ಮಂಗಳಸೂತ್ರ ಕದ್ದಿದ್ದ ಇಬ್ಬರ ಬಂಧನ

Arrest Kaidhi
Published on

ಯಲ್ಲಾಪುರ: ಪಟ್ಟಣದಲ್ಲಿ ಮಂಗಳಸೂತ್ರ ಕದ್ದಿದ್ದ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರಿನ ಅಫ್ಜಲ್ ಖಾದರಗೌಸ್ ಗವಾರಿ ಹಾಗೂ ಶಿರಸಿಯ ರಾಮನಬೈಲಿನ ಫೈಜಾನ್ ಅಬ್ದುಲ್ ಸಮದ್ ಮುಲ್ಲಾ ಬಂಧಿತರು.

ಇವರು ಪಟ್ಟಣದಲ್ಲಿ ಕಳೆದ ಸೆ.25 ರಂದು ಮಹಿಳೆಯೊಬ್ಬರಿಗೆ ವಿಳಾಸ ಕೇಳುವ ನೆಪ ಮಾಡಿಕೊಂಡು ಮಂಗಳಸೂತ್ರ ಕದ್ದೊಯ್ದಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಇವರಿಬ್ಬರು ಶಿವಮೊಗ್ಗ ಜಿಲ್ಲೆಯ ಸಾಗರ, ಆನಂದಪುರ, ಉತ್ತರಕನ್ನಡದ ಭಟ್ಕಳ, ಹೊನ್ನಾವರ ಹಾಗೂ ಯಲ್ಲಾಪುರ ಮುಂತಾದೆಡೆ ಆಭರಣ ಸುಲಿಗೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಇವರಿಂದ ಕೃತ್ಯಕ್ಕೆ ಬಳಸಿದ ಬಜಾಜ್ ಪಲ್ಸರ್ ಬೈಕ್, 55 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ಶಿರಸಿ, ಮುಂಡಗೋಡ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net