ರಾತ್ರಿ ಹೊತ್ತು ಆಗಾಗ ಟಾಯ್ಲೆಟ್​ಗೆ​ ಹೋಗುತ್ತೀರಾ? ಇದು ಕೇವಲ ಅಭ್ಯಾಸವಲ್ಲ ಒಂದು ಕಾಯಿಲೆ ಎಚ್ಚರ!

Toilet

ನಮ್ಮ ದೇಹದಲ್ಲಿರುವ ತ್ಯಾಜ್ಯ, ಬರೀ ತ್ಯಾಜ್ಯವಲ್ಲ ಅದು ನಮ್ಮ ಆರೋಗ್ಯ ಸ್ಥಿತಿಯ ಸಂಕೇತ. ಮಲವಿಸರ್ಜನೆಯನ್ನು ಸರಿಯಾಗಿ ಮಾಡದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಗಾಗ ಶೌಚಕ್ಕೆ ಹೋಗುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಕಾಲಕಾಲಕ್ಕೆ ದೇಹದಿಂದ ಹೊರ ಹೋಗುತ್ತವೆ. ಇದರಿಂದ ನಮ್ಮ ದೇಹವೂ ಆರೋಗ್ಯವಾಗಿರುತ್ತದೆ. ಆದರೆ, ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅದು ದೇಹದಲ್ಲಿನ ಕೆಲ ಗಂಭೀರ ಸಮಸ್ಯೆಗಳ ಕಾರಣದಿಂದ ಆಗಿರಬಹುದು. ರಾತ್ರಿಯಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡುವುದನ್ನು ವೈದ್ಯಕೀಯವಾಗಿ ನೋಕ್ಟುರಿಯಾ ಎಂದು ಕರೆಯಲಾಗುತ್ತದೆ. ಇದು ಎಲ್ಲ ವಯಸ್ಸಿನ ಜನರನ್ನು ಬಾಧಿಸುವ ಸಾಮಾನ್ಯ ಸಮಸ್ಯೆಯಾಗಿದೆ.

ಈ ಸಮಸ್ಯೆ ಇರುವವರಿಗೆ ರಾತ್ರಿಯಲ್ಲಿ ನೆಮ್ಮದಿಯ ನಿದ್ದೆ ಬರುವುದಿಲ್ಲ. ರಾತ್ರಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಮೂತ್ರ ವಿಸರ್ಜಿಸಲು ಎದ್ದೇಳುವುದು ಸಮಸ್ಯೆಯಲ್ಲ. ಆದರೆ ಅದಕ್ಕೂ ಮೀರಿ ಎಚ್ಚರವಾದರೆ ದೇಹದಲ್ಲಿ ಅಪಾಯಕಾರಿ ಕಾಯಿಲೆ ಇರುವ ಸೂಚನೆಯಾಗಿದೆ.

ರಾತ್ರಿಯಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಗೆ ಮಧುಮೇಹ ಬರುವ ಸಾಧ್ಯತೆಯಿದೆ. ಏಕೆಂದರೆ, ಇದು ಮಧುಮೇಹದ ಪ್ರಾಥಮಿಕ ಲಕ್ಷಣಗಳಲ್ಲಿ ಒಂದಾಗಿದೆ. ಏಕೆಂದರೆ ಮೂತ್ರಪಿಂಡಗಳು ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯನ್ನು ತೆಗೆದುಹಾಕಲು ಮತ್ತು ಮೂತ್ರವನ್ನು ಹೊರಹಾಕಲು ದಣಿವರಿಯಿಲ್ಲದೆ ಕೆಲಸ ಮಾಡುತ್ತವೆ. ರಾತ್ರಿ ವೇಳೆ ಈ ಸಮಸ್ಯೆ ಬಂದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ನಡೆಸಿ, ಚಿಕಿತ್ಸೆ ಪಡೆಯಿರಿ.

