ಕುಂದಾಪುರ ಚರ್ಚ್‌ನಲ್ಲಿ ಸ್ವರ್ಗಾರೋಹಣ ಆಚರಣೆ

church
ಕುಂದಾಪುರ ಚರ್ಚ್‌ನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
Published on

ಕುಂದಾಪುರ: ಕುಂದಾಪುರ ಚರ್ಚ್‌ನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬ ಗುರುವಾರ ಆಚರಿಸಲಾಯಿತು. ಬಲಿದಾನದ ನಂತರ ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕಲಿಕೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಘಟಕದ ನಿಕಟಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭಾದ ಪದಾಧಿಕಾರಿಗಳಾದ ವಿನೋದ್ ಕ್ರಾಸ್ತಾ, ಬರ್ನಾಡ್ ಡಿಕೋಸ್ತಾ, ಜೂಲಿಯೆಟ್ ಪಾಯ್ಸ, ವಾಲ್ಟರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿ, ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net