More

    ನಿಮ್ಮ ಸಮೀಪದಲ್ಲಿರೋ ಕರೊನಾ ಸೋಂಕಿತನ ಬಗ್ಗೆ ಎಚ್ಚರಿಸಲಿದೆ ಕೇಂದ್ರ ಸರ್ಕಾರದ ನೂತನ ‘ಆರೋಗ್ಯ ಸೇತು’ ಆ್ಯಪ್​!

    ನವದೆಹಲಿ: ಕರೊನಾ ವೈರಸ್​ ಸೋಂಕಿತ ಪ್ರಕರಣಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಗುರುವಾರ “ಆರೋಗ್ಯ ಸೇತು” ಹೆಸರಿನ ಮೊಬೈಲ್​ ಅಪ್ಲಿಕೇಶನ್​ ಅನ್ನು ಉದ್ಘಾಟಿಸಿದೆ.

    ಆರೋಗ್ಯ ಸೇತು ಆ್ಯಪ್​ ಅನ್ನು ಆ್ಯಂಡ್ರಾಯ್ಡ್(Android) ಮತ್ತು ಐಒಎಸ್(iOS) ಬಳಕೆದಾರರು ಉಪಯೋಗಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡಿಯಲ್ಲಿ ಬರುವ ರಾಷ್ಟ್ರೀಯ ಮಾಹಿತಿ ಕೇಂದ್ರ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಿದೆ. ಬಳಕೆದಾರರು ಸೋಂಕಿತರ ಸಮೀಪವಿದ್ದರೆ ಆ್ಯಪ್ ಎಚ್ಚರಿಕೆ ಸಂದೇಶ ನೀಡಲಿದೆ.​

    ಆ್ಯಪ್​ ವಿವರಣೆಯಲ್ಲಿರುವಂತೆ ಕೋವಿಡ್​-19 ತಡೆಗಟ್ಟಲು ಸೂಕ್ತವಾದ ಸಲಹೆ ಮತ್ತು ಒಳ್ಳೆಯ ಅಭ್ಯಾಸಗಳ ಬಗ್ಗೆ ಪೂರ್ವಭಾವಿಯಾಗಿ ಬಳಕೆದಾರರಿಗೆ ಮಾಹಿತಿ ನೀಡುವುದು ಆ್ಯಪ್​ನ ಗುರಿಯಾಗಿದೆ. ಜನರು ಕರೊನಾ ವೈರಸ್ ಸೋಂಕಿನ ಅಪಾಯವನ್ನು ನಿರ್ವಹಿಸಲು ಆರೋಗ್ಯ ಸೇತು ಆ್ಯಪ್ ಅನುವು ಮಾಡಿಕೊಡುತ್ತದೆ. ಅತ್ಯಾಧುನಿಕ ಬ್ಲೂಟೂತ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಇತರರೊಂದಿಗಿನ ಸಂವಹನದ ಆಧಾರದ ಮೇಲೆ ಆ್ಯಪ್​ ಲೆಕ್ಕಾಚಾರ ಮಾಡುತ್ತದೆ.

    ಬಳಕೆದಾರ ಸ್ನೇಹಿ ಪ್ರಕ್ರಿಯೆಯೊಂದಿಗೆ ಸ್ಮಾರ್ಟ್​ ಫೋನ್​ಗಳಲ್ಲಿ ಆ್ಯಪ್​ ಇನ್​ಸ್ಟಾಲ್​ ಮಾಡಿದ ತಕ್ಷಣ ಸಮೀಪದಲ್ಲಿರುವ ಆರೋಗ್ಯಸೇತುವಿನಿಂದ ಸ್ಥಾಪಿಸಲಾದ ಇತರೆ ಸಾಧನಗಳನ್ನು ಅದು ಪತ್ತೆ ಮಾಡುತ್ತದೆ. ಯಾರಾದರೂ ಕರೊನಾ ಸೋಂಕಿಗೆ ತುತ್ತಾಗಿದ್ದರೆ​, ಅತ್ಯಾಧುನಿಕ ಮಾನದಂಡಗಳ ಆಧಾರದ ಮೇಲೆ ಸೋಂಕಿನ ಪ್ರಭಾವವನ್ನು ಆ್ಯಪ್​ ಲೆಕ್ಕ ಹಾಕಿ ಮಾಹಿತಿ ನೀಡುತ್ತದೆ.

    ಕೋವಿಡ್​ -19 ಸೋಂಕಿನ ಹರಡುವಿಕೆಯ ಅಪಾಯವನ್ನು ನಿರ್ಣಯಿಸಲು ಮತ್ತು ಅಗತ್ಯವಿರುವಲ್ಲಿ ಪ್ರತ್ಯೇಕತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲು ಈ ಆ್ಯಪ್​​ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಆ್ಯಪ್​ನಲ್ಲಿ ಖಾಸಗಿ ಮಾಹಿತಿಗೆ ರಕ್ಷಣೆಯನ್ನು ನೀಡಲಾಗಿದ್ದು, ಆ್ಯಪ್​ 11 ಭಾಷೆಗಳಲ್ಲಿ ಲಭ್ಯವಿದೆ. (ಏಜೆನ್ಸೀಸ್​)

    ಮಹಿಳಾ ಜನ್​ಧನ್​ ಖಾತೆಗೆ ಮಾಸಿಕ ತಲಾ 500 ರೂ. ಪಾವತಿಸುವ ಪ್ರಕ್ರಿಯೆ ನಾಳೆಯಿಂದ ಆರಂಭ

    ‘ನಾಳೆ ಬೆಳಗ್ಗೆ 9ಗಂಟೆಗೆ ದೇಶದ ಜನರಿಗೆ ಒಂದು ವಿಡಿಯೋ ಸಂದೇಶ ನೀಡಲಿದ್ದೇನೆ…’ : ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts