

Double Murder: ಮೂವರು ಸ್ನೇಹಿತರು ಒಟ್ಟಿಗೆ ಕುಳಿತು ಎಣ್ಣೆ ಹೊಡೆಯುವಾಗ, ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಓರ್ವ ತನ್ನ ಇಬ್ಬರು ಸ್ನೇಹಿತರಿಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಶನಿವಾರ(ಜು. 26) ನಡೆದಿದೆ.
ಕಟ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಲಾಬ್ವಾಡಿ ಪ್ರದೇಶದಲ್ಲಿ ಮೂವರು ಸ್ನೇಹಿತರು ಒಟ್ಟಿಗೆ ಕುಳಿತು ಎಣ್ಣೆ ಪಾರ್ಟಿ ಮಾಡುವಾಗ ಘಟನೆ ನಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಮತ್ತೋರ್ವ ಆಸ್ಪತ್ರೆಯೆಲ್ಲಿ ಮೃತಪಟ್ಟಿದ್ದಾನೆ. ಚಾಕು ಇರಿದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಬ್ಲು, ಜುನೈದ್ ಸಾವನ್ನಪ್ಪಿದ್ದು, ಚಾಕು ಇರಿದ ಆರೋಪಿ ಶಾಕೀರ್ ಪರಾರಿಯಾಗಿದ್ದಾನೆ. ಮೂವರು ಗಲ್ಶಹೀದ್ ಠಾಣಾ ವ್ಯಾಪ್ತಿಯ ಮೊಹಲ್ಲಾ ಅಸಲತ್ಪುರಾ ನಿವಾಸಿಗಳು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಇಬ್ಬರು ಮತ್ತು ಆರೋಪಿ ಶಾಕೀರ್ ದೆಹಲಿಯಲ್ಲಿ ಶೀಟ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಶಾಕೀರ್ ಶೀಟ್ ಕಟಿಂಗ್ ಕೆಲಸದ ಗುತ್ತಿಗೆದಾರನಾಗಿದ್ದನು. ಆತನ ಬಳಿ ಈ ಇಬ್ಬರು ಕೆಲಸ ಮಾಡ್ತಿದ್ದರು. ಗುತ್ತಿಗೆ ಪಡೆದಿದ್ದ ಶಾಕೀರ್ ಕೆಲಸದಲ್ಲಿ ನಷ್ಟವಾಗ್ತಿದೆ ಎಂದು ಇಬ್ಬರಿಗೂ ಹಣ ಕೊಡುವುದನ್ನು ನಿಲ್ಲಿಸಿದ್ದು ಇದೇ ವಿಚಾರವಾಗಿ ಮೂವರ ನಡುವೆ ಗಲಾಟೆ ನಡೆದು ಇಬ್ಬರಿಗೆ ಚಾಕು ಇರಿದಿದ್ದಾನೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)