ಈ ರಾಶಿಯವರು ಇಂದು ವಾಹನ ಚಾಲನೆ ಮಾಡಿದರೆ ಸಮಸ್ಯೆ ಎದುರಿಸುತ್ತಾರೆ

Nitya-Bhavishya-vvani-1-2-1
Published on

ಮೇಷ: ಸಹೋದರರ ವಿಚಾರದಲ್ಲಿ ತಾಯಿ ನಿಮ್ಮ ಪರವಾಗಿ ಮಾತನಾಡಲಿಲ್ಲ ಎನ್ನುವ ಬೇಸರ ಕಾಡುತ್ತಿರುತ್ತದೆ. ಅದೃಷ್ಟಸಂಖ್ಯೆ: 9

ವೃಷಭ: ಧನ್ಯವಾದ ಬಯಸುತ್ತಿರುವ ನಿಮಗೆ ನಿಂದನೆ ಸಿಕ್ಕು ಸ್ವಲ್ಪ ಕಂಗಾಲಾಗುತ್ತೀರಿ. ಸಂಜೆ ಎಲ್ಲ ಸರಿ ಹೋಗುತ್ತದೆ. ಅದೃಷ್ಟಸಂಖ್ಯೆ: 1

ಮಿಥುನ: ವಾಹನಚಾಲನೆ ಸಮಸ್ಯೆ ಅಥವಾ ನೋವು ತರಬಹುದು. ವಾಹನಚಾಲನೆ ಮಾಡದೆ ಮನೆಯಲ್ಲಿದ್ದರೆ ಕ್ಷೇಮ. ಅದೃಷ್ಟಸಂಖ್ಯೆ: 2

ಕಟಕ: ಕೆಲವರು ನಿಮ್ಮ ಪರೀಕ್ಷೆ ಮಾಡುತ್ತಾರೆ. ಅವರು ಪರೀಕ್ಷೆ ಮಾಡುತ್ತಿರುವ ವಿಚಾರ ತಡವಾಗಿ ತಿಳಿಯುತ್ತದೆ. ಅದೃಷ್ಟಸಂಖ್ಯೆ: 6

ಸಿಂಹ: ಬೇಗ ಬೇಗ ಕೆಲಸ ಮುಗಿಸಿಕೊಳ್ಳ ಬೇಕು ಎನ್ನುವ ಆತುರ ನಿಮ್ಮಿಂದ ಎಡವಟ್ಟು ಮಾಡಿಸುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 5

ಕನ್ಯಾ: ಸ್ವಲ್ಪ ಪ್ರಯತ್ನಿಸಿದರೂ ನಿಮ್ಮ ಅನಾರೋಗ್ಯಕ್ಕೆ ಉತ್ತಮ ಔಷಧ ದೊರೆಯಲಿದೆ. ಹೊರಗೆ ಹೋಗಬೇಕಿಲ್ಲ. ಅದೃಷ್ಟಸಂಖ್ಯೆ: 9

ತುಲಾ: ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಸ್ವೀಕರಿಸಬೇಡಿ. ಅನಿವಾರ್ಯವಾದರೆ ಇನ್ನೊಬ್ಬರ ಸಹಾಯ ಪಡೆಯಿರಿ. ಅದೃಷ್ಟಸಂಖ್ಯೆ: 4

ವೃಶ್ಚಿಕ: ನಿಮ್ಮಿಂದಾಗಿ ಇತರರಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗುತ್ತದೆ. ಸಂಜೆ ವೇಳೆಗೆ ಆರೋಪವೂ ಬರಬಹುದು. ಅದೃಷ್ಟಸಂಖ್ಯೆ: 2

ಧನಸ್ಸು: ಹಣದ ವಿಚಾರ ಯೋಚಿಸುವಂತೆ ಮಾಡುತ್ತದೆ. ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಸಾಲಗಾರರಿಂದ ರಕ್ಷಿಸಲಿದೆ. ಅದೃಷ್ಟಸಂಖ್ಯೆ: 3

ಮಕರ: ಬೆಲೆಬಾಳುವ ವಸ್ತುಗಳು ನಿಮ್ಮನ್ನು ಆಕರ್ಷಿಸಲಿವೆ. ಆದರೆ ನಿಮ್ಮ ಕಿಸೆ ಅದರ ಖರೀದಿಗೆ ಒಪ್ಪಿಗೆ ನೀಡದು. ಅದೃಷ್ಟಸಂಖ್ಯೆ: 7

ಕುಂಭ: ಬಹಳ ಸಹಾಯ ಮಾಡುತ್ತಿದ್ದ ಹಳೆಯ ಸ್ನೇಹಿತರು ನೆನಪಾಗುತ್ತಾರೆ. ಅವರ ಅನುಪಸ್ಥಿತಿ ಕಾಡಲಿದೆ. ಅದೃಷ್ಟಸಂಖ್ಯೆ: 7

ಮೀನ: ಎಲ್ಲ ಸರಿಯಾಗಿ ನಡೆಯುತ್ತಿರುತ್ತದೆ. ಆದರೆ ಕೆಲವು ಸನ್ನಿವೇಶಗಳನ್ನು ನೋಡಿ ಪ್ರಶ್ನೆ ಕೇಳಿ ಕೆಟ್ಟವರಾಗುತ್ತೀರಿ. ಅದೃಷ್ಟಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net