

Recipe: ಇಂದಿನ ದಿನಗಳಲ್ಲಿ ಆದಷ್ಟು ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಅನೇಕ ರೀತಿಯ ಆಹಾರ ಪದಾರ್ಥಗಳು, ಗಿಡಮೂಲಿಕೆಯ ಜ್ಯೂಸ್ ಅಥವಾ ಇನ್ನಿತರ ಪದಾರ್ಥಗಳ ಮೇಲೆ ಅವಲಂಬಿಸಿರುತ್ತಾರೆ. ಇದನ್ನೆಲ್ಲವನ್ನೂ ಸೇವಿಸಿದರೂ ಕೆಲವೊಮ್ಮೆ ದೇಹದಲ್ಲಿ ಯಾವುದೇ ರೀತಿಯಲ್ಲೂ ಬದಲಾವಣೆ ಆಗುವುದಿಲ್ಲ. ಈ ಕಾರಣದಿಂದ ನೀವೇನಾದರೂ ನಿರಾಸೆ ಹೊಂದಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ಈ ಆಹಾರವನ್ನು ಸೇವಿಸಿ ದೇಹದಲ್ಲಿ ತೂಕ ಇಳಿಸಿ...
1. ಮೊಳಕೆ ಕಟ್ಟಿದ ಹೆಸರುಕಾಳು
2. 1 ಕ್ಯಾರೆಟ್
3. 1 ಈರುಳ್ಳಿ
4. 1 ಮೆಣಸಿನಕಾಯಿ
5. ಕೊತ್ತುಂಬರಿ ಸೊಪ್ಪು
6. ರುಚಿಗೆ ಉಪ್ಪು
7. ಸ್ವಲ್ಪ ಖಾರದ ಪುಡಿ
8. ಕಡೆಹಿಟ್ಟು
9. ಸ್ವಲ್ಪ ಧನಿಯಾ ಪುಡಿ
ಮೊದಲು ಒಂದು ಮಿಕ್ಸಿ ಜಾರಿಗೆ ಮೊಳಕೆ ಕಟ್ಟಿದ ಹೆಸರುಕಾಳನ್ನು ಹಾಕಿ ಮಧ್ಯಮ ಗಾತ್ರಕ್ಕೆ ಮಿಕ್ಸಿ ಮಾಡಿಕೊಳ್ಳಿ. ನಂತರ ಅದನ್ನು ಒಂದು ಬೌಲ್ಗೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾರೆಟ್, ಈರುಳ್ಳಿ, ಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು, ಉಪ್ಪು, ಖಾರದಪುಡಿ, ಧನಿಯಾ ಪುಡಿ ಹಾಗೂ ಕಡೆಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಅದಕ್ಕೆ ಸ್ವಲ್ಪ ನೀರು ಬೆರಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಹಂಚಿನ ಮೇಲೆ ಹಾಕಿ ತಟ್ಟಿ ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೂ ಬೇಯಿಸಿರಿ. ನಂತರ ನಿಮಗಿಷ್ಟವಾದ ಚಟ್ನಿಯೊಂದಿಗೆ ಸೇವಿಸಿರಿ.
ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿರುವ ಅಧಿಕವಾದ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.