

Asia Cup: 2025ರ ಏಷ್ಯಾ ಕಪ್ ನಾಯಕರ ಪತ್ರಿಕಾಗೋಷ್ಠಿಯಲ್ಲಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಪರಸ್ಪರ ಕೈಕುಲುಕಲಿಲ್ಲ ಎಂದು ವರದಿಯಾಗಿದೆ.
ಏಷ್ಯಾ ಕಪ್ ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಅಥವಾ ಅಪ್ಪುಗೆಗಾಗಿ ಕಾಯದೆ ನೇರವಾಗಿ ನಿರ್ಗಮಿಸಿದರು. ಅಲ್ಲದೆ, ಭಾರತದ ನಾಯಕ ಸೂರ್ಯಕುಮಾರ್, ಕಾರ್ಯಕ್ರಮ ಮುಗಿಯುವ ಮೊದಲು ಅಫ್ಘಾನಿಸ್ತಾನದ ರಶೀದ್ ಖಾನ್ ಸೇರಿದಂತೆ ಇತರ ನಾಯಕರೊಂದಿಗೆ ಕೈಕುಲುಕಿ ಅವರನ್ನು ಅಪ್ಪಿಕೊಂಡರು.
ಉಭಯ ತಂಡದ ನಾಯಕರ ನಡುವೆ ಯಾವುದೇ ರೀತಿಯ ಹ್ಯಾಂಡ್‌ಶೇಕ್ ಮಾಡದಿರುವುದು 2025ರ ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ ಎರಡೂ ತಂಡಗಳ ಆಟಗಾರರು ಏನನ್ನು ನಿರೀಕ್ಷಿಸಬಹುದು ಎಂಬುದರ ಸ್ಪಷ್ಟ ಸಂದೇಶ ವ್ಯಕ್ತವಾಗಿದೆ.
ಭಾರತ ತಂಡ ಬುಧವಾರ ಯುಎಇ ವಿರುದ್ಧ ಟಿ20 ಗ್ರೂಪ್ 'ಎ' ಪಂದ್ಯದಲ್ಲಿ ಆಡಲಿದ್ದು, ನಂತರ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯವಾಡಲಿದೆ.
ಭಾನುವಾರ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಟಗಾರರ ಆಕ್ರಮಣಶೀಲತೆಯನ್ನು ನಿಯಂತ್ರಿಸುವ ಬಗ್ಗೆ ಮಾತನಾಡಿದ ಆಕ್ರಮಣಶೀಲತೆ ಆಟದಲ್ಲಿ ಯಾವಾಗಲೂ ಇರುತ್ತದೆ. ನೀವು ಗೆಲ್ಲಲು ಬಯಸಿದರೆ ಆಕ್ರಮಣಶೀಲತೆಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಸೂರ್ಯ ಹೇಳಿದ್ದಾರೆ. ಇಂಡೋ-ಪಾಕ್ ಪಂದ್ಯದಲ್ಲಿ ಆಟಗಾರರ ಆಕ್ರಮಣಶೀಲತೆಯನ್ನು ಕಡಿಮೆ ಮಾಡುತ್ತಾರೆಯೇ ಎಂದು ಕೇಳಿದಾಗ ಸೂರ್ಯ ಉತ್ತರಿಸಿದ್ದಾರೆ.
ಇದೇ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ತಮ್ಮ ಆಟಗಾರರ ನೈಸರ್ಗಿಕ ಪ್ರವೃತ್ತಿಗಳು ಯಾವುದೇ ನಿರ್ಬಂಧಗಳಿಲ್ಲದೆ ಆಡಬೇಕೆಂದು ಬಯಸುತ್ತಾರೆ ಎಂದು ಹೇಳಿದರು. ಯಾರಾದರೂ ಆಕ್ರಮಣಕಾರಿಯಾಗಿರಲು ಬಯಸಿದರೆ ಆದು ಅವರಿಗೆ ಬಿಟ್ಟಿದ್ದು, ನನ್ನ ಕಡೆಯಿಂದ ನಾನು ಯಾರಿಗೂ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ ಎಂದು ಅಘಾ ಹೇಳಿದರು.
ವ್ಯಾಪಕ ಅಭ್ಯಾಸ ಅವಧಿಗಳನ್ನು ನಡೆಸಿದ ನಂತರ ತಮ್ಮ ತಂಡವು ಉತ್ತಮ ಮನಸ್ಥಿತಿಯಲ್ಲಿದೆ ಎಂದು ಸೂರ್ಯಕುಮಾರ್ ಹೇಳಿದರು. ನಮಗೆ ಕೆಲವೇ ಅಭ್ಯಾಸ ಅವಧಿಗಳಿವೆ. ಏಷ್ಯಾಕಪ್‌ನ ಅತ್ಯುತ್ತಮ ತಂಡಗಳನ್ನು ಆಡುವುದು ಒಳ್ಳೆಯ ಸವಾಲಾಗಿರುತ್ತದೆ ಎಂದು ಅವರು ತಿಳಿಸಿದರು. (ಏಜೆನ್ಸೀಸ್)