ಮಕ್ಕಳಿಗೆ ಬಾಲ್ಯದಲ್ಲೇ ಸಂಬಂಧಗಳ ಅರಿವು

rotary
ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಅವರನ್ನು ಗೌರವಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಮಕ್ಕಳಿಗೆ ಎಳವೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಿದರೆ ಒಳ್ಳೆಯ ಪ್ರಜೆಗಳಾಗಿ ರೂಪುಗೊಳಿಸಲು ಸಾಧ್ಯ. ನಾವು ಜೀವನ ಮೌಲ್ಯ ಮತ್ತು ಸಂಬಂಧಗಳ ಬಗ್ಗೆ ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸಬೇಕು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಹೇಳಿದರು.

ಇತ್ತೀಚೆಗೆ ಬನ್ನಾಡಿಯ ಶಾನಾಡಿ ಉದಯ್ ಕುಮಾರ್ ಹೆಗ್ಡೆ ನಿವಾಸದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಮತ್ತು ಆ್ಯನ್ಸ್ ಕ್ಲಬ್ ಕೋಟ ಸಿಟಿ ಜಂಟಿ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಅಧ್ಯಕ್ಷ ಅನಿಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಆ್ಯನ್ಸ್ ಅಧ್ಯಕ್ಷೆ ರೇವತಿ ಶ್ಯಾಮಸುಂದರ ನಾರಿ, ವಲಯ ಸೇನಾನಿ ನಿತ್ಯಾನಂದ ನಾರಿ ಶುಭಾಸಂಶನೆಗೈದರು. ಮಾಜಿ ಸಹಾಯಕ ಗವರ್ನರ್ ಮತ್ತು ಆ್ಯನ್ಸ್ ಕ್ಲಬ್ ಚೇರ್‌ಮೆನ್ ಚಂದ್ರಶೇಖರ್ ಮೆಂಡನ್ ಪ್ರಸ್ತಾವನೆಗೈದರು. ಸ್ನೇಹಲತಾ ಉದಯ್ ಕುಮಾರ್ ಶೆಟ್ಟಿ ಪ್ರಾರ್ಥಿಸಿದರು. ಶ್ಯಾಮಸುಂದರ ನಾರಿ ಹಾಗೂ ಸುರೇಶ್ ಆಚಾರ್ ಅತಿಥಿಗಳನ್ನು ಪರಿಚಯಿಸಿದರು. ರೋಟರಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವರದಿ ವಾಚಿಸಿದರು. ಶಾನಾಡಿ ಉದಯ್ ಕುಮಾರ್ ಹೆಗ್ಡೆ ಸ್ವಾಗತಿದರು. ಆ್ಯನ್ಸ್ ಕ್ಲಬ್ ಕಾರ್ಯದರ್ಶಿ ಶಶಿಕಲಾ ಗಣೇಶ್ ವಂದಿಸಿದರು. ವಿಷ್ಣುಮೂರ್ತಿ ಉರಾಳ ಕಾರ್ಕ್ರಮ ನಿರೂಪಿಸಿದರು.

ರೋಟರಿಯಿಂದ ಗೌರವಾರ್ಪಣೆ

ನೂತನ ಸದಸ್ಯ ಯೋಗೀಶ್ ಸುವರ್ಣ ಅವರನ್ನು ಕ್ಲಬ್ ಮೆಂಬರ್‌ಶಿಪ್ ಚೇರ್ಮನ್ ಮತ್ತು ಮಾಜಿ ಸಹಾಯಕ ಗವರ್ನರ್ ಸತೀಶ್ ಶೆಟ್ಟಿ ಕ್ಲಬ್‌ಗೆ ಸೇರ್ಪಡೆಗೊಳಿಸಿ ಬಳಿಕ ರಾಜೇಶ್ ಗಾಣಿಗ ಅಚ್ಲಾಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net