

train travel; ಭಾರತದ ಪ್ರಮುಖ ಸಾರಿಗೆಯಾಗಿರುವ ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ. ರೈಲುಗಳಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರಿಗೆ ಟಿಕೆಟ್ ಬುಕಿಂಗ್ ಸಮಯದಲ್ಲಿ ಕೆಲವು ರಿಯಾಯಿತಿಗಳನ್ನು ಸಹ ನೀಡಲಾಗುತ್ತದೆ.
ನೀವೇನಾದರೂ ಈ ಬಾರಿಯ ದಸರಾ, ದೀಪಾವಳಿ ರಜಾದಿನಗಳಲ್ಲಿ ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಪ್ಲಾನ್ ಮಾಡುತ್ತಿದ್ದರೆ ಈ ರೈಲ್ವೆಯ ಕೆಲ ಯೋಜನೆಗಳ ಬಗ್ಗೆ ನೀವು ತಿಳಿದಿರಬೇಕಾಗುತ್ತದೆ. ರೈಲ್ವೆ ನಿಯಮಗಳ ಪ್ರಕಾರ, ಯಾವ ವಯಸ್ಸಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಮತ್ತು ಯಾವ ವಯಸ್ಸಿನ ಮಕ್ಕಳಿಗೆ ನೀವು ಅರ್ಧ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿಯೋಣ.
3) ನಿಮ್ಮ ಮಗುವಿಗೆ ಪೂರ್ಣ ಆಸನ ಬೇಕೆಂದು ನೀವು ಬಯಸಿದರೆ, ನೀವು ಅವರಿಗೆ ಪೂರ್ಣ ಟಿಕೆಟ್ ಖರೀದಿಸಬೇಕು.
2) ರೈಲ್ವೆ ನಿಯಮಗಳ ಅನ್ವಯ, ನಿಮ್ಮ ಮಕ್ಕಳು 5 ವರ್ಷದಿಂದ 12 ವರ್ಷ ವಯಸ್ಸಿನವರಾಗಿದ್ದರೆ ನೀವು ಅವರಿಗೆ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕು. ಆದರೆ ಅವರಿಗೆ ಪ್ರತ್ಯೇಕ ಸೀಟ್ ನೀಡಲಾಗುವುದಿಲ್ಲ. ತಮ್ಮ ಮಗುವನ್ನು ತಮ್ಮೊಂದಿಗೆ ಅದೇ ಸೀಟಿನಲ್ಲಿ ಕೂರಿಸಿಕೊಳ್ಳಬೇಕು.
1) ನಿಮ್ಮ ಮಕ್ಕಳು 1 ರಿಂದ 5 ವರ್ಷದೊಳಗಿನವರಾಗಿದ್ದರೆ ನೀವು ಅವರಿಗೆ ಯಾವುದೇ ಟಿಕೆಟ್ ಖರೀದಿಸಬೇಕಾಗಿಲ್ಲ. ಇದರಿಂದ ನಿಮ್ಮ ಮಗು ನಿಮ್ಮೊಂದಿಗೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
6) ರಜಾ ದಿನಗಳಲ್ಲಿ ಕೆಲವೊಮ್ಮೆ ರೈಲುಗಳು ತಡವಾಗಿ ಓಡಬಹುದು. ರೈಲು ಸ್ಥಿತಿಯನ್ನು IRCTC ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಿ.
5) ರಜೆಯ ದಿನಗಳಲ್ಲಿ ರೈಲುಗಳಲ್ಲಿ ಆಹಾರ, ನೀರು ಮತ್ತು ಇತರ ಸೌಕರ್ಯಗಳಿಗೆ ಹೆಚ್ಚಿನ ಬೇಡಿಕೆ ಇರಬಹುದು. ಆದ್ದರಿಂದ, ನೀವೇ ಆಹಾರ ಮತ್ತು ನೀರನ್ನು ಕೊಂಡೊಯ್ಯುವುದು ಒಳ್ಳೆಯದು.
4) ರಜಾ ದಿನಗಳಲ್ಲಿ ರೈಲುಗಳು ತುಂಬಾ ಜನದಟ್ಟಣೆಯಿಂದ ಕೂಡಿರುತ್ತವೆ. ಆದ್ದರಿಂದ IRCTC ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಮುಂಗಡವಾಗಿ ಟಿಕೆಟ್ ಬುಕ್ ಮಾಡಬೇಕು. ರಜಾ ದಿನಗಳಿಗೆ ವಿಶೇಷ ರೈಲುಗಳು ಚಾಲನೆಯಲ್ಲಿರಬಹುದು, ಇದರ ಬಗ್ಗೆ IRCTC ಅಥವಾ ರೈಲ್ವೆ ಸ್ಟೇಷನ್‌ನಲ್ಲಿ ವಿಚಾರಿಸಿಕೊಳ್ಳಿ.
(ಏಜೆನ್ಸೀಸ್)
ಮಕ್ಕಳೊಂದಿಗೆ ಪ್ರಯಾಣಿಸುವಾಗ, ಸಾಮಾನು ಮತ್ತು ಆಹಾರದ ಜೊತೆಗೆ ಸುರಕ್ಷತೆಗೆ ಗಮನ ಕೊಡಿ.
ರಜೆಯ ಸಮಯದಲ್ಲಿ ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಟಿಕೆಟ್ ಚೆಕಿಂಗ್ ಸಮಯದಲ್ಲಿ ಮಗುವಿನ ವಯಸ್ಸಿನ ದಾಖಲೆಯನ್ನು ತೋರಿಸಲು ಸಿದ್ಧವಾಗಿರಿ.