ಇಸ್ಲಾಮಾಬಾದ್: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಚಾಂಪಿಯನ್ ಅರ್ಷದ್ ನದೀಮ್ ಅವರಿಗೆ ಸಾಕಷ್ಟು ಉಡುಗೊರೆಗಳ ಮಹಾಪೂರವೆ ಹರಿದು ಬರುತ್ತಿದೆ. ಅದರಲ್ಲಿ ಅರ್ಷದ್ ನದೀಮ್ ಸಾಧನೆಗೆ ಮೆಚ್ಚಿ ಪಂಜಾಬ್ ಸರ್ಕಾರ ಅವರಿಗೆ ಮಂಗಳವಾರ(ಆಗಸ್ಟ್ 13) 1 ಕೋಟಿ ರೂಪಾಯಿ ಹಾಗೂ ಹೊಸ ಕಾರನ್ನು ನೀಡಿದೆ.
ಇದನ್ನು ಓದಿ: ಹಿಂದುಗಳ ಮೇಲಿನ ದಾಳಿ ಮಧ್ಯೆ ಢಾಕೇಶ್ವರಿ ದೇವಸ್ಥಾನಕ್ಕೆ ಮುಹಮ್ಮದ್ ಯೂನಸ್ ಭೇಟಿ; ಅವರ ಸ್ಪಷ್ಟನೆ ಹೀಗಿದೆ..
ಅರ್ಷದ್ ನದೀಮ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ಮಿಯಾನ್ ಚುನ್ನುನಲ್ಲಿರುವ ಅವರ ಗ್ರಾಮಕ್ಕೆ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಹೋದಾಗ ನಗದು ಬಹುಮಾನ ಮತ್ತು ಕಾರಿನ ಕೀಯನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದದ ಅವರು ಅರ್ಷದ್ ಈ ಎಲ್ಲ ಸನ್ಮಾನವನ್ನು ಪಡೆಯಲು ಅರ್ಹರಾಗಿದ್ದಾರೆ. ಏಕೆಂದರೆ ಅವರು ಅವರ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.
40 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಂಡರು ಮಾತ್ರವಲ್ಲದೆ, ಆಗಸ್ಟ್ 8ರಂದು ಪ್ಯಾರಿಸ್‌ನಲ್ಲಿ ಚಿನ್ನ ಗೆದ್ದಾಗ ಅರ್ಷದ್ ನದೀಮ್ ಜಾವೆಲಿನ್ ಅನ್ನು 92.97 ಮೀಟರ್ ಎಸೆಯುವ ಮೂಲಕ ಹೊಸ ಒಲಿಂಪಿಕ್ ದಾಖಲೆ ಸೃಷ್ಟಿಸಿದರು. ಈ ಸಾಧನೆಯ ಗುರುತಾಗಿ ನೀಡಿರವು ಕಾರಿನಲ್ಲೂ ವಿಶೇಷತೆ ಇದೆ.
ಅರ್ಷದ್ ನದೀಮ್ ಅವರಿಗೆ ಹಸ್ತಾಂತರಿಸಿದ ಕಾರನ್ನು ವಿಶೇಷವಾಗಿ ನೋಂದಾಯಿಸಲಾಗಿದೆ. ಅದೆನೆಂದರೆ ಅರ್ಷದ್ ಅವರ ಕಾರಿನ ಸಂಖ್ಯೆ PAK-92.97. ಒಲಿಂಪಿಕ್ನಲ್ಲಿ ಅವರ ಮೇಕಿಂಗ್ ಥ್ರೋ ಹಾಗೂ ಅವರ ಕಾರಿನ ಸಂಖ್ಯೆ ಎರಡು ಒಂದೆ ಆಗಿದೆ.
ಇದಲ್ಲದೆ ಮರ್ಯಮ್ ನವಾಜ್ ಅವರು ಅರ್ಷದ್ ಕೋಚ್ ಸಲ್ಮಾನ್ ಇಕ್ಬಾಲ್ ಬಟ್ ಅವರಿಗೆ 50 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿ, ಅವರು ನೀಡಿದ ತರಬೇತಿಯನ್ನು ಶ್ಲಾಷಿಸಿದ್ದಾರೆ. (ಏಜೆನ್ಸೀಸ್)
ಹಿಂಡೆನ್‌ಬರ್ಗ್ ಆರೋಪ; ಆ.22ರಂದು ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್