ದಿಸ್ಪುರ್: ಸರ್ಕಾರಿ ಇಲಾಖೆಗಳಲ್ಲಿನ ಗ್ರೇಡ್ 3 ಮತ್ತು ಗ್ರೇಡ್ 4 ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ನಡೆಸಲಾಗುವುದು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಪಾರದರ್ಶಕ ಮೂಲಕ ಭರ್ತಿ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಜುಲೈ 9) ಹೇಳಿದ್ದಾರೆ.
ಇದನ್ನು ಓದಿ: ಅಂಗಾಂಗ ಕಸಿ ದಂಧೆ ಭೇದಿಸಿದ ಕ್ರೈಂಬ್ರಾಂಚ್ ಪೊಲೀಸರು; 7 ಮಂದಿ ಬಂಧನ
ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ 6,400ಕ್ಕೂ ಹೆಚ್ಚು ಹುದ್ದೆ ಖಾಲಿ ಇದೆ. ಈ ಹುದ್ದೆಗೆ ನಡೆಸುವ ದೈಹಿಕ ಪರೀಕ್ಷೆಯು ಅಕ್ಟೋಬರ್ 3ರಿಂದ ನಡೆಯಲಿದೆ. ಮತ್ತ 7,500 ಗ್ರೇಡ್ 3 ಹುದ್ದೆಗಳು ಖಾಲಿ ಇದ್ದು, ಪ್ರಿಲಿಮ್ಸ್ ಪರೀಕ್ಷೆಯು ಸೆಪ್ಟೆಂಬರ್ 15, 22 ಮತ್ತು 29ರಂದು ನಡೆಯಲಿದೆ. ಮತ್ತು ಗ್ರೇಡ್ 4 ಅಡಿಯಲ್ಲಿ 4,500ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ, ಅದರ ಪ್ರಿಲಿಮ್ಸ್ ಪರೀಕ್ಷೆಯು ಅಕ್ಟೋಬರ್ 20 ಮತ್ತು 27 ರಂದು ನಡೆಯಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ವಿವಿಧ ನೇಮಕಾತಿಗಳಿಗಾಗಿ ಅಸ್ಸಾಂ ಸಾರ್ವಜನಿಕ ಸೇವಾ ಆಯೋಗ (APSC) ಪ್ರಿಲಿಮ್ಸ್, ಮುಖ್ಯ ಮತ್ತು ಸಂದರ್ಶನ- ಈ ಮೂರು-ಹಂತದ ಪರೀಕ್ಷೆಯನ್ನು ಅನುಸರಿಸುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳ ಅಡಿಯಲ್ಲಿ 13,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಶೀಘ್ರದಲ್ಲೇ ಅಧಿಸೂಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಈ ಎಲ್ಲ ನೇಮಕಾತಿ ಪ್ರಕ್ರಿಯೆಗಳು ಏಪ್ರಿಲ್ 2025ರೊಳಗೆ ಪೂರ್ಣಗೊಳ್ಳುತ್ತವೆ ಎಂದು ಅವರು ಹೇಳಿದರು. (ಏಜೆನ್ಸೀಸ್)
ಪುಟಿನ್ ಜತೆಗಿನ ಪ್ರಧಾನಿ ಮೋದಿ ಭೇಟಿ ಖಂಡನೀಯ; ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೀಗೆಳಿದ್ದೇಕೆ?