ಆಸರೆ ಪಂಚಮ ಸಂಭ್ರಮ ಕಾರ್ಯಕ್ರಮ

Asare
ಆಸರೆ ಯುವಕ ಮಂಡಲ ಕಾರ್ತಟ್ಟು ಚಿತ್ರಪಾಡಿ ಪಂಚಮ ವರುಷದ ಸಾಂಘಿಕ ಪಯಣದ ಸವಿ ನೆನಪಿನಲ್ಲಿ ಆಸರೆ ಪಂಚಮ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗುರು ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ ಅವರನ್ನು ಗೌರವಿಸಲಾಯಿತು
Published on

ಕೋಟ: ಆಸರೆ ಯುವಕ ಮಂಡಲ ಕಾರ್ತಟ್ಟು ಚಿತ್ರಪಾಡಿ ಪಂಚಮ ವರ್ಷದ ಸಾಂಘಿಕ ಪಯಣದ ಸವಿ ನೆನಪಿನಲ್ಲಿ ಆಸರೆ ಪಂಚಮ ಸಂಭ್ರಮ ಕಾರ್ಯಕ್ರಮ ಗುರುವಾರ ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಶಿಕ್ಷಕಿ ಪುಷ್ಪಾವತಿ ಎಚ್. ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಕ್ಷಗುರು ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ತ್ರಿಶಿಕಾ ಪೂಜಾರಿ ಎಂಬ ಮಗುವಿನ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಹಮ್ಮಿಕ್ಕೊಂಡ ಆಸರೆ ಅದೃಷ್ಟ ಬಹುಮಾನ ಯೋಜನೆ ಫಲಿತಾಂಶ ಪ್ರಕಟಗೊಳಿಸಲಾಯಿತು. ಅದೃಷ್ಟ ಬಹುಮಾನ ಯೋಜನೆಯಿಂದ ಸಂಗ್ರಹಿಸಿದ ಮೂರು ಲಕ್ಷ ರೂ.ಗಳಲ್ಲಿ ಬಹುಮಾನದ ಮೊತ್ತ ಹೊರತುಪಡಿಸಿ ಉಳಿದ 2,75,000/- ಮೊತ್ತವನ್ನು ಆಸರೆ ಸಹಾಯನಿಧಿಯಾಗಿ ಮಗುವಿನ ಪಾಲಕರಿಗೆ ಹಿರಿಯ ಸಾಹಿತಿಗಳಾದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹಸ್ತಾಂತರಿಸಿದರು.

ಪತ್ರಕರ್ತ ಸಂಘ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು. ಯುವಕ ಮಂಡಲ ಅಧ್ಯಕ್ಷ ಯೋಗೀಶ್ ಆಚಾರ್ ಕಾರ್ಯಕ್ರಮದ ಉದ್ದೇಶ ಹಾಗೂ ಯುವಕ ಮಂಡಲದ ಕಾರ್ಯವೈಖರಿ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರು. ಯುವಕ ಮಂಡಲ ಕಾರ್ಯದರ್ಶಿ ಮಂಜುನಾಥ್ ಕಾರ್ತಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net