More

    ಆಶಿಕಾ ಕಬಡ್ಡಿ ಕಬಡ್ಡಿ … ತಮಿಳು ಚಿತ್ರದಲ್ಲಿ ಅಥರ್ವ ಜತೆಗೆ ನಟನೆ

    ಬೆಂಗಳೂರು: ‘ಈಗಾಗಲೇ ಪರಭಾಷೆಯ ಒಂದು ಸಿನಿಮಾ ಮಾತುಕತೆ ನಡೆಯುತ್ತಿದೆ. ಅಧಿಕೃತವಾಗಿ ಇನ್ನೂ ಸಹಿ ಹಾಕಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್‌ನಲ್ಲಿ ಆ ಸಿನಿಮಾ ಕೆಲಸ ಶುರುವಾಗಲಿದೆ …’

    ಇದನ್ನೂ ಓದಿ: ‘ಪುರುಷೋತ್ತಮ’ ಹಾಡಿದಾಗ … ಹೊರಬಂತು ಚಿತ್ರದ ಗೀತೆಗಳು

    ಹಾಗಂತ ಮೂರು ತಿಂಗಳ ಹಿಂದೆಯೇ ‘ವಿಜಯವಾಣಿ’ ಜತೆಗೆ ಮಾತನಾಡುವ ಸಂದರ್ಭದಲ್ಲಿ ಆಶಿಕಾ ಹೇಳಿಕೊಂಡಿದ್ದರು. ಅದರಂತೆ, ಆ ಚಿತ್ರ ಶುರುವಾಗಿದೆ. ಅಷ್ಟೇ ಅಲ್ಲ, ಚಿತ್ರೀಕರಣದಲ್ಲಿ ಭಾಗವಹಿಸಿರುವ ಫೋಟೋಗಳನ್ನು ಆಶಿಕಾ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

    ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅಥರ್ವಗೆ ನಾಯಕಿಯಾಗಿ ಆಶಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮುಂತಾದ ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ಧಲಿಂಗಯ್ಯ ಅವರ ಮೊಮ್ಮಗನಾದ ಅಥರ್ವ, ಈಗ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. ಈ ಚಿತ್ರದಲ್ಲಿ ಅಥರ್ವ ಕಬಡ್ಡಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದು, ಆಶಿಕಾ ಸಹ ಇಲ್ಲಿ ಕಬಡ್ಡಿ ಆಟಗಾರ್ತಿಯಾಗಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ಮರ್ಡರ್ ಮಿಸ್ಟ್ರಿ ಕಥೆ ಹೇಳ್ತಾರಂತೆ ವಸಿಷ್ಠ ಬಂಟನೂರು!

    ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅಥರ್ವ ಮತ್ತು ಆಶಿಕಾ ಅಲ್ಲದೆ, ರಾಜ್‌ಕಿರಣ್, ರಾಧಿಕಾ ಶರತ್ ಕುಮಾರ್, ರವಿ ಕಾಳೆ ಮುಂತಾದವರು ನಟಿಸುತ್ತಿದ್ದಾರೆ.

    ಮತ್ತೆ ಕಿರುತೆರೆಗೆ ಗಣೇಶ್; ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts