೆ ಸಾಕು ಆನೆಗಳು ಸೊಂಡಿಲೆತ್ತಿ ನಮ್ಮ ತಲೆ ಮೇಲೆ ಇಟ್ಟು ಆಶೀರ್ವದಿಸಿದರೆ ಅದೇನೋ ಆನಂದ.
ಇಂಥ ಆನೆಗಳು ಕಾಡಿನಂಚಿನಲ್ಲಿರುವ ಗ್ರಾಮ, ಊರುಗಳಿಗೆ ನುಗ್ಗಿ ಹೊಲಗದ್ದೆಗಳನ್ನು, ತೋಟಗಳನ್ನು ಹಾಳು ಮಾಡುವುದು, ಯಾರೆಂದರೆ ಅವರ ಮೇಲೆ ದಾಳಿ ಮಾಡಿ ಸಾಯಿಸುವುದನ್ನು ಕಂಡಾಗ ಎದೆನಡಗುತ್ತದೆ.
ಇಂಥದ್ದರಲ್ಲಿ ಆನೆಯ ದೊಡ್ಡ ಹಿಂಡೊಂದು ಅತ್ಯಂತ ಶಾಂತವಾಗಿ ಮರಿಯಾನೆಗಳೊಂದಿಗೆ ಹೆಜ್ಜೆ ಹಾಕಿದವು ಎಂದರೆ ನಂಬುವುದು ಕಷ್ಟವಾಗಬಹುದು. ಆದರೆ, ಇದು ನಿಜ. ಅರಣ್ಯ ಸೇವೆಗಳ ಅಧಿಕಾರಿ (ಐಎಫ್ಎಸ್) ಪ್ರವೀಣ್ ಕಾಸ್ವಾನ್ ಕಾಡಿನಲ್ಲಿ ಹಾದು ಹೋಗಿರುವ ರಸ್ತೆಯನ್ನು ಶಾಂತವಾಗಿ ದಾಟುತ್ತಿರುವ ಆನೆಗಳ ಹಿಂಡಿನ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಅಂದಾಜು 43 ಸೆಕೆಂಡ್ಗಳಿರುವ ವಿಡಿಯೋ ತುಣುಕಿಗೆ ಅವರು A train of #elephants. You will see some football rolling also ಎಂದು ಬರೆದು ಪೋಸ್ಟ್ ಮಾಡಿದ್ದಾರೆ.