ಎಚ್ಚರ... ನಿಮ್ಮ ಪ್ರದೇಶದ ಸುತ್ತಮುತ್ತ ಈ ಲಕ್ಷಣಗಳು ಕಂಡುಬಂದರೆ ಅಲ್ಲಿ ಕಾಳಿಂಗ ಸರ್ಪ ಇದೆ ಎಂದರ್ಥ! King Cobra

King cobra
Published on

King Cobra : ಕಾಳಿಂಗ ಸರ್ಪವನ್ನು ನೋಡಿದರೆ ಸಾಕು ಒಂದು ಕ್ಷಣ ಮೈಯೆಲ್ಲ ಗಢಗಢ ನಡುಗುತ್ತದೆ. ಭಯಕ್ಕೆ ಇನ್ನೊಂದು ಹೆಸರೇ ಕಾಳಿಂಗ ಸರ್ಪ. ತನ್ನ ಉದ್ದವಾದ ದೇಹ ಮತ್ತು ಸ್ಥಿರವಾದ ನೋಟದಿಂದಲೇ ಎಲ್ಲರನ್ನು ಭಯ ಬೀಳಿಸುತ್ತದೆ. ಎಡೆಯನ್ನು ಬಿಚ್ಚಿ 19 ಅಡಿ ಎತ್ತರದವರೆಗೂ ಭವ್ಯವಾಗಿ ನಿಲ್ಲುವ ಈ ಜಾತಿಯ ಹಾವು ತನ್ನ ಗಾಂಭೀರ್ಯತೆಯಿಂದಲೇ ಹಾವುಗಳ ರಾಜ ಎಂಬ ಬಿರುದನ್ನು ಪಡೆದುಕೊಂಡಿದೆ. ಈ ಕಾಳಿಂಗ ಸರ್ಪ ತೀವ್ರ ಸ್ವರೂಪದ ವಿಷ ಹೊಂದಿರುವ ಹಾವುಗಳಾಗಿದ್ದು, ಬಲು ಅಪಾಯಕಾರಿಯಾಗಿವೆ.

ಜಗತ್ತಿನಲ್ಲೇ ಅತಿ ಉದ್ದದ ವಿಷಪೂರಿತ ಹಾವಾಗಿರುವ ಕಾಳಿಂಗ ಸರ್ಪ ಕಚ್ಚಿದರೆ ಸಾಕ ಸಾವು ಖಚಿತ. ಒಂದು ಬೃಹತ್​ ಆನೆಯನ್ನು ಸಹ ಕೊಲ್ಲುವಷ್ಟು ವಿಷವನ್ನು ಈ ಹಾವು ಹೊಂದಿರುತ್ತದೆ. ಈ ಹಾವಿನ ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ ಇದು ಸುಮ್ಮನೇ ಯಾರ ಮೇಲೆಯೂ ದಾಳಿ ಮಾಡುವುದಿಲ್ಲ. ಯಾವಾಗ ತನ್ನ ಜೀವಕ್ಕೆ ಅಪಾಯವಿದೆ ಎಂದು ಭಾವಿಸಿದಾಗ ಮಾತ್ರ ವಿಷವನ್ನು ಬಿಡುಗಡೆ ಮಾಡುತ್ತದೆ. ಕಾಳಿಂಗ ಸರ್ಪವನ್ನು ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ ಹಾವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

King Cobra

ಅಂದಹಾಗೆ, ಒಳನಾಡಿನ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಳಿಂಗ ಸರ್ಪವು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಇನ್ನು ಮುಂಬರುವ ತಿಂಗಳುಗಳಲ್ಲಿ ಹಾವುಗಳು ಹೆಚ್ಚಾಗಿ ಮಿಲನ ಕ್ರಿಯೆಯಲ್ಲಿ ತೊಡಗುತ್ತವೆ. ಇದರ ನಡುವೆ ಕೇರಳದ ಅರಣ್ಯ ಇಲಾಖೆಯ ಹಾವುಗಳ ನೋಡಲ್ ಅಧಿಕಾರಿ ಮುಹಮ್ಮದ್ ಅನ್ವರ್ ಅವರು ಹಾವುಗಳ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ಬಹಿರಂಗಪಡಿಸಿದ್ದಾರೆ.

