ಅಳಿಕೆ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಕಲಾಸೇವೆ

New Project (9)
Published on: 

ಬೆಳ್ತಂಗಡಿ: ಅಳಿಕೆ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯ ಸಾಯಿ ಸಿಂಪನಿ ತಂಡದ ವಿದ್ಯಾರ್ಥಿಗಳು ಬುಧವಾರ ಧರ್ಮಸ್ಥಳದಲ್ಲಿ ಕಲಾಸೇವೆ ಅರ್ಪಿಸಿದರು.

ಪೊಲೀಸ್ ಬ್ಯಾಂಡ್‌ಸೆಟ್ ವಾದನದ ಬಗ್ಗೆ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿಗಳು ಸಾರೇ ಜಹಾಂ ಸೆ ಅಚ್ಛಾ, ಸತ್ಯಂ ಶಿವಂ ಸುಂದರಂ ಮೊದಲಾದ ರಾಷ್ಟ್ರಭಕ್ತಿಯ ಪದ್ಯಗಳನ್ನು ಸಾದರಪಡಿಸಿದರು. ಅಳಿಕೆ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ನೇತೃತ್ವದಲ್ಲಿ ಉಪನ್ಯಾಸಕರಾದ ಚಂದ್ರಶೇಖರ ಭಟ್, ಜನಾರ್ದನ ನಾಯ್ಕ, ಚಂದ್ರಶೇಖರ ಜೈನ್ ಮತ್ತು ನಾಗರಾಜ ಅವರೊಂದಿಗೆ 43 ವಿದ್ಯಾರ್ಥಿಗಳು ಧರ್ಮಸ್ಥಳಕ್ಕೆ ಆಗಮಿಸಿದ್ದರು.

ಸಂಸ್ಥೆ ಪರವಾಗಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಲಾಯಿತು. ಹೇಮಾವತಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.