Amit Shah Assam Visit | ಪಾಕಿಸ್ತಾನಕ್ಕೆ ಪದೇ ಪದೇ ಭೇಟಿ ನೀಡುವವರಿಂದ ಆಸ್ಸಾಂ ಅಭಿವೃದ್ದಿ ಅಸಾಧ್ಯ : ಗೃಹ ಸಚಿವ ಅಮಿತ್ ಷಾ

Amit Shah Assam Visit
Published on

Amit Shah Assam Visit: ಪಾಕಿಸ್ತಾನಕ್ಕೆ ಆಗಾಗ್ಗೆ ಭೇಟಿ ನೀಡುವ ನಾಯಕರಿಂದ ಅಸ್ಸಾಂ ರಾಜ್ಯವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್​ರನ್ನು ಟೀಕಿಸಿದರು

ಗುವಾಹಟಿಯಲ್ಲಿ ನಡೆದ ಎನ್‌ಡಿಎ ಪಂಚಾಯತ್ ಪ್ರತಿನಿಧಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಷಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಂದುವರಿಸಿದ ಅಭಿವೃದ್ಧಿ ಕಾರ್ಯಗಳ ಬಲದಿಂದ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದರು.

ಅಕ್ರಮ ನುಸುಳುವವರು ಮತ್ತು ಅತಿಕ್ರಮಣಕಾರರ ಬಗ್ಗೆ ಮೃದು ಧೋರಣೆ ಹೊಂದಿರುವ ನಾಯಕರು ಅಸ್ಸಾಂ ರಾಜ್ಯವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದರು. ಬಿಜೆಪಿ ಸರ್ಕಾರ ಒಳನುಸುಳುವವರು ಮತ್ತು ಅತಿಕ್ರಮಣಕಾರರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದ್ದು, ಶ್ರೀಮಂತ ಶಂಕರದೇವ ಮತ್ತು ಮಾಧವದೇವ ಸ್ಥಾಪಿಸಿದ ವೈಷ್ಣವ ಮಠಗಳ ಪಾವಿತ್ರ್ಯವನ್ನು ಪುನಃಸ್ಥಾಪಿಸಿದೆ ಎಂದು ಷಾ ಹೇಳಿದರು.

ಒಳನುಸುಳುವವರು ಆಸ್ಸಾಂನ ಕಾನೂನು ಹಕ್ಕುಗಳನ್ನು ಪಡೆಯಲು ಸ್ಥಳೀಯ ಮಹಿಳೆಯರನ್ನು ಮದುವೆಯಾಗುತ್ತಿದ್ದಾರೆ ಎಂದು ಆರೋಪಿಸಿದ ಷಾ, ಅಂತಹ ಪ್ರಕರಣಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ವಿಶೇಷ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ ಎಂದರು. ಪಂಚಾಯತ್ ಫಲಿತಾಂಶಗಳು ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರದ ಮಾದರಿಯ ಆಡಳಿತಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್ ತಳಮಟ್ಟದ ಸಂಘಟನೆಯ ಬಗ್ಗೆ ವ್ಯಂಗ್ಯವಾಡಿದ ಗೃಹ ಸಚಿವರು, ನೀವು ಅಸ್ಸಾಂ ಪಂಚಾಯತ್‌ಗಳಲ್ಲಿ ಬೈನಾಕ್ಯುಲರ್‌ಗಳನ್ನು ಬಳಸಿ ಹುಡುಕಿದರು ಸಹ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಅಧ್ಯಕ್ಷ ಗೌರವ್ ಗೊಗೊಯ್​ ಪತ್ನಿ ಎಲಿಜಬೆತ್ ಕೋಲ್ಬರ್ನ್ ಅವರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದೊಂದಿಗಿನ ಸಂಬಂಧಗಳ ಬಗ್ಗೆ ಪದೇ ಪದೇ ಟೀಕಿಸಿದ್ದಾರೆ. ಕೋಲ್ಬರ್ನ್ 19 ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ ಎಂದು ಶರ್ಮಾ ಹೇಳಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net