ಬಾಬಾ ವಂಗಾ ಪ್ರಕಾರ 2026ರಲ್ಲಿ ಈ 4 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ? ಅಪಾರ ಸಂಪತ್ತು ಗಳಿಸಲಿದ್ದಾರೆ! Baba Vanga Predictions

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇನ್ನು ಕೆಲವೇ ದಿನಗಳಲ್ಲಿ 2025 ಮುಗಿದು 2026ರ ಹೊಸ ವರ್ಷ ಬರಲಿದೆ
  • ಹೊಸ ವರ್ಷದಲ್ಲದಾರೂ ನಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರಿದ್ದಾರೆ
  • ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ
Baba Vanga Prediction : ರಾಶಿಫಲವನ್ನು ಗ್ರಹಗಳ ಸಂಚಾರಕ್ಕೆ ಅನುಗುಣವಾಗಿ ಊಹಿಸುವ ನಂಬಿಕೆಯನ್ನಾಗಿ ನೋಡಲಾಗುತ್ತದೆ. ಈ ಜ್ಯೋತಿಷ್ಯ ವ್ಯವಸ್ಥೆಯಿಂದ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸಬಹುದು ಎಂದು ನಂಬಲಾಗಿದೆ. ಅಂದಹಾಗೆ, ಇನ್ನು ಕೆಲವೇ ದಿನಗಳಲ್ಲಿ 2025 ಮುಗಿದು 2026ರ ಹೊಸ ವರ್ಷ ಬರಲಿದೆ. ಈ ಹೊಸ ವರ್ಷದಲ್ಲದಾರೂ ನಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರಿದ್ದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲ ಹೊಂದಿರುತ್ತಾರೆ. 2026ರಲ್ಲಿ ಯಾವ ರಾಶಿಯವರು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುತ್ತಾರೆ ಎಂಬುದನ್ನು ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಬಹಳ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ.
ಯಾವ ರಾಶಿಯವರಿಗೆ ಹೊಸ ವರ್ಷ ಅದೃಷ್ಟ ತರಲಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನ ಬಾಬಾ ವಂಗಾರ ಕಿರು ಪರಿಚಯ ಮಾಡಿಕೊಳ್ಳೋಣ. ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

2026ರಲ್ಲಿ ಯಾವ ರಾಶಿಯವರಿಗೆ ಲಕ್

ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ಮುಂಬರುವ 2026ರ ಹೊಸ ವರ್ಷದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳಲ್ಲಿ ನಾಲ್ಕು ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳು ಅದೃಷ್ಟಶಾಲಿಗಳೆಂದು ಊಹಿಸಲಾಗಿದೆ. ಹಾಗಾದರೆ, ಆ 4 ರಾಶಿಗಳು ಯಾವುವು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

2026 ಮೇಷ ರಾಶಿಯವರಿಗೆ ಅದೃಷ್ಟದ ವರ್ಷವಾಗಲಿದೆ. ಅವರು ಕೈಗೊಳ್ಳುವ ಎಲ್ಲವೂ ಯಶಸ್ಸಿನಲ್ಲಿ ಕೊನೆಗೊಳ್ಳುತ್ತದೆ. ಅವರ ದೃಢನಿಶ್ಚಯ, ಕಠಿಣ ಪರಿಶ್ರಮ ಮತ್ತು ಹೊಸ ಯೋಜನೆಗಳು ಆರ್ಥಿಕ ಲಾಭವನ್ನು ಹೆಚ್ಚಿಸುತ್ತವೆ. 2026 ಉತ್ತಮ ಸಾಧನೆಗಳು ಮತ್ತು ಅದೃಷ್ಟದ ವರ್ಷವಾಗಿರುತ್ತದೆ. ವಿಶೇಷವಾಗಿ, ವ್ಯವಹಾರದಲ್ಲಿರುವವರಿಗೆ ಬಹಳ ಒಳ್ಳೆಯ ವರ್ಷವಾಗಿರುತ್ತದೆ.

