

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಥೋತ್ಸವ ಸಂದರ್ಭ ಅವಘಡ ಹಿನ್ನೆಲೆಯಲ್ಲಿ ಮೇ 21ರಂದು ನಡೆದ ಅಷ್ಟಮಂಗಲ ಪ್ರಶ್ನೆಯ ಮುಂದಿನ ಭಾಗವಾಗಿ ವಿಮರ್ಶೆ ಮತ್ತು ಪರಿಹಾರಗಳ ಬಗ್ಗೆ ಪ್ರಶ್ನಾಚಿಂತನೆ ಸೋಮವಾರ ವಿಧ್ಯುಕ್ತವಾಗಿ ಆರಂಭಗೊಂಡು ಗಣಿತ ಪುಟ ರಚನೆ, ಗೃಹಗತಿ, ಅಂಶಕಗಳ ವಿವರಣೆ ನೀಡಲಾಯಿತು.
ಕಾಸರಗೋಡು ವಳಕುಂಜೆಯ ದೈವಜ್ಞ ವೆಂಕಟರಮಣ ಭಟ್, ಅವರ ಪುತ್ರ ಮುರಳೀಕೃಷ್ಣ ಶರ್ಮ ಹಾಗೂ ವಿಮರ್ಶಕರಾದ ಸದಾನಂದ ನಾರಾಯಣ ಪೊದುವಾಳ್ ಉಪಸ್ಥಿತಿಯಲ್ಲಿ ಶ್ರೀ ದೇವಳದ ಜ್ಞಾನಮಂದಿರದಲ್ಲಿ ಪ್ರಶ್ನಾಚಿಂತನೆ ಆರಂಭಗೊಂಡಿತು.
ದೈವಜ್ಞ ಮಂಡಳಿಯನ್ನು ಸಾಂಪ್ರದಾಯಿಕವಾಗಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಉಪಸ್ಥಿತಿಯಲ್ಲಿ ಒಂಬತ್ತು ಮಾಗಣೆ ಭಕ್ತರ ಪರವಾಗಿ ಸ್ವಾಗತಿಸಲಾಯಿತು. ಶ್ರೀ ದೇವಳದಲ್ಲಿ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್ ವಿಶೇಷ ಪ್ರಾರ್ಥನೆ ನಡೆಸಿದರು.
ಧನು ರಾಶಿಯಿಂದ ಆರಂಭಗೊಂಡ ಪ್ರಶ್ನಾ ಚಿಂತನೆಯಲ್ಲಿ ಗಣಿತ ಪುಟರಚನೆ, ಗ್ರಹಗತಿ ಮತ್ತು ಅಂಶಕಗಳ ವಿವರಣೆಯೊಂದಿಗೆ ಸೋಮವಾರ ಪ್ರಥಮ ದಿನದ ಚಿಂತನೆ ನಡೆಸಲಾಯಿತು. ಮಂಗಳವಾರದಿಂದ ನಿರಂತರವಾಗಿ ವಿಮರ್ಶೆ ಮುಂದುವರಿಯಲಿದೆ.
ಶ್ರೀ ದೇವಳದ ಆನುವಂಶಿಕ ಮೊಕ್ತೇಸರ, ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅತ್ತೂರುಬೈಲು ವೆಂಕಟರಾಜ ಉಡುಪ, ಡಾ.ಹರಿಕೃಷ್ಣ ಪುನರೂರು, ಜೋತಿಷ ವಿದ್ವಾನ್ ವಾಸುದೇವ ಭಟ್ ಪಾವಂಜೆ, ವಾದಿರಾಜ ಉಪಾಧ್ಯಾಯ ಕೊಲಕಾಡಿ, ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ಸುನೀಲ್ ಆಳ್ವ, ಶರತ್ ಸಾಲ್ಯಾನ್, ರಾಮಚಂದ್ರ ನಾಯ್ಕ ಕೊಲ್ನಾಡುಗುತ್ತು, ಮಿಥುನ್ ರೈ, ಸುಜಿತ್ ಎಸ್.ಸಾಲ್ಯಾನ್, ಗುರುವಪ್ಪ ಕೋಟ್ಯಾನ್, ಚಂದ್ರಶೇಖರ ಜಿ.ಕಾಸಪ್ಪನವರ ಮನೆ, ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಅಶೋಕ್ ಕುಮಾರ್ ಶೆಟ್ಟಿ, ವಾಮನ ಕೋಟ್ಯಾನ್ ನಡಿಕುದ್ರು, ಸುಕುಮಾರ್ ಶೆಟ್ಟಿ, ಮೋಹನ್ ಕೋಟ್ಯಾನ್, ಜೀವನ್ ಕೆ.ಶೆಟ್ಟಿ, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ನಾಗೇಶ್ ಬಪ್ಪನಾಡು, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.