ನೀವು ಮಲಗಿ ಎದ್ದಾಗ ಬೆನ್ನು ನೋವಿನ ಸಮಸ್ಯೆಗಳು ಕಾಣಿಸುತ್ತಿವೆಯಾ? ಹಾಗಿದ್ದರೆ ಈ ರೀತಿ ಮಲಗಬೇಡಿ | Sleeping positions

Sleeping On The Floor
Published on

Sleeping positions: ನೀವು ದಿನನಿತ್ಯ ಮಲಗುವ ಕೆಲವು ಭಂಗಿಗಳು ಕುತ್ತಿಗೆ ಮತ್ತು ಬೆನ್ನಿನ ಮೇಲೆ ಒತ್ತಡವನ್ನು ಹೆಚ್ಚಿಸಿ, ನೋವು ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು. ಈ ಭಂಗಿಗಳು ದೇಹದ ಸಹಜ ಜೋಡಣೆಯನ್ನು ತಪ್ಪಿಸುತ್ತವೆ. ಇದರಿಂದ ಸ್ನಾಯುಗಳು, ಕೀಲುಗಳು ಮತ್ತು ಬೆನ್ನುಹುರಿಯ ಮೇಲೆ ಒತ್ತಡ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಕೆಳಗೆ ನೀಡಿದ ಕೆಲವು ಭಂಗಿಗಳಲ್ಲಿ ಮಲಗುವುದರಿಂದ ಈ ರೀತಿಯ ಸಮಸ್ಯೆಗಳು ಕಂಡುಬರುತ್ತವೆ:

ಹೊಟ್ಟೆಯ ಮೇಲೆ ಮಲಗುವುದು

ಈ ಭಂಗಿಯು ಕುತ್ತಿಗೆ ಮತ್ತು ಬೆನ್ನಿಗೆ ಅತ್ಯಂತ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಹೊಟ್ಟೆಯ ಮೇಲೆ ಮಲಗುವಾಗ, ತಲೆಯನ್ನು ಒಂದು ಬದಿಗೆ ತಿರುಗಿಸಬೇಕಾಗುತ್ತದೆ. ಇದರಿಂದ ಕುತ್ತಿಗೆಯ ಸ್ನಾಯುಗಳು ಒತ್ತಡಕ್ಕೊಳಗಾಗುತ್ತವೆ. ಇದು ಕುತ್ತಿಗೆಯ ಜೋಡಣೆಯನ್ನು ತಪ್ಪಿಸಿ, ನೋವು ಅಥವಾ ಗಟ್ಟಿತನಕ್ಕೆ ಕಾರಣವಾಗುತ್ತದೆ. ಜೊತೆಗೆ, ಈ ಭಂಗಿಯು ಬೆನ್ನುಹುರಿಯ ಸಹಜ ವಕ್ರತೆಯನ್ನು ಹಾಳು ಮಾಡುತ್ತದೆ. ವಿಶೇಷವಾಗಿ ಕೆಳ ಬೆನ್ನಿನ ಮೇಲೆ ಒತ್ತಡವನ್ನುಂಟುಮಾಡುತ್ತದೆ. ದೀರ್ಘಕಾಲ ಈ ಭಂಗಿಯಲ್ಲಿ ಮಲಗುವುದರಿಂದ ಬೆನ್ನುನೋವು ಉಲ್ಬಣಗೊಳ್ಳಬಹುದು.

ತಲೆಯನ್ನು ಎತ್ತರದ ದಿಂಬಿನ ಮೇಲೆ ಇಡುವುದು

ಎತ್ತರದ ದಿಂಬು ಅಥವಾ ತುಂಬಾ ಕೆಳಗಿರುವ ದಿಂಬನ್ನು ಬಳಸಿ ಮಲಗುವುದರಿಂದ ಕುತ್ತಿಗೆಯ ಜೋಡಣೆ ತಪ್ಪುತ್ತದೆ. ತಲೆಯನ್ನು ತುಂಬಾ ಎತ್ತರಕ್ಕೆ ಇಡುವುದರಿಂದ ಕುತ್ತಿಗೆ ಮುಂದಕ್ಕೆ ಬಲವಾಗಿ, ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ. ಇದೇ ರೀತಿ, ತುಂಬಾ ತೆಳುವಾದ ದಿಂಬು ಕುತ್ತಿಗೆಗೆ ಸಾಕಷ್ಟು ಬೆಂಬಲ ನೀಡದೆ, ನೋವನ್ನು ಉಂಟುಮಾಡಬಹುದು.

ಒಂದೇ ಬದಿಯಲ್ಲಿ ಮಲಗುವುದು

ಒಂದು ಬದಿಯಲ್ಲಿ ಮಲಗುವಾಗ ಒಂದು ಭುಜವು ತುಂಬಾ ಒತ್ತಡಕ್ಕೊಳಗಾಗುತ್ತದೆ. ವಿಶೇಷವಾಗಿ ಸರಿಯಾದ ದಿಂಬಿನ ಬೆಂಬಲವಿಲ್ಲದಿದ್ದರೆ ಈ ತೊಂದರೆಯನ್ನು ಅನಭವಿಸಬೇಕಾಗುತ್ತದೆ. ಇದರಿಂದ ಕುತ್ತಿಗೆ ಮತ್ತು ಭುಜದ ಸ್ನಾಯುಗಳಲ್ಲಿ ಗಟ್ಟಿತನ ಉಂಟಾಗಬಹುದು. ಜೊತೆಗೆ, ಒಂದು ಕಾಲನ್ನು ಮೇಲಕ್ಕೆತ್ತಿ ಮಲಗುವುದರಿಂದ ಸೊಂಟದ ಜೋಡಣೆ ತಪ್ಪಿ, ಕೆಳಬೆನ್ನಿನ ಮೇಲೆ ಒತ್ತಡ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.

ಕುರ್ಚಿ ಅಥವಾ ಕುಂಗಿದ ಭಂಗಿಯಲ್ಲಿ ಮಲಗುವುದು

ಕುರ್ಚಿ ಅಥವಾ ಕುಂಗಿದ ಭಂಗಿಯಲ್ಲಿ ಮಲಗುವುದರಿಂದ ಬೆನ್ನುಹುರಿಯ ಸಹಜ ಆಕಾರವು ಕೆಡುತ್ತದೆ. ಇದರಿಂದ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಅಸಮರ್ಪಕ ಒತ್ತಡ ಬೀಳುತ್ತದೆ. ಇದು ದೀರ್ಘಕಾಲಿಕ ನೋವಿಗೆ ಕಾರಣವಾಗಿ ಪರಿಣಾಮ ಬೀರುತ್ತದೆ.

ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರಗಳೇನು?

* ಬೆನ್ನಿನ ಮೇಲೆ ಮಲಗುವುದು ಅಥವಾ ಬದಿಯಲ್ಲಿ ಮಲಗುವುರಿಂದ ಸಹಜ ಜೋಡಣೆಯನ್ನು ಕಾಪಾಡಿ ಬೆನ್ನಿನ ನೋವುಗಳನ್ನು ಕಡಿಮೆ ಮಾಡುತ್ತದೆ.

* ಸರಿಯಾದ ರೀತಿಯಲ್ಲಿರುವ ದಿಂಬುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

* ಮಲಗುವ ಮುಂಚರ ಸೌಮ್ಯವಾದ ವ್ಯಾಯಾಮಗಳನ್ನು ಮಾಡುವುದರಿಂದ ಇವು ಸ್ನಾಯುಗಳನ್ನು ಶಾಂತಗೊಳಿಸುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net