ದೆಹಲಿಯ ನಿಜಾಮುದ್ದೀನ್​ ಜಮಾತ್​ ಪ್ರಾರ್ಥನಾ ಮಂದಿರದಲ್ಲಿ ಭಾಗವಹಿಸಿದ್ದವರ ಸಂಖ್ಯೆ ಗೊತ್ತಾದರೆ ಬೆಚ್ಚಿ ಬೀಳುತ್ತೀರಾ!

jamat masjid delhi mar 31
Published on

ಬೆಂಗಳೂರು : ದೆಹಲಿಯ ನಿಜಾಮುದ್ದೀನ್​ ಜಮಾತ್​ ಪ್ರಾರ್ಥನಾ ಮಂದಿರದಲ್ಲಿ ನೆಡೆದ ಸಭೆಯಲ್ಲಿ ರಾಜ್ಯದ 54 ಮಂದಿ ಭಾಗವಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

ಪ್ರಾರ್ಥನಾ ಸಭೆಯಲ್ಲಿ ಬೀದರ್​, ಗುಲ್ಬರ್ಗ ಹಾಗೂ ಬಳ್ಳಾರಿ ಜಿಲ್ಲೆಯವರು ಭಾಗವಹಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ. ಇವರಲ್ಲಿ ಬೀದರ್​ನ 26 ಮಂದಿಯನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಉಳಿದವರ ಪತ್ತೆ ಕೆಲಸ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೆಹಲಿಯ ನಿಜಾಮುದ್ದೀನ್​ ಜಮಾತ್​ ಪ್ರಾರ್ಥನಾ ಮಂದಿರದಲ್ಲಿ ಮಾ.1ರಿಂದ 15ರವರೆಗೆ ಸಭೆ ನಡೆದಿತ್ತು. ಸಭೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗಿದ್ದ 5 ಮಂದಿ ತೆಲಂಗಾಣದಲ್ಲಿ ಕರೊನಾ ಸೋಂಕು ಹರಡಿ ಮೃತಪಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net