ಈ ರಾಶಿಯವರು ಏನೋ ಹೇಳಲು ಹೋಗಿ ಇನ್ನೇನೋ ಹೇಳುತ್ತೀರಿ ಎಚ್ಚರ

Nitya-Bhavishya-vvani-1-2-1
Published on

ಮೇಷ: ಏನೋ ಹೇಳಲು ಹೋಗಿ ಇನ್ನೇನೋ ಹೇಳುತ್ತೀರಿ. ನೀವು ಸರಿಯಾಗಿ ಹೇಳಿದ್ದೀರಿ ಎಂದು ಶ್ಲಾಘಿಸುತ್ತಾರೆ. ಅದೃಷ್ಟಸಂಖ್ಯೆ: 7

ವೃಷಭ: ವ್ಯಾಯಾಮದ ಮಹತ್ವ ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತೆ ಶುರು ಮಾಡಿ. ಆಹಾರ ಸೇವನೆ ವಿಚಾರದಲ್ಲಿ ಎಚ್ಚರ. ಅದೃಷ್ಟಸಂಖ್ಯೆ: 1

ಮಿಥುನ: ನೀವು ಊಹಿಸದ ವಿಧಾನದಲ್ಲಿ ಉತ್ತಮ ಧನಲಾಭ ಆಗುತ್ತದೆ. ಹೊಸ ವಸ್ತ್ರ ಧಾರಣೆ ಮಾಡುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 9

ಕಟಕ: ಹೇಳಿದ ವಿಚಾರವನ್ನೇ ನಿಮ್ಮ ಮೇಲಧಿಕಾರಿ ಮತ್ತೆ ಮತ್ತೆ ಹೇಳುವುದು ಸಿಟ್ಟು ಬರಿಸಿದರೂ ಎದುರಾಡದೆ ಮೌನವಾಗಿರಿ. ಅದೃಷ್ಟಸಂಖ್ಯೆ: 2

ಸಿಂಹ: ಕುತ್ತಿಗೆನೋವಿನಿಂದ ಬಳಲುತ್ತೀರಿ. ಮಲಗಿರಬೇಕಾದುದು ಅನಿವಾರ್ಯ. ಅಡುಗೆ ಮನೆ ನೆಮ್ಮದಿ ನೀಡುತ್ತದೆ. ಅದೃಷ್ಟಸಂಖ್ಯೆ: 6

ಕನ್ಯಾ: ನನಗೆ ಸಾಲ ಕೊಟ್ಟು ಕಾಪಾಡು ಎಂದು ಕೇಳುತ್ತ ನಿಮ್ಮ ಸ್ನೇಹಿತ ಬರುವ ದಿನ. ಸಾಲಕ್ಕಿಂತ ದಾನ ಉತ್ತಮ. ಅದೃಷ್ಟಸಂಖ್ಯೆ: 9

ತುಲಾ: ಎಂದೋ ನಿಮಗೆ ಉಂಟಾದ ಅವಮಾನ ನೆನಪಾಗಿ ಬಹಳ ದುಃಖ ಆಗಬಹುದು. ಆ ಯೋಚನೆ ಮಾಡದಿರಿ. ಅದೃಷ್ಟಸಂಖ್ಯೆ: 4

ವೃಶ್ಚಿಕ: ಮಕ್ಕಳ ಆರೋಗ್ಯ ಬಹಳ ದಿನಗಳ ನಂತರ ಸರಿಹೋಗುತ್ತದೆ. ಇದರಿಂದ ದಿನವಿಡೀ ಸಂತೋಷವಾಗಿರುತ್ತೀರಿ. ಅದೃಷ್ಟಸಂಖ್ಯೆ: 7

ಧನಸ್ಸು: ದೊಡ್ಡ ಕೆಲಸ ಆಗುವಾಗ ಚಿಕ್ಕ ನಷ್ಟಗಳು ಅನಿವಾರ್ಯ ಎಂದು ಹೇಳಿ ನಿಮಗೆ ಮೋಸ ಮಾಡಬಹುದು. ಎಚ್ಚರ. ಅದೃಷ್ಟಸಂಖ್ಯೆ: 5

ಮಕರ: ಸ್ನೇಹಿತ ನಿಮಗೆ ಸುಳ್ಳು ಹೇಳಿದ ಎಂದು ಗೊತ್ತಾಗುತ್ತದೆ. ಸಮಯ ಮೀರಿದ್ದರಿಂದ ಏನೂ ಮಾಡಲಾಗದು. ಅದೃಷ್ಟಸಂಖ್ಯೆ: 6

ಕುಂಭ: ನೀವು ಸ್ಥೂಲವಾಗುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಪರಿಚಿತರೂ ಅದನ್ನೇ ತಿಳಿಸುವುದರಿಂದ ಚಿಂತೆ. ಅದೃಷ್ಟಸಂಖ್ಯೆ: 1

ಮೀನ: ಯಾರೋ ಮುಖ್ಯವಾದವರು ಮೋಸ ಮಾಡಿದ ಪರಿಣಾಮ ಎಲ್ಲ ಕೆಲಸಗಳನ್ನು ನೀವೇ ಮಾಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net