

ಶಂಕರರು ವಿವರಣೆಗಳನ್ನು ಕೊಡುವಾಗ ಗೀತಾಚಾರ್ಯ ನಾಗಿಯೂ, ಹಿತಚಿಂತಕನಾಗಿಯೂ, ಯೋಗಿಯಾಗಿಯೂ ಉಪಾಧ್ಯಾಯನಾಗಿಯೂ, ಲೌಕಿಕನಾಗಿಯೂ, ಕೀಟಶಾಸ್ತ್ರಜ್ಞನಾಗಿಯೂ, ವೈಯ್ಯಾಕರಣಿಯಾಗಿಯೂ ಮತ್ತು ಬ್ರಹ್ಮನಿಷ್ಠನಾಗಿಯೂ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.
ಇಂತಹ ಶಂಕರರನ್ನು ಬೆಳಕಿಗೆ ತಂದವರು ನಮ್ಮ ಕರ್ನಾಟಕದವರೇ ಆದ ಹೊಳೆನರಸೀಪುರದ ಸಚ್ಚಿದಾ ನಂದೇಂದ್ರ ಸರಸ್ವತೀ ಸ್ವಾಮಿಗಳವರು. ಇವರಾದರೋ ಶಂಕರರ ಸಂಸ್ಕೃತ ಪ್ರಸ್ಥಾನತ್ರಯ ಭಾಷ್ಯಗಳನ್ನು ಆಗಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಸಂಕಲ್ಪದಂತೆ ಮೊಟ್ಟ ಮೊದಲಿಗೆ ಕನ್ನಡ ಭಾಷೆಗೆ ಅಚ್ಚುಕಟ್ಟಾಗಿ ಭಾಷಾಂತರಿಸಿದ ಕುಶಲಿ. ಶ್ರೀಗಳು ತಮ್ಮ ಇಡೀ ಜೀವನವನ್ನು ಪರಿಶುದ್ಧ ಶಾಂಕ ರಾದ್ವೈತ ವೇದಾಂತಗಳ ಪ್ರಚಾರಕ್ಕಾಗಿಯೇ ಮುಡುಪಾಗಿಟ್ಟಿದ್ದರು. 300ಕ್ಕೂ ಹೆಚ್ಚು ಗ್ರಂಥಗಳನ್ನು (ಕನ್ನಡ-150, ಇಂಗ್ಲಿಷ್-80 ಹಾಗೂ ಸಂಸ್ಕೃತ-70) ಗ್ರಂಥಗಳನ್ನು ರಚಿಸಿ, ಯಾರ ಆರ್ಥಿಕ ಸಹಾಯವೂ ಇಲ್ಲದೆ, ತಮಗೆ ಭಿಕ್ಷೆಗೆ ಬಂದ ಕಾಣಿಕೆಗಳ ಮೂಲಕ ತಾವೇ ಅಚ್ಚು ಹಾಕಿಸಿದ್ದಾರೆ. ಅದಕ್ಕಾಗಿಯೇ ಇವರು ‘ಕರ್ನಾಟಕ ಶಂಕರ’ರೆಂದೇ ಪ್ರಖ್ಯಾತರಾಗಿದ್ದಾರೆ.
ಶಂಕರರು ಪ್ರಸ್ಥಾನತ್ರಯ (ಶ್ರೀಮದ್ಭಗವದ್ಗೀತೆ, ಹತ್ತು ಉಪನಿಷತ್ತುಗಳು ಹಾಗೂ ಭಗವಾನ್ ಬಾದರಾಯಣಾಚಾರ್ಯರ ಬ್ರಹ್ಮಸೂತ್ರಗಳು )ಗಳಿಗೆ ವಿವರ - ಭಾಷ್ಯವನ್ನು ಸಂಸ್ಕೃತ ಭಾಷೆಯಲ್ಲಿ ಸಕಲಮಾನವರಿಗೂ ಅನುಗ್ರಹಿಸಿ, ಎಚ್ಚರಿಸಿ ಎಲ್ಲರ ನಿಜಸ್ವರೂಪ- ಅದ್ವಿತೀಯ ಪರಬ್ರಹ್ಮವೇ ಎಂದು ಜಗತ್ತಿಗೆ ಸಾರಿದ ಅವತಾರಪುರುಷ.
ಶಂಕರರ ಕಾಲದಲ್ಲಿ ವಿಜ್ಞಾನಕ್ಕೆ, ವಿಚಾರಕ್ಕೆ,ವಿಮರ್ಶೆಗೆ ಹೆಚ್ಚು ಬೆಲೆ ಕೊಡದೆ, ಕೇವಲ ನಂಬಿಕೆ, ಆಚಾರಾದಿಗಳು( ಕರ್ವೇಪಾಸನೆಗಳು, ಕರ್ಮಕಾಂಡಗಳು) ಮುಂತಾದವುಗಳಿಗೇ ಪ್ರಾಧಾನ್ಯತೆ, ಹಾಗೂ ತರ್ಕಾದಿಗಳು, ವ್ಯಾಕರಣ ಅರಿತವರು ಮಾತ್ರ ವೇದಾಧ್ಯಯನ, ಯಜ್ಞ ಯಾಗಾದಿಗಳಿಗೆ ಮನ್ನಣೆ ಕೊಡುತ್ತಿದ್ದರು. ಇದನ್ನು ಕಂಡ ಶಂಕರರು ವೇದಾಂತಗಳ ಹೆಚ್ಚುಗಾರಿಕೆಯನ್ನು- ಅಂದರೆ ಪ್ರತಿಯೊಬ್ಬ ಮಾನವನೂ ಜಾತಿವರ್ಣಾಶ್ರಮಗಳ ಹಂಗಿಲ್ಲದೆ ಪರಿಶುದ್ಧಾಂತಃಕರಣದವರಾಗಿ ತಮ್ಮ ನಿಜಸ್ವರೂಪವನ್ನು ಉಪನಿಷತ್ತುಗಳಲ್ಲಿ ತಿಳಿಸಿರುವ ಕ್ರಮದಲ್ಲಿ ಸದ್ಗುರುವಿನ ಸಹಾಯದಿಂದ ಅನುಭವದಲ್ಲಿ ಅರಿತರೆ, ಶಾಂತಿ, ಸುಖ ಲಭಿಸುವದರಲ್ಲಿ ಸಂಶಯವಿಲ್ಲ ಎಂದು ಸಾರಿದ್ದಾರೆ. ಮುಖ್ಯವಾಗಿ ಶುದ್ಧಮನಸ್ಸುಳ್ಳವರು ಮನಃಪ್ರಧಾನವಾಗಿ ವಿಚಾರಮಾಡಲು, ಸತ್ಯಶೋಧಕರಾಗಲು ಎಲ್ಲ ಮಾನವರಿಗೂ ವೇದಾಂತಕ್ಕೆ ಸ್ವಾಗತಕೋರಿದ್ದಾರೆ ಕರುಣಾಮಯ ಶಂಕರರು. ವಿಶೇಷವೇನೆಂದರೆ - ಇಲ್ಲಿ ಜಾತಿ, ಕುಲ ಪಂಥ, ವರ್ಣ, ಆಶ್ರಮ, ದೇಶ, ಕಾಲ ಯಾವುದರ ವಿಭಾಗವೂ ಇಲ್ಲ.
ಸತ್ಯಾನ್ವೇಷಕರಾಗಲು ಶಂಕರರ ಒಂದೇ ನಿಯಮವೆಂದರೆ - ಶುದ್ಧಾಂತಃಕರಣರಾಗಿರಬೇಕು. ಹಾಗಾದರೆ ಮನಸ್ಸು ಶುದ್ಧವಾಗಲು ನಾವೇನು ಮಾಡಬೇಕು? ನಾವು ನಿತ್ಯ ಮಾಡುವ ಪೂಜೆ, ಭಜನೆ, ಸ್ತೋತ್ರ, ಧ್ಯಾನ ಮುಂತಾದ ಎಲ್ಲ ಕಾರ್ಯಗಳಲ್ಲಿಯೂ ಭಗವಂತನಲ್ಲಿ ಏನನ್ನೂ ಬೇಡದೆ, ಪೀಡಿಸದೆ ಕೇವಲ ಭಗವಂತನ ಪ್ರೀತ್ಯರ್ಥವಾಗಿ, ಭಗವಂತನೇ ಬೇಕು ಎಂಬ ತೀವ್ರತೆಯಿಂದ ಏಕಾಗ್ರಚಿತ್ತನಾಗಿ ಭದ್ರಂ ಕರ್ಣೆಭಿಃ ಶೃಣುಯಾಮ ದೇವಾಃ, ಭದ್ರಂ ಪಶ್ಯೇಮ ಅಕ್ಷಿಭಿಃ ಯಜತ್ರಾಃ ಮುಂತಾಗಿ (ಎಲೈ ದೇವತೆಗಳೇ ನಮ್ಮ ಕಿವಿಗಳಿಗೆ ಮಂಗಳಕರ ವಿವೇಕ ಸಂದೇಶಗಳನ್ನೇ ಕೇಳಿಸುವವರಾಗಿ, ನಮ್ಮ ಕಣ್ಣುಗಳಿಂದ ಒಳ್ಳೆಯ ದೃಶ್ಯಗಳನ್ನೇ ನೋಡುವಂತಾಗಲಿ..) ಎಂದು ಪ್ರಾರ್ಥಿಸುತ್ತಾ ಬಂದರೆ ಸಾಕು. ಇದೇ ಕರ್ಮಯೋಗ. ಮನಸ್ಸು ಶುದ್ಧವಾಗುವದರಲ್ಲಿ ಸಂಶಯವಿಲ್ಲ.
