ಜಾರಿ ನಿರ್ದೇಶನಾಲಯ ನೂತನ ನಿರ್ದೇಶಕರಾಗಿ ರಾಹುಲ್ ನವೀನ್ ನೇಮಕ

irs
Published on

ನವದೆಹಲಿ: ಜಾರಿ ನಿರ್ದೇಶನಾಲಯದ ಉಸ್ತುವಾರಿ ನಿರ್ದೇಶಕರಾಗಿರುವ ಹಿರಿಯ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್ ಅವರನ್ನು ಫೆಡರಲ್ ಆ್ಯಂಟಿ ಮನಿ ಲಾಂಡರಿಂಗ್ ಏಜೆನ್ಸಿಯ ಪೂರ್ಣಾ ಅವಧಿ ನಿರ್ದೇಶಕರಾಗಿ ಇಂದು (ಆಗಸ್ಟ್​ 14) ನೇಮಿಸಿಲಾಗಿದೆ.

ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಹೊರಡಿಸಿದ ಆದೇಶದಲ್ಲಿ, ಆದಾಯ ತೆರಿಗೆ ಕೇಡರ್‌ನ 1993ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ರಾಹುಲ್ ನವೀನ್ ಅವರ ನೇಮಕಾತಿಯನ್ನು ಎರಡು ವರ್ಷಗಳ ಅವಧಿಗೆ ಮಾಡಲಾಗಿದೆ.

57 ವರ್ಷದ ರಾಹುಲ್ ನವೀನ್ ನವೆಂಬರ್ 2019ರಲ್ಲಿ ವಿಶೇಷ ನಿರ್ದೇಶಕರಾಗಿ ಜಾರಿ ನಿರ್ದೇಶನಾಲಯಕ್ಕೆ ಸೇರಿದರು. ಅವರ ಹಿಂದಿನ ನಿರ್ದೇಶಕರಾಗಿದ್ದ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯು ಕಳೆದ ವರ್ಷ ಸೆಪ್ಟೆಂಬರ್ 15ರಂದು ಕೊನೆಗೊಂಡ ನಂತರ ರಾಹುಲ್ ನವೀನ್ ಅವರನ್ನು ಇಡಿಯ ಹಂಗಾಮಿ ನಿರ್ದೇಶಕರಾಗಿ ನೇಮಿಸಲಾಯಿತು.

1984ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ (ಹಾಲಿ ನಿರ್ದೇಶಕ) ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ 1993 ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್ ಇಡಿ ಯ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರನ್ನು ಪೂರ್ಣಾವಧಿ ನಿರ್ದೇಶಕರಾಗಿ ನೇಮಿಸಲಾಗಿದೆ.

ಜಾರಿ ನಿರ್ದೇಶಾನಲಯದ ನಿರ್ದೇಶಕ ಹುದ್ದೆಗೇರಿದ ಅತ್ಯಂತ ಹಿರಿಯ ಅಧಿಕಾರಿ ಎಂಬ ಖ್ಯಾತಿಗೆ ರಾಹುಲ್ ನವೀನ್‌ ಅವರಿಗಿದೆ. ನವೀನ್ ಅವರು ಜಾರಿ ನಿರ್ದೇಶಾನಲಯದ ಪ್ರಧಾನ ಕಚೇರಿಯ ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net