ವಿಶ್ವಾಸ ಅನ್ಯೋನ್ಯತೆಗೆ ಎನ್‌ಎಸ್‌ಯುಐ ಪ್ರೇರಣೆ : ಬಿ.ರಮಾನಾಥ ರೈ ಅಭಿಮತ

Published on

ಬಂಟ್ವಾಳ: ವಿದ್ಯಾರ್ಥಿ ಜೀವನದಲ್ಲಿ ದೇಶದ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡು ದೇಶದಲ್ಲಿರುವ ಸರ್ವ ಧರ್ಮ, ಜಾತಿ, ಜನಾಂಗದವರ ಜತೆ ಪ್ರೀತಿ ವಿಶ್ವಾಸ ಅನ್ಯೋನ್ಯತೆಯಿಂದ ಜೀವಿಸಲು ಎನ್.ಎಸ್.ಯು.ಐ. ಪ್ರೇರಣೆಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಮ್ಮೂರ ಹೆಮ್ಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್, ಸದಸ್ಯರಾದ ಪಿಯೂಸ್ ಎಲ್.ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ನೋಟರಿ, ವಕೀಲರಾದ ಅಶ್ವಿನಿ ಕುಮಾರ್ ರೈ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುರಯ್ಯ ಅಂಜುಮ್, ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು ಶುಭ ಹಾರೈಸಿದರು.

ಪಕ್ಷ ಪ್ರಮುಖರಾದ ಪದ್ಮಶೇಖರ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಬಿ.ಎಂ.ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ, ವಿನಯಕುಮಾರ್ ಸಿಂಧ್ಯಾ, ಫಾರೂಕ್ ಪೆರ್ನೆ, ಸುಖ್ವೀಂದರ್ ಸಿಂಗ್, ಶಾನ್ ಸಿರಿ, ಕೆ.ಪದ್ಮನಾಭ ರೈ, ಸುಧಾಕರ ಶೆಣೈ ಖಂಡಿಗ, ಚಿತ್ತರಂಜನ್ ಶೆಟ್ಟಿ, ಜಯಂತಿ ವಿ.ಪೂಜಾರಿ, ಶೈಲಜಾ ರಾಜೇಶ್, ಲವೀನಾ ವಿಲ್ಮಾ ಮೊರಾಸ್, ಉದ್ಯಮಿ ಸಲಾಂ ಸಮ್ಮಿ, ಪ್ರಜ್ವಲ್ ಶೆಟ್ಟಿ, ಮುಹಮ್ಮದ್, ಅರ್ಶದ್, ಸಿರಾಜ್ ಮದಕ, ಸಿದ್ದೀಕ್, ಸಮದ್, ವೆಂಕಪ್ಪ ಪೂಜಾರಿ, ಯೂಸುಫ್ ಕರಂದಾಡಿ, ಮೋನು, ಶಫೀಕ್ ಭಾಗವಹಿಸಿದ್ದರು.

ಪದಾಧಿಕಾರಿಗಳಾದ ನಿಹಾಲ್ ನೆಹರುನಗರ, ಸಿದ್ದೀಕ್, ಸವಾದ್, ಸಲ್ಮಾನ್, ಪವನ್ ಬೊಳ್ಳಾಯಿ, ನಜೀಬ್ ಮಂಚಿ, ಸಾದಿಕ್ ತಾಳಿತ್ತನೂಜಿ, ಜಂಶೀದ್ ಸಹಕರಿಸಿದರು.

ಎನ್.ಎಸ್.ಯು.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುಹಮ್ಮದ್ ಸಫ್ವಾನ್ ಸ್ವಾಗತಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ನಿರೂಪಿಸಿದರು. ಉಪಾಧ್ಯಕ್ಷ ಶ್ರೀವತ್ಸ ಕಲ್ಲಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net