

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಥೋತ್ಸವ ಸಂದರ್ಭದ ಅವಘಡದ ಹಿನ್ನೆಲೆಯಲ್ಲಿ ಮೇ 21ರಂದು ಪ್ರಾರಂಭಗೊಂಡಿದ್ದ ಅಷ್ಟಮಂಗಳ ಪ್ರಶ್ನೆಯ ಭಾಗವಾಗಿ ವಿಮರ್ಶೆ ಮತ್ತು ಪರಿಹಾರಗಳ ಚರ್ಚೆ ಮಂಗಳವಾರ ಆರಂಭಗೊಂಡು ದೇವಸ್ಥಾನದ ಕ್ಷೇತ್ರಪಾಲ ಗುಡಿ ಸಾನ್ನಿಧ್ಯ ಅಭಿವೃದ್ಧಿ, ಧ್ವಜಸ್ತಂಭ, ನೂತನ ರಥ ನಿರ್ಮಾಣ ಅಗತ್ಯವಿದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂದಿದೆ.
ಕಾಸರಗೋಡು ವಳಕುಂಜೆಯ ದೈವಜ್ಞ ವೆಂಕಟರಮಣ ಭಟ್, ಅವರ ಪುತ್ರ ಮುರಳೀಕೃಷ್ಣ ಶರ್ಮ ಹಾಗೂ ವಿಮರ್ಶಕರಾದ ಸದಾನಂ ನಾರಾಯಣ ಪೊದುವಾಳ್ ತಂಡದಿಂದ ದೇವಳದ ಜ್ಞಾನಮಂದಿರದಲ್ಲಿ ಪ್ರಶ್ನಾ ವಿಮರ್ಶಾ ಕಾರ್ಯಕ್ರಮ ಬೆಳಗ್ಗೆಯಿಂದ ನಡೆಯಿತು.
ದೇವಳದ ಆನುವಂಶಿಕ ಮೊಕೇಸರ ದುಗ್ಗಣ್ಣ ಸಾವಂತರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅತ್ತೂರುಬೈಲು ವೆಂಕಟರಾಜ ಉಡುಪ, ಡಾ.ಹರಿಕೃಷ್ಣ ಪುನರೂರು, ವಾದಿರಾಜ ಉಪಾಧ್ಯಾಯ ಕೊಲಕಾಡಿ, ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಸಸಿಹಿತ್ಲು, ಸುನೀಲ್ ಆಳ್ವ, ಶರತ್ ಸಾಲ್ಯಾನ್, ರಾಮಚಂದ್ರ ನಾಯ್ಕ ಕೊಲ್ನಾಡುಗುತ್ತು, ಸುಜಿತ್ ಎಸ್.ಸಾಲ್ಯಾನ್, ಚಂದ್ರಶೇಖರ ಕಾಸಪ್ಪನವರ ಮನೆ, ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಅಶೋಕ್ ಕುಮಾರ್ ಶೆಟ್ಟಿ, ವಾಮನ ಕೋಟ್ಯಾನ್ ನಡಿಕುದ್ರು, ಡಾ.ಹರಿಶ್ಚಂದ್ರ ಸಾಲ್ಯಾನ್, ಸಂಜೀವ ದೇವಾಡಿಗ, ಗುರುವಪ್ಪ ಕೋಟ್ಯಾನ್, ಸತೀಶ್ ಶೆಟ್ಟಿ, ನಾಗೇಶ್ ಬಪ್ಪನಾಡು, ಲಿಂಗಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.