

ಬೆಂಗಳೂರು : ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಕಾಮುಕನೊಬ್ಬನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುನೇನಕೊಳಲು ಮಂಜುನಾಥನಗರದ ನಿತೀನ್(25) ಬಂಧಿತ ಆರೋಪಿ. ಖಾಸಗಿ ಫಾರ್ಮಾಸ್ಕೂೃಟಿಕಲ್ ಕಂಪನಿಯ ಉದ್ಯೋಗಿಯಾಗಿರುವ ನಿತಿನ್, ಶನಿವಾರ ಬೆಳಗ್ಗೆ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ.
ಸ್ನಾನ ಮಾಡುವಾಗ ಇದನ್ನು ನೋಡಿರುವ ಮಹಿಳೆ, ಜೋರಾಗಿ ಕಿರುಚಿದ್ದಾರೆ. ತಕ್ಷಣ ಅಕ್ಕಪಕ್ಕದ ಮನೆಯವರು ಓಡಿ ಬಂದು ನಿತಿನ್‌ನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ನಿತೀನ್ ಬಹಳ ದಿನಗಳಿಂದ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ನೋಡುತ್ತಿದ್ದ. ಆದರೆ, ಮಹಿಳೆ ಗಮನಿಸಿರಲಿಲ್ಲ. ಶನಿವಾರವು ಆರೋಪಿಯು ಇದೇ ರೀತಿ ನೋಡುತ್ತಿದ್ದಾಗ ಮಹಿಳೆ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.