ಚಾಣಕ್ಯ ನೀತಿ: ಮಧ್ಯಾಹ್ನದ ನಿದ್ರೆ ಒಳ್ಳೆಯದೋ! ಕೆಟ್ಟದ್ದೋ? Chanakya Niti

chanikya-niti-69145d7a7c826
Published on

Chanakya Niti: ನಿದ್ರೆ ಎಂಬುದು ಮಾನವ ಜೀವನದ ಅವಿಭಾಗ್ಯ ಅಂಶವಾಗಿದೆ. ಮನುಷ್ಯನು ಆರಾಮವಾಗಿರಲು 7-8 ಗಂಟೆಗಳ ಕಾಲ ನಿದ್ರೆ ಮಾಬೇಕು ಎಂದು ಅಧ್ಯಯನಗಳು ತಿಳಿಸುತ್ತವೆ. ಇಂದಿನ ಒತ್ತಡ ಜೀವನಶೈಲಿಯಲ್ಲಿ ಜನರಿಗೆ ನಿದ್ರೆಯ ಕೊರತೆ ಇರುವುದರಿಂದ ಮಧ್ಯಾಹ್ನದ ಸಮಯದಲ್ಲಿ ಮಲಗುತ್ತಾರೆ. ಆದರೆ ಇದು ಸರಿಯೋ ತಪ್ಪೋ ಎಂದು ಅವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ಅಭ್ಯಾಸದ ಬಗ್ಗೆ ಚಾಣಕ್ಯ ಏನನ್ನು ಹೇಳುತ್ತಾನೆ ಎಂದು ನೋಡೋಣ ಬನ್ನಿ...

ಮಧ್ಯಾಹ್ನದ ಸಮಯದಲ್ಲಿ ಮಲಗುವುದನ್ನು ಅಶುಭ ಎಂದು ಚಾಣಕ್ಯ ತಿಳಿಸುತ್ತಾನೆ. ಚಾಣಕ್ಯನ ನೀತಿಶಾಸ್ತ್ರವು ಹಲವಾರು ನಿರ್ದೇಶನಗಳನ್ನು ನೀಡುತ್ತದೆ. ಇದು ಬೆಳಿಗ್ಗೆ ಮಲಗುವವರಲ್ಲಿ ಚೈತನ್ಯ, ಉತ್ಸಾಹ ಕಡಿಮೆಯಾಗುತ್ತದೆ. ಹಾಗೂ ಯಶಸ್ಸಿನ ಹಾದಿಯಲ್ಲಿ ಹಿಂದುಳಿಯುತ್ತಾರೆ ಎಂದು ತಿಳಿಸಿದ್ದಾರೆ.

ಚಾಣಕ್ಯನ ಪ್ರಕಾರ, ಮಧ್ಯಾಹ್ನ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳುವುದರಿಂದ ಮನುಷ್ಯನ ಜೀವಿತಾವಧಿಯೇ ಕಡಿಮೆಯಾಗುತ್ತದೆ. ಏಕೆಂದರೆ ನಿದ್ರೆಯು ದೇಹದ ಉಸಿರಾಟದ ಪ್ರಮಾಣ ಹೆಚ್ಚಿಸುತ್ತದೆ. ಇದರಿಂದ ದೇಹವು ಹಗಲಿನಲ್ಲಿ ಅಗತ್ಯವಿರುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ನಿದ್ರೆ ಮತ್ತು ದೇಹದ ಶಕ್ತಿಯ ಸಮತೋಲನವಾಗಿರಬೇಕು

