

ವಿಜಯಪುರ: ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಣಮಂತ ಭಜಂತ್ರಿ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ. ಈತ ಹರನಾಳ ಹಾಗೂ ಕುಕನೂರು ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆಗೈದಿದ್ದನು.
ಮಾರ್ಚ್ ಹಾಗೂ ಮೇ ತಿಂಗಳಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆ ಗೈದಿದ್ದ ಹಣಮಂತ ಭಜಂತ್ರಿ. ಕೊಲೆಗೈದು ಶವವನ್ನು ಜಮೀನಿನಲ್ಲಿ ಹೂತಿಡುತ್ತಿದ್ದನು. ಈ ಕುರಿತಾಗಿ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶಹಾಪುರದಲ್ಲಿ ಆರೋಪಿ ಹಣಮಂತ ಭಜಂತ್ರಿ ಬಂಧಿಸಿದ್ದಾರೆ.