ಕೇರಳ ಮತ್ತು ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಪೂರಿತ ಹಾವುಗಳೆಂದರೆ, ನಾಗರಹಾವುಗಳು, ಮಂಡಲ ಹಾವುಗಳು ಮತ್ತು ಕಾಳಿಂಗ ಸರ್ಪಗಳು. ಇದರಲ್ಲಿ ಕಾಳಿಂಗ ಸರ್ಪಗಳಿಗೆ ಯಾವುದೇ ವಿಷ ನಿವಾರಕ ಇನ್ನೂ ಲಭ್ಯವಿಲ್ಲ. ಈ ಹಾವುಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವುದಿಲ್ಲ. ಅವು ಹೆಚ್ಚಾಗಿ ಮಿಲನದ ಸಮಯದಲ್ಲಿ ಮಾತ್ರ ಪ್ರಯಾಣಿಸುತ್ತವೆ. ಹೆಣ್ಣು ಹಾವುಗಳ ಫೆರೋಮೋನ್ ಆಕರ್ಷಣೆಯಿಂದಾಗಿ ಗಂಡು ಕಾಳಿಂಗ ಸರ್ಪಗಳು ಕಿಲೋಮೀಟರ್‌ಗಳಷ್ಟು ಪ್ರಯಾಣಿಸುತ್ತವೆ. ಈ ವೇಳೆ ಗ್ರಾಮೀಣ ಪ್ರದೇಶಗಳನ್ನು ಸಹ ಹಾದು ಹೋಗಬಹುದು.

ಅಂದಹಾಗೆ, ಹೆಣ್ಣು ಹಾವುಗಳು ಕೂಡ ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಹಾವುಗಳಲ್ಲ. ಈ ಹಾವುಗಳು ಸಾಮಾನ್ಯವಾಗಿ ಕಚ್ಚುವುದಿಲ್ಲ. ಆದರೆ, ತನಗೆ ಅಪಾಯ ಇದೆ ಎಂದು ಅರಿತಾಗ ಮಾತ್ರ ಕಚ್ಚಲು ಪ್ರಯತ್ನಿಸುತ್ತವೆ. ಒಂದು ಪ್ರದೇಶಕ್ಕೆ ಕಾಳಿಂಗ ಸರ್ಪ ಪ್ರವೇಶ ಮಾಡಿದಾಗ, ಅಲ್ಲಿ ಹಲವು ಲಕ್ಷಣಗಳು ಅಥವಾ ಸಂಕೇತಗಳು ಕಂಡುಬರುತ್ತವೆ. ಕಾಗೆಗಳು ಗುಂಪು ಗುಂಪಾಗಿ ಕೂಗುವುದು ಮತ್ತು ನಾಯಿಗಳು ಬೊಗಳುವುದು ಕೂಡ ಈ ಸಂಕೇತಗಳಲ್ಲಿ ಸೇರಿವೆ.

ಅಂದಹಾಗೆ, ಹಾವುಗಳು ಅಡಗಿಕೊಳ್ಳಬಲ್ಲ ಜೀವಿಗಳು. ಆದರೆ, ಮಿಲನ ಸಮಯ ಬಂದಾಗ, ಅವು ಹೊರಗೆ ಹೋಗುತ್ತವೆ. ಮಿಲನ ಸಮಯವು ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹಾವು ಕಚ್ಚುವ ಸಾಧ್ಯತೆಯೂ ಇದೆ. ಏಕೆಂದರೆ ಹಗಲಿನಲ್ಲಿ ಮಾತ್ರ ಚಲಿಸುವ ಹಾವುಗಳು ರಾತ್ರಿಯೂ ಚಲಿಸಲು ಪ್ರಾರಂಭಿಸುತ್ತವೆ. ಆದ್ದರಿಂದ, ನೀವು ಹೆಚ್ಚು ಜಾಗರೂಕರಾಗಿರಬೇಕು. ಮಿಲನವು ಹೆಚ್ಚಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಡೆಯುತ್ತದೆ.

ಮರಿ ಹಾವುಗಳ ವಿಷವು ಪ್ರಬಲವಾಗಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ಸಮಯದಲ್ಲಿ ಸಾಕುಪ್ರಾಣಿಗಳನ್ನು ಸಹ ನೋಡಿಕೊಳ್ಳಬೇಕು. ಏಕೆಂದರೆ ಅವು ಸಣ್ಣ ಹಾವುಗಳನ್ನು ಹಿಡಿದು ಮನೆಗೆ ತರುವ ಸಾಧ್ಯತೆ ಇರುತ್ತದೆ. ಅರಣ್ಯ ಇಲಾಖೆಯು ತಾನು ಹಿಡಿಯುವ ಹಾವುಗಳನ್ನು ಸುರಕ್ಷಿತವಾಗಿ ಬಿಡುತ್ತಿದೆ. ವಿಷಪೂರಿತ ಹಾವುಗಳನ್ನು ಕಾಡಿನ ಒಳಗೆ ಕರೆದೊಯ್ದು ಬಿಡಲಾಗುತ್ತದೆ. ನಾಗರಹಾವಿನ ಜೀವಿತಾವಧಿಯನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಇನ್ನೂ ಯಾವುದೇ ಅಧ್ಯಯನಗಳು ನಡೆದಿಲ್ಲ. ನಾಗರಹಾವಿನ ವಯಸ್ಸನ್ನು ಅದರ ಉದ್ದದಿಂದ ಎಂದಿಗೂ ನಿರ್ಧರಿಸಲಾಗುವುದಿಲ್ಲ ಎಂದು ಮುಹಮ್ಮದ್ ಅನ್ವರ್ ಅವರು ಸುದೀರ್ಘವಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net