

Sachin Tendulkar: ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಜೋ ರೂಟ್, ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ಭುತ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದು, ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ದೇವರು ತೆಂಡುಲ್ಕರ್, ಈ ದಾಖಲೆಯನ್ನು ಅವರು ಮುರಿಯಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಗ್ರಾಹಕರ ಆಪಾದನೆಗೆ ಗುರಿಯಾದ ಡಿಸಿಸಿ ಬ್ಯಾಂಕ್…!
ಆಸ್ಕ್ ಮಿ ಎನಿಥಿಂಗ್ (ಎಎಂಎ) ಸಂದಶರ್ನದಲ್ಲಿ ಸಚಿನ್ಗೆ, ಜೋ ರೂಟ್ ಬಗ್ಗೆ ನಿಮ್ಮ ಮೊದಲ ಅನಿಸಿಕೆ ಏನು? ಎನ್ನುವ ಪ್ರಶ್ನೆ ಕೇಳಲಾಯಿತು, ಈ ಪ್ರಶ್ನೆಗೆ ಉತ್ತರಿಸಿದ ಸಚಿನ್, 13000 ರನ್ಗಳನ್ನು ದಾಟಿರುವುದು ಗಮನಾರ್ಹ ಸಾಧನೆಯಾಗಿದ್ದು, ಅವರು ಫಿಟ್ ಆಗಿರುವುದರಿಂದ ನನ್ನ ದಾಖಲೆಯನ್ನು ಮುರಿಯಬಹುದು ಎಂದರು. 2012 ರಲ್ಲಿ ನಾಗ್ಪುರದಲ್ಲಿ ಅವರ ಚೊಚ್ಚಲ ಟೆಸ್ಟ್ ಪಂದ್ಯದ ಸಮಯದಲ್ಲಿ ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನನ್ನ ತಂಡದ ಇತರೆ ಆಟಗಾರರಿಗೆ ಅವರು ಇಂಗ್ಲೆಂಡ್ನ ಭವಿಷ್ಯದ ನಾಯಕನಾಗುತ್ತಾರೆ ಎಂದು ಹೇಳಿದ್ದೆ ಎಂದರು. ರೂಟ್ ವಿಕೆಟ್ ಕಾಯ್ದುಕೊಂಡು ಆಡುವ ರೀತಿ, ಅವರು ಸ್ಟ್ರೈಕ್ ರೊಟೆಟ್ ಗೆ ಪ್ರಭಾವಿತನಾಗಿದ್ದೆ ಎಂದು ತಿಳಿಸಿದರು.200 ಟೆಸ್ಟ್ಗಳಿಂದ 15,921 ರನ್ ಗಳಿಸಿರುವ ಸಚಿನ್ ದಾಖಲೆ ತಲುಪಲು ರೂಟ್ ಕೇವಲ 2378 ರನ್ ಗಳಿಸಬೇಕಿದೆ.
ಪೂಜಾರ ನಿವೃತ್ತಿಯ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು.?
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಭಾರತದ ಹಿರಿಯ ಆಟಗಾರ ಚೇತೇಶ್ವರ ಪೂಜಾರ ಅವರ ನಿವೃತ್ತಿ ಬಗ್ಗೆ ತಮ್ಮ ಎಕ್ಸ್ ಖಾತೆಯ ಮೂಲಕ ಪೋಸ್ಟ್ ಹಂಚಿಕೊಂಡು ಶುಭಾಶಯ ತಿಳಿಸಿರುವ ಸಚಿನ್, ಪೂಜಾರ ತಂಡದ ಆಧಾರಸ್ತಂಭವಾಗಿದ್ದರು ಎಂದು ಕರೆದಿದ್ದಾರೆ. ಅವರು 15 ವರ್ಷಗಳ ಕಾಲ ಕ್ರಿಕೆಟ್ಗೆ ನೀಡಿದ ಕೊಡುಗೆ ಸ್ಮರಣೀಯ ಎಂದರು.
ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತಿದ್ದರೆ ಇಡೀ ತಂಡ ಅವರ ಆಟವನ್ನು ಧೈರ್ಯದಿಂದ ನೋಡುತಿತ್ತು, ಆಟದ ಬಗೆಗಿನ ಅವರ ತಂತ್ರಗಳು, ತಾಳ್ಮೆ ಮತ್ತು ಶಾಂತತೆಯು ತಂಡಕ್ಕೆ ಆಧಾರಸ್ತಂಭವಾಗಿತ್ತು ಎಂದಿದ್ದಾರೆ.(ಏಜೆನ್ಸೀಸ್)