

ಮಂಗಳೂರು: ಲೋನ್ ಆ್ಯಪ್ ಜಾಲಕ್ಕೆ ಸಿಲುಕಿದ ಯುವಕ ಸಾಲ ಮರುತೀರಿಸಲಾಗದೆ ಮರ್ಯಾದೆಗೆ ಹೆದರಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಆತ್ಮಹತ್ಯೆ ಮಾಡಿಕೊಂಡವರು.
ಪ್ರಕರಣ ವಿವರ: ನಿಖಿಲ್ ಅವರು ಲೋನ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದರು. ಇದನ್ನು ತೀರಿಸಲಾಗದೆ ಮಾನಸಿಕವಾಗಿ ನೊಂದು ಕೊಂಡಿದ್ದರು. ಭಾನುವಾರ ಬೆಳಗ್ಗೆ ಮನೆಯಲ್ಲಿ ಉಪಹಾರ ಸೇವಿಸಿದ ನಿಖಿಲ್ ಪೂಜಾರಿ ತಮ್ಮ ಕೋಣೆ ಸೇರಿದ್ದರು. ಹಗಲಿನಲ್ಲಿ ಮಲಗುವ ಅಭ್ಯಾಸ ಇದ್ದುದರಿಂದ ಮನೆಯವರು ಗಮನ ಹರಿಸಿರಲಿಲ್ಲ. ಸಂಜೆ ಬಳಿಕ ಬಾಗಿಲು ಬಡಿದರೂ ತೆಗೆಯದಿದ್ದು, ೆನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ ಬಾಗಿಲಿನ ಎಡೆಯಿಂದ ನೋಡಿದಾಗ ನಿಖಿಲ್ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಆತನಿಗೆ ಆರ್ಥಿಕ ಹೊರೆಯಿತ್ತು. ಬೇರೆ ಬೇರೆ ಆ್ಯಪ್‌ಗಳಲ್ಲಿ ಆತ ಸಾಲ ಪಡೆದಿದ್ದು, ಗಮನಕ್ಕೆ ಬಂದಿದೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.