

Aryan Khan: ಬಾಲಿವುಡ್ ಕಿಂಗ್ ಖಾನ್, ಹಿರಿಯ ನಟ ಶಾರುಖ್ ಖಾನ್ ಎಂದರೆ ಸಿನಿಪ್ರಿಯರಿಗೆ ಗೊತ್ತಿಲ್ಲ ಅನ್ನೋ ಮಾತೇ ಇಲ್ಲ. 90ರ ದಶಕದಲ್ಲಿ ಹಿಂದಿ ಚಲನಚಿತ್ರೋದ್ಯಮವನ್ನು ಆಳಿದ ಸ್ಟಾರ್ ಹೀರೋ ಶಾರುಖ್, ಇಂದಿಗೂ ಯಾವುದಾದರೂ ಒಂದು ವಿಚಾರದ ಮೂಲಕ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿರುತ್ತಾರೆ. ಈಗಲೂ ಯುವಕರಂತೆ ಫಿಟ್ನೆಸ್ ಕಾಪಾಡಿಕೊಂಡಿರುವ ಖಾನ್, ತಮ್ಮ ಮಗ ಆರ್ಯನ್ನನ್ನು ಬಾಲಿವುಡ್ನಲ್ಲಿ ಮುಂದಿನ ಶಾರುಖ್ ಆಗಿ ನೋಡುವ ಬಯಕೆಯಲ್ಲಿದ್ದಾರೆ. ಸದ್ಯ ತಂದೆಯಂತೆ ಸ್ಟಾರ್ ಹಾದಿಯನ್ನು ಹಿಡಿದಿರುವ ಆರ್ಯನ್, ಹಲವು ಆಸ್ತಿಗಳ ಒಡೆಯ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ಈ ಹಿಂದೆ ಡ್ರಗ್ಸ್ ಕೇಸ್ ವಿವಾದದಲ್ಲಿ ಸಿಲುಕಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಹರಿದಾಡಿತ್ತು. ಅದಾದ ಬಳಿಕ ನಟನಾಗಿ ಕಾಣಿಸಿಕೊಳ್ಳುವುದಕ್ಕಿಂತ ನಿರ್ದೇಶನದ ಕ್ಯಾಪ್ ತೊಟ್ಟಿರುವ ಆರ್ಯನ್, ಇತ್ತೀಚೆಗೆ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ಎಂಬ ವೆಬ್ ಸರಣಿಯ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಬಾಲಿವುಡ್ ವರದಿಯ ಪ್ರಕಾರ, ಆರ್ಯನ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ 80 ಕೋಟಿ ರೂ.ಗಿಂತ ಹೆಚ್ಚು ಎನ್ನಲಾಗಿದೆ.
ಆರ್ಯನ್ ಅಮೆರಿಕ ಮತ್ತು ಇಂಗ್ಲೆಂಡ್ನಲ್ಲಿ ಸಿನಿಮಾ ನಿರ್ಮಾಣದ ಕೋರ್ಸ್ಗಳನ್ನು ಅಧ್ಯಯನ ಮಾಡಿದ್ದಾರೆ. ಕೆಲ ಸಮಯದವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವರು, ಈಗ ಪರಿಪೂರ್ಣ ನಿರ್ದೇಶಕರಾಗಿ ಹಾಗೂ ಒಂದಷ್ಟು ಬಿಜಿನೆಸ್ ಕೂಡ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ, ಕೆಲವು ವ್ಯವಹಾರಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆರ್ಯನ್ ಬಳಿ ಸುಮಾರು 7.83 ಲಕ್ಷ ರೂ. ಮೌಲ್ಯದ ದುಬಾರಿ ವಾಚ್ ಇದೆ. ಇತ್ತೀಚೆಗೆ, ದೆಹಲಿಯಲ್ಲಿ 37 ಕೋಟಿ ರೂ. ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ. ಇದಲ್ಲದೇ, ಆಡಿ A6, ಎರಡು ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯೂನಂತಹ ಹಲವು ಐಷಾರಾಮಿ ಕಾರುಗಳಿವೆ. ಪ್ರಸ್ತುತ, ಆರ್ಯನ್ಗೆ 27 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೇ ಅವರು ಇಷ್ಟೊಂದು ಸಂಪಾದಿಸಿದ್ದಾರೆ ಎಂದರೆ, ಮುಂದಿನ ದಿನಗಳಲ್ಲಿ ತಂದೆ ಗಳಿಸಿರುವುದನ್ನು ಮೀರಿಸಿದದೂ ಆಶ್ಚರ್ಯವಿಲ್ಲ. ಇದೆಲ್ಲವೂ ಕೇವಲ ಆರ್ಯನ್ ಗಳಿಕೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).