

ಕುಂದಾಪುರ: ವೈದ್ಯರು, ದಾದಿಯರು ಕೇವಲ ವೃತ್ತಿಗಷ್ಟೇ ಸೀಮಿತರಾಗಿರದೆ ಸ್ವಭಾವದಲ್ಲಿ ಕೂಡ ಉತ್ತಮರಾಗಿರಬೇಕು. ಇದರಿಂದ ರೋಗಿಗಳಿಗೆ ಸಮಾಧಾನವಾಗಲಿದ್ದು, ಜನಮನ್ನಣೆಯೂ ತಾನಾಗಿಯೇ ದೊರೆಯುತ್ತದೆ ಎಂದು ವಲಯ ಆರೋಗ್ಯ ಆಯೋಗ ನಿರ್ದೇಶಕ ಸ್ಟ್ಯಾನಿ ತಾವ್ರೊ ಹೇಳಿದರು.
ಸಂತ ಮೇರಿಸ್ ಪಿ.ಯು ಕಾಲೇಜಿನ ಸಭಾಭವನದಲ್ಲಿ ಇತ್ತೀಚೆಗೆ ಕುಂದಾಪುರ ವಲಯ ಆರೋಗ್ಯ ಆಯೋಗ ವತಿಯಿಂದ ಕುಂದಾಪುರ ವಲಯಮಟ್ಟದ ಆರೋಗ್ಯ ವೃತ್ತಿ ಪರರ ಸಹಮಿಲನ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಪಾವ್ಲ್ ರೇಗೊ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಲೆಸ್ಲಿಲೂವಿಸ್ ಮತ್ತು ಡಾ.ಜೀವನ್ ಲೂವಿಸ್ ಮಾಹಿತಿ ನೀಡಿದರು.
ಡಾ.ಎಡ್ವರ್ಡ್ ಲೋಬೊ ಸ್ವಾಗತಿಸಿದರು. ಡಾ.ವಿಕ್ಟರ್ ಡಿಕೋಸ್ತಾ ಮತ್ತು ಡಾ.ಗ್ರೆಟ್ಟಾ ಡಿಕೋಸ್ತಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ರೇಷ್ಮಾ ಡಿಸೋಜ ವಂದಿಸಿದರು. ಡಾ.ಸೋನಿ ಡಿಕೋಸ್ತಾ ನಿರೂಪಿಸಿದರು.