ಚಾಣಕ್ಯನ ಪ್ರಕಾರ, ಯಾವ ವ್ಯಕ್ತಿ ಹಗಲಿನಲ್ಲಿ ನಿದ್ರೆಯನ್ನು ಮಾಡುತ್ತಾರೋ ಅವರಿಗೆ ದೇಹವು ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರಕೃತಿಯ ಪ್ರಕಾರ, ರಾತ್ರಿ ಮಲಗುವುದು ಬೆಳಿಗ್ಗೆ ಕೆಲಸ ಮಾಡಬೇಕು. ಆದರೆ, ಈ ಕ್ರಮವನ್ನು ಉಲ್ಲಂಘಿಸಿದರೆ, ಪ್ರಕೃತಿಯ ವಿರುದ್ಧ ಹೋದ ಹಾಗೆ. ಇದರಿಂದ ದೈಹಿಕ, ಮಾನಸಿಕ, ಕೆಲಸದಲ್ಲಿ ಚೈತನ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮಧ್ಯಾಹ್ನದ ನಿದ್ರೆಯ ವೈದ್ಯಕೀಯ ಪರಿಣಾಮಗಳು

ಚಾಣಕ್ಯನ ದೃಷ್ಟಿಕೋನವನ್ನು ವೈದ್ಯಕೀಯವು ಸಹ ಒಪ್ಪಿಕೊಂಡಿದೆ. ತಜ್ಞರ ಪ್ರಕಾರ, 20 ರಿಂದ 30 ನಿಮಿಷಗಳ ಕಾಲ ಸಣ್ಣ ನಿದ್ರೆಯನ್ನು ಮಾಡುವುದು ಉತ್ತಮ. ಆದರೆ, 2-3 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಇದು ಹೃದಯಕ್ಕೆ ತೊಂದರೆ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ನಕಾರಾತ್ಮಕ ಶಕ್ತಿ ಬೀರುತ್ತದೆ

ಮಧ್ಯಾಹ್ನ ಮಲಗುವ ಅಭ್ಯಾಸವು ದೇಹದ ಮೇಲೆ ಮಾತ್ರವಲ್ಲದೆ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಜನರನ್ನು ಆಯಾಸಗೊಳಿಸುವುದು, ನಕರಾತ್ಮಕ ಭಾವನೆಯನ್ನು ಹೊಂದುವಂತೆ ಮಾಡುತ್ತದೆ. ಮನಸ್ಸಿನ ಶಕ್ತಿಯನ್ನು ದುರ್ಬಲಗೊಳಿಸುವಂತೆ ಮಾಡುತ್ತದೆ ಎಂದು ಚಾಣಕ್ಯ ಅಭಿಪ್ರಾಯ ಪಟ್ಟಿದ್ದಾರೆ.

ಶಿಸ್ತು ಮತ್ತು ಕ್ರಮಬದ್ಧ ಜೀವನ

ಶಿಸ್ತುಬದ್ಧ ಜೀವನವೇ ಯಶಸ್ಸಿನ ಕೀಲಿಕೈ ಎಂದು ಚಾಣಕ್ಯನು ಅಭಿಪ್ರಾಯ ಸೂಚಿಸಿರುತ್ತಾನೆ. ಈತನ ಪ್ರಕಾರ, ಯಾವುದೇ ವ್ಯಕ್ತಿಯು ಸಮಯದ ಮಹತ್ವವನ್ನು ಕಲಿಯಬೇಕು. ಕೆಲಸದ ಸಮಯದಲ್ಲಿ ನಿದ್ರೆ ಮಾಡಬಾರದು ಹಾಗೆಯೇ, ನಿದ್ರೆ ಸಮಯದಲ್ಲಿ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾನೆ.

ಚಾಣಕ್ಯನ ಪ್ರಕಾರ, ಮಧ್ಯಾಹ್ನ ಮಲಗುವುದು ಅಶುಭ. ಆದರೆ ವಿಜ್ಞಾನದ ಪ್ರಕಾರ, ಸ್ವಲ್ಪ ವಿಶ್ರಾಂತಿ ಪಡೆಯುವುದು ಹಾನಿಕಾರಕವಲ್ಲ. ಹಾಗಾಗಿ , ಮಧ್ಯಾಹ್ನ ನಿದ್ರೆಯನ್ನು ಸಂಪೂರ್ಣವಾಗಿ ತಪ್ಪಿಸುವ ಬದಲು, ಅದನ್ನು ನಿಯಂತ್ರಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಇದು ನಿಮ್ಮ ಯಶಸ್ಸಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸೂಚಿಸಿದೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net