6,6,6,6,6,6... ಏಷ್ಯಾಕಪ್ ಟಿ20 ಇತಿಹಾಸದಲ್ಲಿ ಅತಿಹೆಚ್ಚು ರನ್​ ದಾಖಲಿಸಿದ ಬ್ಯಾಟ್ಸ್​ಮನ್​ಗಳಿವರು | Asia Cup T20

ವಿಜಯವಾಣಿ (66)
Published on

Asia Cup T20: ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಸ್ಟಾರ್​ ಬ್ಯಾಟರ್​ಗಳ ಪೈಕಿ ಮೊದಲಿಗಿರುವುದು ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್​, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ.

2022ರ ಏಷ್ಯಾಕಪ್‌ನ ಭಾಗವಾಗಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಿ ಸೆಣಸಾಡಿತು. ಈ ಪಂದ್ಯ ಕ್ರಿಕೆಟ್​ ಇತಿಹಾಸದಲ್ಲಿ ಸೇರಿಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಪಂದ್ಯವನ್ನು ಆರಂಭಿಸಿದ ವಿರಾಟ್ ಕೊಹ್ಲಿ, ಕೇವಲ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ ಸಹಾಯದಿಂದ ಅಜೇಯ 122 ರನ್ ಬಾರಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕೊಹ್ಲಿ ಅವರ ಶತಕದೊಂದಿಗೆ ನಿಗದಿತ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 212 ರನ್ ಗಳಿಸಿತು. ಮತ್ತೊಬ್ಬ ಆರಂಭಿಕ ಬ್ಯಾಟರ್​ ಕೆ.ಎಲ್. ರಾಹುಲ್ (62) ಅರ್ಧಶತಕದೊಂದಿಗೆ ತಂಡದ ಪರ ಮಿಂಚಿದರು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನ್ ತಂಡವು, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 111 ರನ್‌ಗೆ ಸೀಮಿತವಾಯಿತು. ಇದರೊಂದಿಗೆ, ಭಾರತ 101 ರನ್‌ಗಳ ಅಂತರದಿಂದ ಪಂದ್ಯವನ್ನು ವಶಪಡಿಸಿಕೊಂಡಿತು. ಏಷ್ಯಾಕಪ್‌ನಲ್ಲಿ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವ ವಿರಾಟ್​ ಕೊಹ್ಲಿ, 9 ಇನ್ನಿಂಗ್ಸ್‌ಗಳಲ್ಲಿ 429 ರನ್ ಬಾರಿಸಿದ್ದಾರೆ. 2022ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಅವರು ಗಳಿಸಿದ ಅಜೇಯ 122 ಅತ್ಯಧಿಕ ಸ್ಕೋರ್ ಆಗಿದೆ. ಈ

ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ 4 ಬ್ಯಾಟರ್​ಗಳಿವರು

1. ವಿರಾಟ್ ಕೊಹ್ಲಿ (ಭಾರತ) - 122 ರನ್​, ಅಜೇಯ (2022, ಅಫ್ಘಾನಿಸ್ತಾನ ವಿರುದ್ಧ)

2. ಬಾಬರ್ ಹಯಾತ್ (ಹಾಂಗ್ ಕಾಂಗ್) - 122 ರನ್​ (2016, ಓಮನ್ ವಿರುದ್ಧ)

3. ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) - 84 ರನ್​ (2022, ಶ್ರೀಲಂಕಾ ವಿರುದ್ಧ)

4. ರೋಹಿತ್ ಶರ್ಮಾ (ಭಾರತ) - 83 ರನ್​ (2016, ಬಾಂಗ್ಲಾದೇಶ ವಿರುದ್ಧ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net