ಭಾರತ ಹಾಗೂ ಚೀನಾ ನಡುವೆ ನೇರ ವಿಮಾನ ಹಾರಾಟಕ್ಕೆ ಒಪ್ಪಿಗೆ | MEA

China America
Published on: 

ನವದೆಹಲಿ; ಭಾರತ ಮತ್ತು ಚೀನಾ 2025 ರ ಅಕ್ಟೋಬರ್ ಅಂತ್ಯದ ವೇಳೆಗೆ ನೇರ ಪ್ರಯಾಣಿಕ ವಿಮಾನಯಾನವನ್ನು ಪುನರಾರಂಭಿಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಸಾಮಾನ್ಯತೆಯನ್ನು ಪುನಃಸ್ಥಾಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

2020ರಲ್ಲಿ ಗಡಿ ಸಂಘರ್ಷ ಮತ್ತು ಕೋವಿಡ್ ಸಾಂಕ್ರಾಮಿಕದ ಬಳಿಕ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವುದು ಮತ್ತು ವಾಯು ಸೇವೆಗಳ ಒಪ್ಪಂದವನ್ನು ಪರಿಷ್ಕರಿಸುವ ಕುರಿತು ಈ ವರ್ಷದ ಆರಂಭದಿಂದ ಎರಡೂ ಕಡೆಯವರು ತಾಂತ್ರಿಕ ಮಟ್ಟದ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಹೀಗಾಗಿ ಆರಂಭದಿಂದಲೂ ನಡೆದ ಹಲವು ಸುತ್ತಿನ ತಾಂತ್ರಿಕ ಮಟ್ಟದ ಮಾತುಕತೆಗಳು ಯಶಸ್ವಿಯಾಗಿವೆ ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ಮತ್ತು ಚೀನಾದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಸಂಪರ್ಕಿಸುವ ನೇರ ವಿಮಾನ ಸೇವೆಗಳು ಪುನರಾರಂಭಗೊಳ್ಳಬಹುದು ಎಂದು ಈಗ ಒಪ್ಪಿಕೊಳ್ಳಲಾಗಿದೆ. ಇದು ಎರಡೂ ದೇಶಗಳಿಂದ ಗೊತ್ತುಪಡಿಸಿದ ವಿಮಾನಯಾನ ಸಂಸ್ಥೆಗಳ ವಾಣಿಜ್ಯ ನಿರ್ಧಾರ ಮತ್ತು ಎಲ್ಲಾ ಕಾರ್ಯಾಚರಣೆಯ ಮಾನದಂಡಗಳಿಗೆ ಒಳಪಟ್ಟಿರುತ್ತದೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

(ಏಜೆನ್ಸೀಸ್)

ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸುತ್ತಿದ್ದಂತೆ ಇಂಡಿಗೋ, ಭಾರತ ಮತ್ತು ಚೀನಾ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸುವುದಾಗಿ ಘೋಷಿಸಿದೆ. 2025 ರ ಅಕ್ಟೋಬರ್ 26 ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝೌ (CAN) ಗೆ ದೈನಂದಿನ ತಡೆರಹಿತ ವಿಮಾನಗಳನ್ನು ನೀಡುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಗಡಿಯಾಚೆಗಿನ ವ್ಯಾಪಾರವನ್ನು ಹೆಚ್ಚಿಸುವುದು, ವ್ಯಾಪಾರ ಸಂಬಂಧಗಳನ್ನು ಬಲಪಡಿಸುವುದು ಮತ್ತು ಎರಡೂ ದೇಶಗಳ ನಡುವೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ವಿಮಾನಯಾನ ಸಂಸ್ಥೆಯು ತನ್ನ ಏರ್‌ಬಸ್ A320neo ವಿಮಾನವನ್ನು ಬಳಸಿಕೊಂಡು ಈ ಮಾರ್ಗಗಳನ್ನು ನಿರ್ವಹಿಸಲಿದೆ.