ಶ್ರೀಮಾತಾ ನಾಲ್ಕೂರು ತಂಡದಿಂದ ಬಳಂಜ ಶಾಲೆಗೆ ನೆರವು

Bel_Shree Mata
Published on

ಬೆಳ್ತಂಗಡಿ: ಬಳಂಜ ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢಶಾಲೆ ಅಮೃತಮಹೋತ್ಸವ ಸಂಭ್ರಮದಲ್ಲಿದ್ದು ಈ ಪ್ರಯುಕ್ತ ಬಳಂಜ ಶಿಕ್ಷಣ ಟ್ರಸ್ಟ್, ಅಮೃತಮಹೋತ್ಸವ, ಹಳೇ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಯುವಕ ಮಂಡಲ, ಮಹಿಳಾ ಮಂಡಲ ಮತ್ತು ವಿವಿಧ ಸಂಘ-ಸಂಸ್ಥೆಗಳು ಹಲವಾರು ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪ್ರೋತ್ಸಾಹವಾಗಿ ಶ್ರೀಮಾತಾ ನಾಲ್ಕೂರು ತಂಡ 10 ಸಾವಿರ ರೂ.ನೆರವನ್ನು ಬುಧವಾರ ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಅವರಿಗೆ ಹಸ್ತಾಂತರಿಸಿತು.

ಖ್ಯಾತ ಕಂಬಳ ಓಟಗಾರ ದಿ.ರಮಾನಂದ ಪೂಜಾರಿ ಯೆಕ್ಯುರಿ ಅವರ ಸ್ಮರಣಾರ್ಥ ಶ್ರೀಮಾತಾ ನಾಲ್ಕೂರು ಇತ್ತೀಚೆಗೆ ಆಯೋಜಿಸಿದ ಹೊನಲು ಬೆಳಕಿನ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟದ ಉಳಿಕೆ ಹಣವನ್ನು ಶಿಕ್ಷಣದ ನೆರವಿಗೆ ನೀಡಲಾಯಿತು.

ಶ್ರೀಮಾತಾ ನಾಲ್ನೂರು ತಂಡದ ಸನತ್ ಶೆಟ್ಟಿ, ಹರೀಶ್ ಮಜ್ಜೇನಿ, ಪುರಂದರ ಪೂಜಾರಿ ಪೇರಾಜೆ, ನಿಶಾಂತ್ ಉಂಬಜೆ, ಆದರ್ಶ್ ಯೆಯ್ಯುಕುರಿ, ರಚನ್ ಮಜಲೋಡಿ, ಸತೀಶ್ ದೇವಾಡಿಗ, ರವೀಂದ್ರ ಎ.ಅಮೀನ್, ಬಳಂಜ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಪೇರಂದಬೈಲ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಲೋಚನಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗಸ್ವಾಮಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net