ಯುಜಿಸಿ-ನೆಟ್ ಪರೀಕ್ಷೆ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ: ಸುಪ್ರೀಂಕೋರ್ಟ್ ಆದೇಶ

sc
Published on

ನವದೆಹಲಿ: ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ನಂತರ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ( ಜುಲೈ 29) ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಗೆ ನಿರಾಕರಿಸುತ್ತಿರುವುದು ಅರ್ಜಿಯಲ್ಲಿರುವ ಮನವಿಯ ಕಾರಣದಿಂದ ಅಲ್ಲ. ಸಂತ್ರಸ್ತ ವಿದ್ಯಾರ್ಥಿಗಳ ಬದಲಾಗಿ ವಕೀಲರು ಪಿಐಎಲ್ ಸಲ್ಲಿಸಿರುವುದರಿಂದ ಎಂದು ಹೇಳಿದೆ.

"ನೀವು (ವಕೀಲರು) ಏಕೆ ಬಂದಿದ್ದೀರಿ? ವಿದ್ಯಾರ್ಥಿಗಳೇ ಇಲ್ಲಿಗೆ ಬರಲಿ" ಎಂದು ಸಿಜೆಐ ವಕೀಲರಿಗೆ ತರಾಟೆಗೆ ತೆಗೆದುಕೊಂಡಿತು. ಕಾನೂನು ವಿಷಯಗಳತ್ತ ಗಮನಹರಿಸಿ ಮತ್ತು ಇಂತಹ ವಿಷಯಗಳನ್ನು ಸಂತ್ರಸ್ತರಿಗೆ ಬಿಟ್ಟುಬಿಡಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಕೀಲ ಉಜ್ಜವಲ್ ಗೌರ್ ಅವರಿಗೆ ನ್ಯಾಯಪೀಠವು ತಿಳಿಸಿತು.

ಯುಜಿಸಿ-ನೆಟ್ ಪರೀಕ್ಷೆಯ ಸಮಗ್ರತೆಗೆ ಧಕ್ಕೆಯುಂಟಾಗಿರಬಹುದು ಎಂಬ ಒಳಹರಿವಿನ ನಂತರ ಅದನ್ನು ರದ್ದುಗೊಳಿಸುವ ಕೇಂದ್ರ ಶಿಕ್ಷಣ ಸಚಿವಾಲಯ ಜೂನ್ 19 ರಂದು ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದು ಮಾಡಿ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net