

Diwali: ದೀಪಾವಳಿ ಹಬ್ಬ ಆಚರಣೆ ಇಡೀ ದೇಶಾದ್ಯಂತ ಕಾತುರದಿಂದ ಕಾಯುತ್ತಿದ್ದಾರೆ. ಈ ದೀಪಗಳ ಹಬ್ಬವನ್ನು ಸನಾತನ ಧರ್ಮದಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ದಿನದಂದು, ಶ್ರೀರಾಮನು ತನ್ನ ವನವಾಸದ ನಂತರ ಅಯೋಧ್ಯೆಗೆ ಮರಳಿದನು ಮತ್ತು ಅವನನ್ನು ಸ್ವಾಗತಿಸಲು ಇಡೀ ನಗರವು ದೀಪಗಳಿಂದ ಬೆಳಗಿತು ಎಂದು ನಂಬಲಾಗಿದೆ. ಅಂದಿನಿಂದ, ಈ ಹಬ್ಬವನ್ನು ಪ್ರತಿ ವರ್ಷವೂ ಬಹಳ ಭಕ್ತಿ ಮತ್ತು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ.
ದೀಪಾವಳಿ ಹಬ್ಬದ ಸಾಮಾನ್ಯ ಆಚರಣೆ ಮತ್ತು ಸಂಪ್ರದಾಯಗಳುದೀಪಾವಳಿಯನ್ನು ಸಾಮಾನ್ಯವಾಗಿ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಮನೆಗಳು, ದೇವಸ್ಥಾನಗಳು ಮತ್ತು ರಸ್ತೆಗಳನ್ನು ದೀಪಗಳಿಂದ ಅಲಂಕರಿಸುವುದು, ರಂಗೋಲಿ ಮಾಡುವುದು, ಹೊಸ ಬಟ್ಟೆಗಳನ್ನು ಧರಿಸುವುದು, ಸಿಹಿ ತಿಂಡುಗಳನ್ನು ತಯಾರಿಸಿ ಹಂಚಿಕೊಳ್ಳುವುದು, ಪಟಾಕಿಗಳನ್ನು ಹಚ್ಚುವುದು ಮುಖ್ಯ ಸಂಪ್ರದಾಯಗಳು. ಲಕ್ಷ್ಮೀ-ಗಣೇಶ ಪೂಜೆಯು ಕೇಂದ್ರಬಿಂದುವಾಗಿದ್ದು ಆಚರಣೆ ಸಂಭ್ರಮದಿಂದ ಜರಗುತ್ತದೆ.
ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಪ್ರಕಾರ ಈ 5 ವಸ್ತುಗಳನ್ನು ಮನೆಗೆ ತಂದು ಸರಿಯಾಗಿ ಇರಿಸಿದರೆ ಸಂಪತ್ತು, ಸಮೃದ್ಧಿ ಮತ್ತು ಸಂತೋಷ ನಿಮ್ಮ ಮನೆಯನ್ನು ತುಂಬುತ್ತದೆ.
ಲೋಹದ ಆಮೆ: ಆಮೆಯನ್ನು ಆರ್ಥಿಕ ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಭಗವಾನ್ ವಿಷ್ಣುವಿನ ಅವತಾರವಾಗಿದ್ದು, ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕಾಪಾಡುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಿ.
ಸ್ಫಟಿಕ ಪಿರಮಿಡ್: ಹಣಕಾಸಿನ ನಿರ್ಬಂಧಗಳನ್ನು ತೊಡೆಯುವುದಕ್ಕೆ ಶುಭ. ಸ್ಫಟಿಕ ಅಥವಾ ಲೋಹದಿಂದ ಮಾಡಿದ ಪಿರಮಿಡ್ ಮನೆಗೆ ಆರ್ಥಿಕ ಸಮೃದ್ಧಿಯನ್ನು ಆಕರ್ಷಿಸುತ್ತದೆ.
ಕುಬೇರನ ವಿಗ್ರಹ: ಸಂಪತ್ತಿನ ದೇವರೆಂದು ಕರೆಯಲ್ಪಡುವ ಕುಬೇರನ ವಿಗ್ರಹವನ್ನು ಲಕ್ಷ್ಮಿ ದೇವಿಯೊಂದಿಗೆ ಇರಿಸಿದರೆ ಹಣದ ಹರಿವು ಹೆಚ್ಚಾಗುತ್ತದೆ ಮತ್ತು ಅವರ ಆಶೀರ್ವಾದ ಸಿಗುತ್ತದೆ.
ಬೆಳ್ಳಿ ನಾಣ್ಯ: ಬೆಳ್ಳಿ ನಾಣ್ಯವು ಮಂಗಳಕರವಾಗಿದ್ದು, ದೇವರ ಕೋಣೆಯಲ್ಲಿ ಇರಿಸಿ ಪ್ರತಿದಿನ ಕೆಂಪು ತಿಲಕ ಹಚ್ಚಿ. "ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಸಿದ್ಧ ಲಕ್ಷ್ಮಯೈ ನಮಃ" ಮಂತ್ರ ಜಪಿಸಿ – ಇದರಿಂದ ಲಕ್ಷ್ಮಿ ದೇವಿ ನೆಲೆಸುತ್ತಾಳೆ.
ಶ್ರೀಫಲ (ನಾರಿಯೆಲ): ಶ್ರೀಫಲವನ್ನು ಲಕ್ಷ್ಮಿ ದೇವಿಯ ರೂಪವೆಂದು ನಂಬಲಾಗುತ್ತದೆ. ಇದನ್ನು ಪೂಜಿಸಿ ಇರಿಸಿದರೆ ದೇವಿ ಸಂತುಷ್ಟಳಾಗಿ ಸಂಪತ್ತಿನ ವರ ನೀಡುತ್ತಾಳೆ.
ಈ ವಸ್ತುಗಳನ್ನು ದೀಪಾವಳಿ ದಿನ ಪೂಜಾ ಸ್ಥಳದಲ್ಲಿ ಇರಿಸಿ, ಲಕ್ಷ್ಮಿ ಪೂಜೆಯಲ್ಲಿ ಸೇರಿಸಿ. ಇದರಿಂದ ನಿಮ್ಮ ಮನೆ ಬಾಗಿಲಿಗೆ ಲಕ್ಷ್ಮಿ ದೇವಿ ಬಂದು, ಸಂಪತ್ತು ಮತ್ತು ಸಮೃದ್ಧಿಯನ್ನು ತುಂಬುತ್ತಾಳೆ.(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.