ವೃಷಭ ರಾಶಿ

ಶುಕ್ರನ ಆಳ್ವಿಕೆಯ ವೃಷಭ ರಾಶಿಯವರಿಗೆ 2026 ವರ್ಷವು ಆರ್ಥಿಕವಾಗಿ ಅದೃಷ್ಟ ಮತ್ತು ಯಶಸ್ವಿ ವರ್ಷವಾಗಿರುತ್ತದೆ. 2025 ರಲ್ಲಿ ಅವರು ಅನುಭವಿಸಿದ ಎಲ್ಲಾ ಹೋರಾಟಗಳು 2026 ರಲ್ಲಿ ಕೊನೆಗೊಳ್ಳುತ್ತವೆ ಮತ್ತು ಅವರ ಕಠಿಣ ಪರಿಶ್ರಮದ ಫಲವನ್ನು ಅಂತಿಮವಾಗಿ ಈ ವರ್ಷ ಸಂಪೂರ್ಣವಾಗಿ ಪಡೆಯುತ್ತಾರೆ. 2026ರ ಹೊಸ ವರ್ಷದ ಆರಂಭದಲ್ಲಿ ಮತ್ತು ಏಪ್ರಿಲ್ ನಂತರ ಅವರ ಬ್ಯಾಂಕ್ ಖಾತೆಯು ಗಣನೀಯವಾಗಿ ಬೆಳೆಯುವುದರಿಂದ, ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುವ ಸಾಧ್ಯತೆಯಿದೆ.

ಮಿಥುನ ರಾಶಿ

ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ಗ್ರಹಗಳ ರಾಜಕುಮಾರ ಬುಧನಿಂದ ಆಳಲ್ಪಡುವ ಮಿಥುನ ರಾಶಿಯವರಿಗೆ 2026 ರಲ್ಲಿ ಉಜ್ವಲ ಜೀವನ ದೊರೆಯುವ ನಿರೀಕ್ಷೆಯಿದೆ. ಅವರ ಬುದ್ಧಿವಂತ ಯೋಜನೆ ಮತ್ತು ಕಾರ್ಯಗಳು 2026 ರಲ್ಲಿ ಅವರಿಗೆ ಅಪಾರ ಆರ್ಥಿಕ ಪ್ರಯೋಜನಗಳನ್ನು ತರುತ್ತವೆ. ವೃತ್ತಿ ಮತ್ತು ಸಾಮಾಜಿಕ ಸಂಪರ್ಕಗಳು ವಿಸ್ತರಿಸುತ್ತವೆ. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಹೂಡಿಕೆ ಮಾಡಲು ಇದು ಉತ್ತಮ ವರ್ಷ. ಯಾವುದೇ ವಿಷಯಕ್ಕೂ ನಿಮ್ಮ ಹೊಂದಿಕೊಳ್ಳುವಿಕೆ ಗುಣ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸಿಂಹ ರಾಶಿ

ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು 2026ರಲ್ಲಿ ಅಪಾರ ಬೆಳವಣಿಗೆ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ಹೊಸ ವೃತ್ತಿಜೀವನ ಪ್ರಾರಂಭಿಸಲು ಅಥವಾ ಪ್ರಸ್ತುತ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಅವಕಾಶಗಳನ್ನು ಹುಡುಕುತ್ತಿದ್ದಾರೆ. ಹೊಸ ವರ್ಷದಲ್ಲಿ ಇದೆಲ್ಲ ಸಫಲವಾಗಲಿದೆ. ಅವರ ನಾಯಕತ್ವದ ಗುಣಗಳು ಮತ್ತು ಆತ್ಮವಿಶ್ವಾಸವು ಅವರ ಆರ್ಥಿಕ ಯಶಸ್ಸಿಗೆ ಕಾರಣವಾಗುತ್ತದೆ. 2026ರಲ್ಲಿ ಅವರಿಗೆ ಎದುರಾಗುವ ಅವಕಾಶಗಳು ಅವರ ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net