ಸಿನಿಮಾ

ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಚಿನ್ನದಂತಹ ಕ್ಷೇತ್ರ ಬಿಟ್ಟು ಹೋದೆ: ವಿ.ಸೋಮಣ್ಣ

ಬೆಂಗಳೂರು: ಚಿನ್ನದಂತಹ ಕ್ಷೇತ್ರ ಬಿಟ್ಟು ವರಿಷ್ಠರು ಹೇಳಿದರು ಎಂದು ಹೊದೆ. ಕೆಲವು ಸಂದರ್ಭದಲ್ಲಿ ಇದೆಲ್ಲ ಆಗುತ್ತೆ. ಅದನ್ನ ಅರಗಿಸಿಕೊಳ್ಳೊ ಶಕ್ತಿ ನನಗಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಅವಕಾಶ ನಿರೀಕ್ಷಿಸಿರಲಿಲ್ಲ. ಪಕ್ಷ ಏನು ಹೇಳಿತ್ತದೆ ಅದನ್ನು ಮಾಡಿದ್ದೇನೆ. ಯಡಿಯೂರಪ್ಪನವರು ಇವತ್ತಿನವರೆಗೂ ಫೋನ್ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರತಿನಿತ್ಯ ಫೋನ್ ಮಾಡುತ್ತಿದ್ದರು. ಎಲೆಕ್ಷನ್ ಮುಗಿದ ಮೇಲೆ ಫೋನ್ ಮಾಡಿಲ್ಲ ಎಂದಿದ್ದಾರೆ.

ನನಗೆ ಧೈರ್ಯ ತುಂಬೇಕು ರೀ..45 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಚಿನ್ನದಂತಹ ಕ್ಷೇತ್ರ, ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಮಾಡದ ಕೆಲಸ ನಾನು ಮಾಡಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿ ಚಿನ್ನದಂತಹ ಕ್ಷೇತ್ರ ಬಿಟ್ಟು ವರಿಷ್ಠರು ಹೇಳಿದರು ಎಂದು ಹೋದೆ. ಕೆಲವು ಸಂದರ್ಭದಲ್ಲಿ ಇದೆಲ್ಲ ಆಗುತ್ತೆ. ಅದನ್ನ ಅರಗಿಸಿಕೊಳ್ಳ ಬೇಕು. ಆ ಶಕ್ತಿ ನನಗಿದೆ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

 ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಮಹಿಳೆಯ ಕೂದಲು ಕತ್ತರಿಸಿ ಮೆರವಣಿಗೆ

ನಾನು ಸತ್ಯ ಮಾತನಾಡುತ್ತೇನೆ, ಅದು ಉಲ್ಟಾ ಬಿಂಬಿಸಲಾಗುತ್ತೆನೆ. ನನಗೆ ಕೊಟ್ಟ ಟಾಸ್ಕ್ ಯಾವ ರೀತಿ ಮಾಡಿದ್ದೇನೆಂದು ಎಲ್ಲರಿಗೂ ಗೊತ್ತು. ಪಕ್ಷ ಏನು ಹೇಳಿತ್ತೊ ಆ ಸಂದೇಶವನ್ನ ತಲೆ ಮೇಲೆ ಹೊತ್ತು ಮಾಡಿದ್ದೇನೆ. ಬಾಕಿ ತೀರ್ಮಾನ ಪಕ್ಷದ ವರಿಷ್ಠರು ಮಾಡಬೇಕಾಗುತ್ತದೆ. ಮಾಡುವುದು ಬಿಡೋದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ನನಗೇನು ಅನುಕೂಲ ಅನ್ನೊದಕ್ಕಿಂತ ಪಕ್ಷಕ್ಕೆ ಶಿಸ್ತಿನ ಸಿಪಾಯಿಗೆ ಕೊಡೊದರಿಂದ ಸಾಮಾನ್ಯ ಜನರ ಭಾವನೆಗೆ ಪಕ್ಷ ಸ್ಪಂದಿಸ್ತು ಎಂಬ ಸಂದೇಶ ಕೊಡುತ್ತೆದೆ ಎಂದು ತಿಳಿಸಿದ್ದಾರೆ.

ಪತಿ ನನ್ನ ಹತ್ಯೆ ಮಾಡಲು ಸುಪಾರಿ ನೀಡಿದ್ದಾನೆ: ರಾಖಿ ಸಾವಂತ್ ಆರೋಪ

Latest Posts

ಲೈಫ್‌ಸ್ಟೈಲ್