ಸದ್ಗುರುವು ದೊರಕುವುದೂ ಪೂರ್ವಜನ್ಮ ಸುಕೃತವೇ. ಸದ್ಗುರುವನ್ನು ಹುಡುಕಿ, ಗುರುತಿಸುವದರಲ್ಲಿ ಬಹಳ ಎಚ್ಚರಿಕೆ ಇರಬೇಕು. ಎಲ್ಲ ಗುರುಗಳೂ ನಾನು ಹೇಳುವುದೇ ಸರಿ, ಇದನ್ನೇ ವೇದಗಳಲ್ಲಿ ಹೇಳಿದೆ, ಕೇಳಿರಿ, ಕೇಳಿರಿ ಎನ್ನುತ್ತಾರೆ. ಆದರೆ ಸದ್ಗುರುವು ವೇದಾಂತ ಸಂಪ್ರದಾಯ ಮಾರ್ಗದಂತೆ, ಶಿಷ್ಯನಿಂದ ಏನನ್ನೂ ಅಪೇಕ್ಷಿಸದೆ ಕೇವಲ ಅವನ ಕಿವಿಯನ್ನು, ತೀವ್ರತೆಯನ್ನು ಮಾತ್ರ ಅಪೇಕ್ಷಿಸುತ್ತಾ ಉದ್ಧಾರಮಾಡುವ ಮಹಾತ್ಮ, ಅವ್ಯಾಜ ಕರುಣಾಮೂರ್ತಿ ಎನ್ನುತ್ತಾರೆ ಶಂಕರರು. ಶಂಕರರು ಮಹಾನ್ ವಿಜ್ಞಾನಿ, ವಿಚಾರವಾದಿ, ಶ್ರೇಷ್ಠವಿಮರ್ಶಕರೂ ಹೌದು. ವೇದಗಳಲ್ಲಿನ ವಿಷಯಗಳನ್ನು ಸ್ಪಷ್ಟವಾಗಿ ಕರ್ಮಕಾಂಡ ಮತ್ತು ಜ್ಞಾನಕಾಂಡವಾಗಿ ವಿಂಗಡಿಸಿದ ಪ್ರಪ್ರಥಮ ವಿವೇಕಿ ಬಾಲಕ. ತನ್ನನ್ನು ತಾನು ಅರಿಯಲು ಯಾವ ಕರ್ಮಗಳ ಹಂಗೂ ಇಲ್ಲ, ಜಿಜ್ಞಾಸತ್ವ- ಮುಮುಕ್ಷುತ್ವಗಳಿದ್ದರೆ ಸಾಕು, ಶಾಂತಿ, ತೃಪ್ತಿ, ನೆಮ್ಮದಿ, ಕೃತಕೃತ್ಯತೆ ಸಿಗುವುದು ಸತ್ತಮೇಲಲ್ಲ, ತತ್ ತ್ವಂ ಅಸಿ, ಜೀವನ್ನೇವ ಎಂದು ಸಾರಿದ್ದಾರೆ.
ಶಂಕರರ ಕೆಲವು ಎಚ್ಚರಿಕೆಯ ಮಾತುಗಳು-ಹಿತವಚನಗಳು ಹೀಗಿವೆ: ್ಞೋಕ್ಷವೆಂದರೆ ಸಾಯುವುದೆಂದಲ್ಲ, ನೈಜ ಆತ್ಮನಲ್ಲಿ ಉಳಿಯುವುದು. ್ಞೕವನ್ಮುಕ್ತಿ ಎಲ್ಲ ಮಾನವರ ಹಕ್ಕು, ್ಞಮ್ಮೆಲ್ಲರ ದುಃಖಗಳಿಗೂ ಅಜ್ಞಾನವೇ ಕಾರಣ. ್ಞೇವಲ ಪುಣ್ಯ ಸಂಪಾದನೆ, ಧನಸಂಪಾದನೆ ಮಾನವಜನ್ಮದ ಗುರಿಯಲ್ಲ. ್ಞಾನು-ತಾನು ಬಿಡಿಸಿ ಸದ್ಗುರುವಿನ ಮೂಲಕ ಅರಿತವರೆಲ್ಲರೂ ಶಂಕರರೇ. ್ಞಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ’-(ಕಠ) ‘ಏಳಿರಿ ಎಚ್ಚರಗೊಳ್ಳಿ ಸದ್ವಿಚಾರವಂತರಾಗಿ, ಮಾನವಜನ್ಮ ಸಾರ್ಥಕಪಡಿಸಿಕೊಳ್ಳಿ.’
(ಲೇಖಕರು ಹವ್ಯಾಸಿ ಬರಹಗಾರರು)