ಭಾರತ ತಂಡ ಮುಂದಿನ ಟಿ20 ವಿಶ್ವಕಪ್​ಗೆ​ ತಯಾರಿ ನಡೆಸಲು ಏಷ್ಯಾಕಪ್​ ಟೂರ್ನಿ ಸಹಕಾರಿ | Virender Sehwag

Virender Sehwag
Published on

Virender Sehwag: ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್‌ಗೆ ತಯಾರಿ ನಡೆಸಲು ಭಾರತ ತಂಡಕ್ಕೆ ಮುಂಬರುವ ಏಷ್ಯಾಕಪ್ ಸೂಕ್ತ ವೇದಿಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿರುವ ಸೆಹ್ವಾಗ್, ಈ ಏಷ್ಯಾ ಕಪ್ ನಮ್ಮ 2026 ರ ಟಿ20 ವಿಶ್ವಕಪ್‌ಗೆ ಉತ್ತಮ ತಯಾರಿಯಾಗಿದ್ದು, ಯಾವ ಹೊಸ ಆಟಗಾರರಿಗೆ ಅವಕಾಶ ನೀಡಬೇಕು ಮತ್ತು ಯಾರನ್ನು ತಂಡದಿಂದ ಕೈ ಬಿಡಬೇಕು ಎನ್ನುವುದಕ್ಕೆ ಇದು ಒಳ್ಳೆಯ ಅವಕಾಶ ಎಂದರು.

2024 ರಲ್ಲಿ ಟಿ 20 ವಿಶ್ವಕಪ್ ಗೆದ್ದ ನಂತರ ಭಾರತ, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೊಸ ತಂಡ ನಿರ್ಮಿಸಿಕೊಳ್ಳಲು ನಿರೀಕ್ಷೆಯಲ್ಲಿದೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತದ T20I ತಂಡ ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅನ್ನು ಸೋಲಿಸಿ ಸತತ ನಾಲ್ಕು ಸರಣಿಗಳನ್ನು ಗೆಲ್ಲುವ ಮೂಲಕ ಸ್ಥಿರತೆ ಕಾಯ್ದುಕೊಂಡಿದೆ.

2022 ರಲ್ಲಿ ಕೊನೆಯ ಬಾರಿಗೆ ಟಿ20 ಮಾದರಿಯಲ್ಲಿ ಏಷ್ಯಾಕಪ್ ನಡೆದಾಗ, ಭಾರತ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಸೂಪರ್ ಫೋರ್ ಹಂತದಲ್ಲಿ ಹೊರಬಿದ್ದಿತ್ತು.

ಒಂದು ವರ್ಷದ ನಂತರ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್​ಗೆ ಮರಳಿರುವ ಉಪನಾಯಕ ಶುಭಮನ್ ಗಿಲ್​​ಗೆ ಈ ಟೂರ್ನಿ ಮಹತ್ವದ್ದು ಭಾರತದ ಎಲ್ಲಾ ಸ್ವರೂಪಕ್ಕೂ ನಾಯಕರಾಗಬಹುದು ಎಂಬ ಚರ್ಚೆ ವ್ಯಾಪಕವಾಗಿ ಹಬ್ಬಿದ್ದು, ಮುಂಬರುವ ವಿಶ್ವಕಪ್ ಆಯ್ಕೆಗೆ ಅವರ ಮುಂದಿನ ಫಾರ್ಮ್ ನಿರ್ಣಾಯಕ.

ಭಾರತ ತನ್ನ ಏಷ್ಯಾ ಕಪ್ ಅಭಿಯಾನವನ್ನು ಸೆಪ್ಟೆಂಬರ್ 10 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಆರಂಭಿಸಲಿದೆ. ಗುಂಪು ಹಂತಗಳಲ್ಲಿ ಪಾಕಿಸ್ತಾನ ಮತ್ತು ಒಮಾನ್ ತಂಡಗಳನ್ನು ಎದುರಿಸಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net