

ಮೇಷ: ಮಿತ್ರರಲ್ಲಿ ಮನಸ್ತಾಪ. ಅನಿರೀಕ್ಷಿತ ಪ್ರಯಾಣ. ವಸ್ತ್ರ ವ್ಯಾಪಾರಿಗಳಿಗೆ ಲಾಭಕ್ಕೆ ಮೋಸವಿಲ್ಲ. ಶತ್ರುಬಾಧೆಯಿಂದ ಹೊರಬರುವಿರಿ. ಶುಭಸಂಖ್ಯೆ: 5
ವೃಷಭ: ಕಾರ್ಯಸಾಧನೆಗಾಗಿನ ಪ್ರಯತ್ನ ಫಲಿಸಲಿದೆ. ಪರಸ್ಥಳ ವಾಸದ ಸಂದರ್ಭ. ಉದ್ಯೋಗದಲ್ಲಿ ಪ್ರಗತಿ. ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 3
ಮಿಥುನ: ಸಾರ್ವಜನಿಕ ರಂಗದ ಮಹಿಳೆಯರಿಗೆ ವಿಶೇಷ ದಿನ. ಸಾಲಬಾಧೆ ಕಾಡೀತು. ಹೋಟೆಲ್ ವ್ಯಾಪಾರಿಗಳಿಗೆ ಕೆಲಸಗಾರರ ಅಭಾವ. ಶುಭಸಂಖ್ಯೆ:1
ಕಟಕ: ಬ್ಯಾಂಕ್ ಕೆಲಸಗಳಲ್ಲಿ ಯಶಸ್ಸು. ಸ್ತ್ರೀಯರಿಂದ ಲಾಭ ಬರುವುದು. ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಆರ್ಥಿಕ ಸಹಾಯ. ಶುಭಸಂಖ್ಯೆ: 8
ಸಿಂಹ: ವಾಹನದ ತೊಂದರೆಯಿಂದ ಪ್ರಯಾಣ ವಿಳಂಬ. ಸ್ಟೇಷನರಿ ವ್ಯಾಪಾರದಲ್ಲಿ ನಷ್ಟ. ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭ. ಶುಭಸಂಖ್ಯೆ: 6
ಕನ್ಯಾ: ಭೂ ವ್ಯವಹಾರದಿಂದ ಸಂಪಾದನೆ. ಮೂಗಿನ ಮೇಲೆ ಕೋಪದಿಂದ ವೈರತ್ವ ಕಟ್ಟಿಕೊಳ್ಳುವಿರಿ. ಗುರು-ಹಿರಿಯರಿಂದ ಬೋಧನೆ. ಶುಭಸಂಖ್ಯೆ: 5
ತುಲಾ: ಭೂ ಸಂಬಂಧೀ ವ್ಯವಹಾರಗಳಲ್ಲಿ ವಿವಾದ ಆದೀತು, ಎಚ್ಚರ. ಪರರ ಮಾತಿಗೆ ಕಿವಿ ಕೊಡಬೇಡಿ. ಕೆಲಸ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 4
ವೃಶ್ಚಿಕ: ಉದ್ಯೋಗಸ್ಥ ಮಹಿಳೆಯರಿಗೆ ಮೇಲಧಿಕಾರಿಯ ಕಿರುಕುಳ. ಸ್ಥಾನ ಭ್ರಷ್ಟವಾಗುವ ಭಯ. ಏಲಕ್ಕಿ, ಅಡಿಕೆ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 7
ಧನಸ್ಸು: ಮಗಳ ವಿವಾಹ ಕಾರ್ಯದಲ್ಲಿ ಯಶಸ್ಸು. ಗೃಹ ಖರೀದಿಯಲ್ಲಿ ಮೋಸ. ಮನೆಯಲ್ಲಿ ಅಶಾಂತಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು. ಶುಭಸಂಖ್ಯೆ: 9
ಮಕರ: ಆಸ್ತಿ ವಿವಾದ. ಉನ್ನತ ಉದ್ಯೋಗದಲ್ಲಿ ಬಡ್ತಿ . ಅನ್ಯರಿಗೆ ಉಪಕಾರ ಮಾಡುವಿರಿ. ಜ್ಯುವೆಲ್ಲರಿ ವ್ಯಾಪಾರದಲ್ಲಿ ಮೋಸವಾದೀತು. ಶುಭಸಂಖ್ಯೆ: 2
ಕುಂಭ: ಸಂಗಾತಿಯೊಂದಿಗೆ ವಿನಾಕಾರಣ ಕಲಹ. ವೈದ್ಯರ ಸಲಹೆ ನಿರ್ಲಕ್ಷಿಸಿ ಅನಾರೋಗ್ಯ ಸಮಸ್ಯೆ. ಕೆಲಸ ಕಾರ್ಯ ಗಳಲ್ಲಿ ಅಡೆ-ತಡೆ. ಶುಭಸಂಖ್ಯೆ: 4
ಮೀನ: ಅಪಕೀರ್ತಿ ಬಂದೀತು. ಮಗನ ವಿವಾಹಕ್ಕೆ ಉತ್ತಮ ವಾತಾವರಣ. ಹಿತಶತ್ರುಗಳಿಂದತೊಂದರೆ. ಸಹೋದರಿಯರೊಂದಿಗೆ ಕಲಹ. ಶುಭಸಂಖ್ಯೆ: 3