

ಮೇಷ: ಯಾವುದೇ ಕಾರಣವಿಲ್ಲದೆ ಸಂಗಾತಿಯನ್ನು ದ್ವೇಷ ಮಾಡಬೇಡಿ. ಮನೆಯ ಕೆಲಸಗಳನ್ನು ಮನಃಪೂರ್ವಕವಾಗಿ ಮಾಡುವಿರಿ. ಶುಭಸಂಖ್ಯೆ: 8
ವೃಷಭ: ದೇವರಲ್ಲಿ ಭಕ್ತಿ ಹೆಚ್ಚಾಗುವುದು. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಹೊಸ ವಾಹನ ಖರೀದಿಗೆ ತೊಂದರೆಯಾಗುವುದು. ಶುಭಸಂಖ್ಯೆ: 1
ಮಿಥುನ: ಕೃಷಿಕರಿಗೆ ಖರೀದಿಯಲ್ಲಿ ಮೋಸವಾದೀತು. ಕಚೇರಿಯಲ್ಲಿ ಕಠೋರವಾಗಿ ವರ್ತಿಸುವಿರಿ. ಅನ್ಯರಿಗೆ ಉಪಕಾರ ಮಾಡುವಿರಿ. ಶುಭಸಂಖ್ಯೆ:5
ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಉದ್ಯೋಗ ಅರಸಿ ಪ್ರಯಾಣ. ಶುಭಸಂಖ್ಯೆ: 4
ಸಿಂಹ: ರೆಸ್ಟೋರೆಂಟ್ ವ್ಯಾಪಾರದಲ್ಲಿ ನಷ್ಟ. ಗುರುಗಳ ಭೇಟಿ. ಬಹುಜನರಲ್ಲಿ ವಿರೋಧ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಶುಭಸಂಖ್ಯೆ: 6
ಕನ್ಯಾ: ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸ್ಥಿತಿ. ನಾನಾ ರೀತಿಯ ಸಂಪಾದನೆ. ಸ್ತ್ರೀಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಶುಭಸಂಖ್ಯೆ:3
ತುಲಾ: ಆರ್ಥಿಕ ಬಿಕ್ಕಟ್ಟು. ಆಸ್ತಿ ವಿಭಾಗ ವೇಳೆಯಲ್ಲಿ ಸಮಸ್ಯೆ. ನಿಮಗೆ ವಹಿಸಿದ ಜವಾಬ್ದಾರಿಯ ಕೆಲಸಗಳನ್ನು ಶ್ರಮವಹಿಸಿ ಮಾಡುವಿರಿ. ಶುಭಸಂಖ್ಯೆ:9
ವೃಶ್ಚಿಕ: ಜಲಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಕೈಗೊಂಡ ಕೆಲಸಗಳಲ್ಲಿ ವಿಘ್ನ. ಗುಪ್ತವಾಗಿ ಪಾಪಕಾರ್ಯ ಮಾಡುವ ಯೋಚನೆ ಬೇಡ. ಶುಭಸಂಖ್ಯೆ:5
ಧನಸ್ಸು: ಸಕಲರೊಡನೆ ಪ್ರೀತಿಯಿಂದ ಇರುವಿರಿ. ಕುಲ ದೇವರ ದೇವಾಲಯಕ್ಕೆ ಭೇಟಿ ನೀಡುವಿರಿ. ಅನಿರೀಕ್ಷಿತ ತಿರುವುಗಳುಎದುರಾದಾವು. ಶುಭಸಂಖ್ಯೆ:1
ಮಕರ: ಕೊಟ್ಟ ಹಣ ತಿರುಗಿ ಬಂದು ಸಮಾಧಾನ. ಮನೆ ಬದಲಾವಣೆಗೆ ಸೂಕ್ತ ಸಮಯ. ಸಭೆಯಲ್ಲಿ ಧೈರ್ಯವಾಗಿ ಮಾತನಾಡುವಿರಿ. ಶುಭಸಂಖ್ಯೆ:1
ಕುಂಭ: ಗುರು ಹಿರಿಯರಲ್ಲಿ ಭಕ್ತಿ ತಾಳುವಿರಿ. ವಿಚ್ಛೇದಿತರಿಗೆ ವಿವಾಹ ಯೋಗ. ತಂದೆಗೆ ಅನಾರೋಗ್ಯ. ಸರ್ಕಾರಿ ಉದ್ಯೋಗ ಲಭಿಸಲಿದೆ. ಶುಭಸಂಖ್ಯೆ:3
ಮೀನ: ಷೇರು ವ್ಯವಹಾರದಲ್ಲಿ ಆಸಕ್ತಿ ತಾಳುವಿರಿ. ಸಜ್ಜನರ ಆಶೀರ್ವಾದ ಸಿಗಲಿದೆ. ಆಟಗಾರರಿಗೆ ಉತ್ತಮ ಗೌರವ ಮನ್ನಣೆ ಸಿಗುವುದು. ಶುಭಸಂಖ್ಯೆ:8