ನೀವು ರಾತ್ರಿ ವೇಳೆ ಪದೇಪದೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ, ಮೂತ್ರನಾಳದ ಸೋಂಕು ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಯುಟಿಐ ಎನ್ನುವುದು ಬ್ಯಾಕ್ಟೀರಿಯಾಗಳು ಮೂತ್ರನಾಳವನ್ನು ಪ್ರವೇಶಿಸಿದಾಗ ಅಲ್ಲಿ ಉಂಟಾಗುವ ಸ್ಥಿತಿಯಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಆರಂಭದಲ್ಲಿ ಅತಿಯಾದ ಮೂತ್ರ ವಿಸರ್ಜನೆ, ನೋವು ಅಥವಾ ಕಿರಿಕಿರಿಯನ್ನು ಅನುಭವಿಸಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಯುಟಿಐ ಮೂತ್ರದಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇದು ಮೂತ್ರಪಿಂಡದ ಸೋಂಕುಗಳು ಅಥವಾ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೂತ್ರಕೋಶದ ಅತಿಯಾದ ಚಟುವಟಿಕೆ ಹೊಂದಿರುವ ಜನರು ಕೂಡ ರಾತ್ರಿಯಲ್ಲಿ ಆಗಾಗ ಮೂತ್ರ ವಿಸರ್ಜನೆ ಅನುಭವಿಸುತ್ತಾರೆ. ಈ ಸಮಸ್ಯೆ ಇರುವ ಕೆಲವರಿಗೆ ಪದೇಪದೆ ಮೂತ್ರ ವಿಸರ್ಜನೆಯ ಪ್ರಚೋದನೆ ಇರುತ್ತದೆ. ಕೆಲವರಿಗೆ ಮೂತ್ರ ವಿಸರ್ಜಿಸಲು ಹಂಬಲವಿದ್ದರೂ ಮೂತ್ರ ವಿಸರ್ಜನೆ ಮಾಡಲು ಆಗುವುದಿಲ್ಲ. ಏಕೆಂದರೆ ಮೂತ್ರಕೋಶವು ಸಂಕುಚಿತಗೊಂಡಾಗ ಈ ಸಮಸ್ಯೆ ಉಂಟಾಗುತ್ತದೆ. ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬ ನಿರ್ದಿಷ್ಟ ನರವೈಜ್ಞಾನಿಕ ಸ್ಥಿತಿಯಿಂದ ಮೂತ್ರಕೋಶದ ಅತಿಯಾದ ಚಟುವಟಿಕೆ ಉಂಟಾಗುತ್ತದೆ. ಈ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ ಅದು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಕೂಡ ರಾತ್ರಿಯಲ್ಲಿ ಆಗಾಗ ಮೂತ್ರ ವಿಸರ್ಜನೆಗೆ ಕಾರಣವಾಗಿದೆ. ಈ ಕಾಯಿಲೆಯು ದೇಹದಲ್ಲಿ ಹೆಚ್ಚುವರಿ ದ್ರವ ಮತ್ತು ತ್ಯಾಜ್ಯಗಳನ್ನು ಉಂಟುಮಾಡುತ್ತದೆ. ಇದು ಆಗಾಗ ಮೂತ್ರ ವಿಸರ್ಜನೆಯನ್ನು ಪ್ರೇರೇಪಿಸುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಒಂಟಿ ಕಾಲಿನ ಮೇಲೆ ನೀವು ಇಷ್ಟು ಸೆಕೆಂಡ್ ನಿಲ್ಲಲೇಬೇಕು! ಇಲ್ಲವಾದಲ್ಲಿ ಸಾವು ಸಮೀಪಿಸುತ್ತಿದೆ ಎಂದರ್ಥ

ಬಾಬರ್​ ಅಜಾಮ್ ನಕಲಿ ನಿವೃತ್ತಿ! ಸ್ಟಾರ್​ ಕ್ರಿಕೆಟಿಗನ ವಿರುದ್ಧ ಸಿಡಿದೆದ್ದ ಪಾಕ್​ ಕ್ರೀಡಾಭಿಮಾನಿಗಳು

Share This Article

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…