ಹಲ್ಲೆ ಆರೋಪಿ 30 ವರ್ಷಗಳ ಬಳಿಕ ಸೆರೆ

arrested
Published on

ಕಾಸರಗೋಡು: ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಲ್ಲದೆ, ಆತನ ಮನೆಗೆ ಕಲ್ಲೆಸೆದು ಹಾನಿಯೆಸಗಿದ್ದ ಆರೋಪಿಯನ್ನು 30 ವರ್ಷಗಳ ನಂತರ ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಡೂರು ಮೂಲ ಹೌಸ್ ನಿವಾಸಿ ಎಂ.ಇ.ಬಾತಿಷಾ(48) ಬಂಧಿತ. 1995ರ ಏಪ್ರಿಲ್ 21ರಂದು ಬಾತಿಷಾ ಅವರು ಅಬೂಬಕ್ಕರ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಅಬೂಬಕ್ಕರ್ ಮನೆಗೂ ಬಾತಿಷಾ ಕಲ್ಲೆಸೆದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನಂತರ ಈತ ವಿದೇಶಕ್ಕೆ ಪರಾರಿಯಾಗಿದ್ದ. ಹಲವು ವರ್ಷಗಳ ನಂತರ ಊರಿಗೆ ಬಂದಿದ್ದರೂ ಬಂಧಿಸಲು ಸಾಧ್ಯವಾಗಿರಲಿಲ್ಲ. ನಂತರ ಈತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಲಾಗಿತ್ತು. ಈ ಮಧ್ಯೆ ಆರೋಪಿ ಪೈವಳಿಕೆ ಚೇವಾರಿನ ಮಡುವಳ ಗದ್ದೆಯಲ್ಲಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net